‘ಮದಗಜ’ದ ಬಜೆಟ್ 25 ಕೋಟಿ ರೂಪಾಯಿ : ಗಳಿಸಿದ್ದೆಷ್ಟು…?
ಈ ತಿಂಗಳ ಆರಂಭದಲ್ಲಿ ( ಡಿ.03) ಅದ್ಧೂರಿಯಾಗಿ ಚಿತ್ರಮಂದಿರಗಳಿಗೆ ಎಂಟ್ರಿಕೊಟ್ಟ ರೋರಿಂಗ್ ಸ್ಟಾರ್ ಶ್ರೀಮುರಳಿಯ ಮಾಸ್ ಸಿನಿಮಾ ಮದಗಜ… ಥಿಯೇಟರ್ ಗಳಲ್ಲಿ ಧೂಳೆಬ್ಬಿಸಿದೆ..
25 ಕೋಟಿ ವೆಚ್ಚದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿಯೂ ಚಿಂದಿ ಉಡಾಯಿಸಿದೆ.. ಇನ್ನೂವರೆಗೂ ಮದಗಜ ಸಿನಿಮಾ ಥಿಯೇಟರ್ ಗಳಲ್ಲಿ ಅದ್ಧೂರಿ ಪ್ರದರ್ಶನ ಕಾಣ್ತಿದೆ..
ಮದಗಜ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭಾರಿಯಾಗಿಯೇ ಸೌಂಡ್ ಮಾಡಿದೆ.. 50 ಕೋಟಿಗಿಂತಲೂ ಹೆಚ್ಚು ಗಳಿಸಿದೆ ಎನ್ನಲಾಗ್ತಿದೆ..
ಈ ಸಿನಿಮಾದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರುಳಿ ಸಖತ್ ಮಾಸ್ ಲುಕ್ ನಲ್ಲಿ ದರ್ಶನ ನೀಡಿದ್ರೆ , ಗರುಡ ರಾಮ್ , ಜಗಪತಿ ಬಾಬು ಟೆರರ್ ಆಗಿ ಕಾಣಿಸಿಕೊಂಡಿದ್ದಾರೆ.. ನಾಯಕಿ ಆಶಿಕಾ ರಂಗನಾಥ್ ಪಕ್ಕಾ ಹಳ್ಳಿ ಹುಡುಗಿಯಾಗಿ ದರ್ಶನ ನೀಡಿದ್ದಾರೆ.. ಮಾಸ್ ಜೊತೆಗೆ ತಾಯಿ ಸೆಂಟಿಮೆಂಟ್ ಸಿನಿಮಾದ ಹೈಲೇಟ್ ಆಗಿದೆ.. ಮುಂದೆ ಶ್ರೀಮುರುಳಿ ಪ್ರಶಾಂತ್ ನೀಲ್ ಅವರು ಬರೆದ ಕಥೆಯಾಗಿರುವ ‘ಭಗೀರ’ ಸಿನಿಮಾದಲ್ಲಿ ಸಂಪೂರ್ಣವಾಗಿ ಬ್ಯುಸಿಯಾಗಲಿದ್ದಾರೆ..
ಮಯಾಂಕ್ ಅಗರ್ ವಾಲ್ ಕನ್ನಡದ ಈ ಇಬ್ಬರು ನಟರ ಅಭಿಮಾನಿಯಂತೆ..!