ಮಯಾಂಕ್ ಅಗರ್ ವಾಲ್ ಕನ್ನಡದ ಈ ಇಬ್ಬರು ನಟರ ಅಭಿಮಾನಿಯಂತೆ..!
ಬೆಂಗಳೂರು : ಸಿನಿಮಾರಂಗಕ್ಕೂ ಕ್ರಿಕೆಟ್ ಗೂ ನಡುವೆ ಸದಾ ಒಂದು ಸಣ್ಣ ಕನೆಕ್ಷನ್ ಇದ್ದೇ ಇರುತ್ತೆ.. ಅಂತೆಯೇ ಕ್ರಿಕೆಟಿಗರು ಸಿನಿಮಾರಂಗದವರ ಫ್ಯಾನ್ಸ್ , ಸಿನಿಮಾರಂಗದವರು ಕ್ರಿಕೆಟ್ ಸ್ಟಾರ್ ಗಳ ಅಭಿಮಾನಿಗಳೂ ಆಗಿರುತ್ತಾರೆ.. ಉದಾಹರಣೆಗೆ ನಮ್ಮ ಕಿಚ್ಚ ಸುದೀಪ್ ಅವರಿಗೆ ಕ್ರಿಕೆಟ್ ಮೇಲಿನ ಒಲವು ಎಂಥಹದ್ದು ಅಂತ ಎಲ್ರಿಗೂ ಗೊತ್ತೇ ಇದೆ.. ಕಿಚ್ಚ ಕ್ರಿಕೆಟ್ ಫ್ಯಾನ್.. ಅದ್ರಲ್ಲೂ RCB ಫ್ಯಾನ್.. ಅಂತೆಯೇ ಕ್ರಿಕೆಟಿಗರೂ ತಾರೆಯರ ಫ್ಯಾನ್ ಗಳಿದ್ದಾರೆ..
ಇದೀಗ ಟೀಮ್ ಇಂಡಿಯಾದ ಟಾಪ್ ಬ್ಯಾಟ್ಸ್ ಮ್ಯಾನ್ ಆಗಿರುವ ಮಯಾಂಕ್ ಅಗರ್ವಾಲ್ ಕನ್ನಡ ತಮ್ಮ ನೆಚ್ಚಿನ ನಟರ ಬಗ್ಗೆ ಹೇಳಿಕೊಂಡಿದ್ದಾರೆ.. ತಮ್ಮ ಫೇವರೇಟ್ ನಟರು ಅಂತ ಇಬ್ಬರ ಹೆಸರುಗಳನ್ನ ರಿವೀಲ್ ಮಾಡಿದ್ದಾರೆ..
ಹಾಗಾದ್ರೆ ಮಯಾಂಕ್ ಅಗರ್ವಾಲ್ ಅವರ ಕನ್ನಡದ ಫೇವರೇಟ್ ನಟರು ಯಾರು..?
ಕರ್ನಾಟಕ ಈ ಕ್ರಿಕೆಟಿಗನಿಗೆ ಯಶ್ ಮತ್ತೆ ಕಿಚ್ಚ ಸುದೀಪ್ ಫೇವರೇಟ್ ನಟರಂತೆ.. ಹೌದು.. ಇನ್ಸ್ಟಾಗ್ರಾಂನಲ್ಲಿ ತನ್ನ ಅಭಿಮಾನಿಗಳಿಗೆ ಪ್ರಶ್ನೆ ಕೇಳುವಂತೆ ಆಹ್ವಾನ ನೀಡಿದ್ದರು. ಈ ವೇಳೆ ಅಭಿಮಾನಿಯೊಬ್ಬ ನೀವು ಇಷ್ಟ ಪಡುವ ಕನ್ನಡದ ಅಚ್ಚು ಮೆಚ್ಚಿನ ನಟ ಯಾರು ಎಂದು ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ಮಯಾಂಕ್ ಅಗರ್ವಾಲ್ ಕನ್ನಡದಲ್ಲಿ ಕಿಚ್ಚ ಸುದೀಪ್ ಹಾಗೂ ಯಶ್ ಅಚ್ಚುಮೆಚ್ಚಿನ ನಟರು ಎಂದು ಹೇಳಿದ್ದಾರೆ. ಇದು ಯಶ್ ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಖತ್ ಖುಷಿ ಕೊಟ್ಟಿದೆ..
ಅಂದ್ಹಾಗೆ ಮಯಾಂಕ್ ಅಗರ್ವಾಲ್ ಟೀಮ್ ಇಂಡಿಯಾ ಟಾಪ್ ಆರ್ಡರ್ ಬ್ಯಾಟ್ಸ್ಮ್ಯಾನ್. ಟೆಸ್ಟ್ ಹಾಗೂ ಏಕ ದಿನ ಪಂದ್ಯಗಳಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಈ ಆಟಗಾರ ಸದ್ಯ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಮಿಂಚುತ್ತಿದ್ದಾರೆ. ಅಲ್ಲದೇ ಕರ್ನಾಟಕದ ಹೆಮ್ಮೆ ಕೂಡ..