ADVERTISEMENT
Sunday, July 13, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಶಿರಾಕ್ಕೆ ಮದಲೂರು ಕೆರೆ ನೀರು, ಶಿಕಾರಿಪುರ ಮಾದರಿ ಅಭಿವೃದ್ಧಿ: ಸಿಎಂ ಬಿಎಸ್‍ವೈ ಭರವಸೆಗಳ ಸುರಿಮಳೆ..!

Kariyappa N by Kariyappa N
October 30, 2020
in Newsbeat, Politics, Samagra karnataka, ರಾಜ್ಯ
bsy campain sira
Share on FacebookShare on TwitterShare on WhatsappShare on Telegram

ತುಮಕೂರು: ಉಪಚುನಾವಣೆ ಅಖಾಡಕ್ಕೆ ಮೊದಲ ಬಾರಿಗೆ ಧುಮುಕಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಶಿರಾ ಕ್ಷೇತ್ರದ ಮತದಾರರಿಗೆ ಭರವಸೆಗಳ ಸುರಿಮಳೆಗೈದಿದ್ದಾರೆ.
ಬೆಳಿಗ್ಗೆ 11ಗಂಟೆಗೆ ಶಿರಾ ತಾಲೂಕಿನ ಮದಲೂರಿಗೆ ಆಗಮಿಸಿದ ಸಿಎಂ ಯಡಿಯೂರಪ್ಪ, ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್‍ಗೌಡ ಪರ ಪ್ರಚಾರ ಮಾಡಿದರು. ಈ ವೇಳೆ ಮಾತನಾಡಿದ ಅವರು, ಮದಲೂರು ಕೆರೆ ಕಾಲುವೆ ನಿರ್ಮಾಣಕ್ಕೆ ಅನುದಾನ ನೀಡಿರುವುದೇ ನಾನು. 6 ತಿಂಗಳಲ್ಲಿ ಕೆರೆ ತುಂಬಿಸಿ ನಾನೇ ಉದ್ಘಾಟಿಸುತ್ತೇನೆ. ಯಡಿಯೂರಪ್ಪ ನೀಡಿದ ಭರವಸೆ ಹುಸಿಯಾಗುವುದಿಲ್ಲ ಎಂದು ಅಭಯ ನೀಡಿದರು.

madaluru canal sira
ಭದ್ರಾ ಮೇಲ್ದಂಡೆ ಯೋಜನೆಯಿಂದ ಶಿರಾ ತಾಲೂಕಿನ 60 ಕೆರೆಗಳನ್ನು ತುಂಬಿಸುವ ಕೆಲಸ ಮಾಡುತ್ತೇನೆ. ಸ್ತ್ರೀಶಕ್ತಿ ಸಂಘಗಳ ಬಲವರ್ಧನೆ ಮಾಡಲಾಗುವುದು. ರಾಜ್ಯದಲ್ಲಿರುವ ಬಡವರಿಗೆ ಮನೆ, ನಿವೇಶನ ನೀಡಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ ಎಂದರು.

Related posts

ವಾಣಿಜ್ಯ ತೆರಿಗೆ ಇಲಾಖೆಯಿಂದ ಸಿಹಿ ಸುದ್ದಿ: ಬೇಕರಿ, ಕಾಂಡಿಮೆಂಟ್ಸ್ ಮಾಲೀಕರಿಗೆ ತೆರಿಗೆ ವಿನಾಯಿತಿ!

ನ್ಯಾಷನಲ್ ಹೌಸಿಂಗ್ ಬ್ಯಾಂಕ್ (NHB) ನೇಮಕಾತಿ 2025

July 13, 2025
ವಾಣಿಜ್ಯ ತೆರಿಗೆ ಇಲಾಖೆಯಿಂದ ಸಿಹಿ ಸುದ್ದಿ: ಬೇಕರಿ, ಕಾಂಡಿಮೆಂಟ್ಸ್ ಮಾಲೀಕರಿಗೆ ತೆರಿಗೆ ವಿನಾಯಿತಿ!

ಮೈಲಾರಲಿಂಗೇಶ್ವರ ಕಾರ್ಣಿಕ ನುಡಿ: ಕರ್ನಾಟಕ ಸಿಎಂ ಬದಲಾವಣೆಯ ಸುಳಿವು?

July 13, 2025

ಶಿಕಾರಿಪುರದಂತೆ ಶಿರಾ ಮಾದರಿ ತಾಲೂಕಾಗಿ ಅಭಿವೃದ್ಧಿ..
ಶಿಕಾರಿಪುರ ತಾಲೂಕು ತೀರಾ ಹಿಂದುಳಿದಿದ್ದು, ಈಗ ಶಿಕಾರಿಪುರ ಅಭಿವೃದ್ಧಿ ಹೊಂದಿದೆ. ಅದೇ ರೀತಿ ಶಿಕಾರಿಪುರ ತಾಲೂಕನ್ನು ಅಭಿವೃದ್ಧಿ ಮಾಡಿದಂತೆ ಶಿರಾವನ್ನು ಮಾದರಿ ತಾಲೂಕಾಗಿ ಅಭಿವೃದ್ಧಿ ಮಾಡಲು ಏನೆಲ್ಲ ಹಣಕಾಸು ಸಹಾಯಬೇಕೋ ಅದನ್ನು ನೀಡಲು ಸಿದ್ಧ. ಶಿರಾ ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಅಭ್ಯರ್ಥಿಗೆ ಮತಹಾಕಿ 25 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿದರು.
ಮುದ್ದನಕ್ಕಹಳ್ಳಿಯಲ್ಲಿ ಬೋವಿ ಸಮುದಾಯದ ಕಲ್ಲುಗಣಿ ಸಮಸ್ಯೆಯನ್ನು ಶೀಘ್ರ ಪರಿಹರಿಸುತ್ತೇವೆ. ಹೇಮಾವತಿಯಿಂದ ಮದಲೂರು ಕೆರೆಗೆ ನೀರು ಹಾಗೂ ಬಗರ್‍ಹುಕುಂ ಸಾಗುವಳಿ ಚೀಟಿಗಳನ್ನು ವಿತರಣೆ ಮಾಡುತ್ತೇವೆ. ಕಾಂಗ್ರೆಸ್, ಜೆಡಿಎಸ್ ಭದ್ರಕೋಟೆ ಎನಿಸಿರುವ ಶಿರಾ ಕ್ಷೇತ್ರವನ್ನು ನುಚ್ಚುನೂರು ಮಾಡಿ ಬಿಜೆಪಿ ಬಾವುಟ ಹಾರಿಸುತ್ತೇವೆ. ಶಿರಾದಲ್ಲಿ ಬಿಜೆಪಿ ಗೆಲ್ಲುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಎಸ್‍ವೈ ವಿಶ್ವಾಸ ವ್ಯಕ್ತಪಡಿಸಿದರು.
ಸಮಾಜಕಲ್ಯಾಣ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಶಿರಾ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಆದರೆ ಗೆಲುವುದು ಸಾಧಿಸುವುದು ಬಿಜೆಪಿ, ಶಿರಾದಲ್ಲಿ ಬಿಜೆಪಿ ಗೆಲುವಿಗೆ ವಿಜಯೇಂದ್ರ ಪಣತೊಟ್ಟಿದ್ದಾರೆ. ಹಿಂದೂ ಸಾಮ್ರಾಟ ಶಿವಾಜಿಯಂತೆ ವಿಜಯೇಂದ್ರ ಉಪಚುನಾವಣೆಗಳಲ್ಲಿ ಬಿಜೆಪಿಗೆ ಗೆಲುವು ತಂದುಕೊಡುತ್ತಿದ್ದಾರೆ ಎಂದರು ಹೇಳಿದರು.

ಮದಲೂರು ಕೆರೆ ಯೋಜನೆ ಸ್ಥಗಿತಗೊಳಿಸಿದ್ದೇ ಬಿಎಸ್‍ವೈ-ಟಿ.ಬಿ ಜಯಚಂದ್ರ
ಸುಮಾರು 520 ಎಕೆರೆ ಪ್ರದೇಶದಲ್ಲಿರುವ ಮದಲೂರು ಕೆರೆಗೆ ಹೇಮಾವತಿ ನದಿಯಿಂದ ಈ ಹಿಂದೆಯೇ ನೀರು ಹರಿಸಲಾಗಿತ್ತು. ಆದರೆ, ಹೇಮಾವತಿ ನದಿ ನೀರು ಕಾವೇರಿಕೊಳ್ಳದ ವ್ಯಾಪ್ತಿ ಎಂಬ ಕಾರಣಕ್ಕೆ ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಈಗ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ಹರಿಸಲು ಯೋಜನೆ ರೂಪಿಸಲಾಗುತ್ತಿದೆ. ಆದರೆ,ಯಡಿಯೂರಪ್ಪ ಅವರಿಗೆ ಮದಲೂರು ಕೆರೆ ಯೋಜನೆ ಬಗ್ಗೆ ಗೊತ್ತು ಎಂದು ಭಾವಿಸುತ್ತೇನೆ. ಕೇವಲ ಓಟಿಗಾಗಿ ಸಿಎಂ ಹೇಳಿಕೆ ನೀಡಿದ್ದಾರೆ. 2008ರಲ್ಲಿ ಹೇಮಾವತಿಯಿಂದ ಮದಲೂರು ಕೆರೆಗೆ ನೀರು ಹರಿಸಬಾರದು ಎಂದು ಅಡ್ಡಿ ಮಾಡಿದ್ದೇ ಬಿಜೆಪಿ ನಾಯಕರು ಎಂದು ಟಿ.ಬಿ ಜಯಚಂದ್ರ ಆರೋಪಿಸಿದ್ದಾರೆ.


ಹೀಗಾಗಿ 2008ರಲ್ಲಿ ಮದಲೂರು ಕೆರೆಗೆ ನೀರು ಹರಿಸುವ ಯೋಜನೆ ಮಾಡಿದ್ದೇ ಯಡಿಯೂರಪ್ಪ. ಆದರೆ ನಾನು ಕೇಂದ್ರದ ಬಳಿ ಹೋಗಿ ಯೋಜನೆ ಮುಂದುವರೆಸಲು ಅನುಮತಿ ಪಡೆದು 60 ಕೋಟಿ ಹಣ ಮಂಜೂರು ಮಾಡಿಸಿದ್ದೆ. ಆದರೆ, ಬಿಜೆಪಿಯವರು ಹಣ ನೀಡದೇ ಕೆಲಸ ಮಾಡಲು ಬಿಡಲಿಲ್ಲ ಎಂದು ಜಯಚಂದ್ರ ದೂರಿದ್ದಾರೆ.

ಕೆರೆಗಳಿಗೆ ನೀರು ತುಂಬಿಸದಿದ್ದರೆ ಪಾದಯಾತ್ರೆ: ಹೆಚ್‍ಡಿಕೆ ಎಚ್ಚರಿಕೆ
850 ಕೋಟಿ ವೆಚ್ಚದ

ಲ್ಲಿ ಶಿರಾ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲು ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಆದರೆ, ನಮ್ಮ ಸರ್ಕಾರ ಉರುಳಿದ ಕಾರಣ ಯೋಜನೆ ನೆನೆಗುದಿಗೆ ಬಿದ್ದಿದೆ.

Congress Siddaramaiah JDS H.D.Kumaraswamy

 

ತಾಲೂಕಿನ 65 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡದಿದ್ದರೆ ಶಿರಾದಿಂದ ವಿಧಾನಸೌಧದವರೆಗೆ ಪಾದಯಾತ್ರೆ ನಡೆಸುವುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: B S YADIYURAPPAcampainh.d.kumaraswamimdaluru lakesira byelectiont.b jayachandra
ShareTweetSendShare
Join us on:

Related Posts

ವಾಣಿಜ್ಯ ತೆರಿಗೆ ಇಲಾಖೆಯಿಂದ ಸಿಹಿ ಸುದ್ದಿ: ಬೇಕರಿ, ಕಾಂಡಿಮೆಂಟ್ಸ್ ಮಾಲೀಕರಿಗೆ ತೆರಿಗೆ ವಿನಾಯಿತಿ!

ನ್ಯಾಷನಲ್ ಹೌಸಿಂಗ್ ಬ್ಯಾಂಕ್ (NHB) ನೇಮಕಾತಿ 2025

by Shwetha
July 13, 2025
0

NHB Recruitment 2025 – ಹೌಸಿಂಗ್ ಬ್ಯಾಂಕ್ (NHB) ಭಾರತೀಯ ವಸತಿ ಹಣಕಾಸು ಕ್ಷೇತ್ರವನ್ನು ಬಲಪಡಿಸುವ ಪ್ರಮುಖ ಸಂಸ್ಥೆಯಾಗಿ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಸಹಾಯ ಮಾಡುತ್ತಿದೆ. 2025...

ವಾಣಿಜ್ಯ ತೆರಿಗೆ ಇಲಾಖೆಯಿಂದ ಸಿಹಿ ಸುದ್ದಿ: ಬೇಕರಿ, ಕಾಂಡಿಮೆಂಟ್ಸ್ ಮಾಲೀಕರಿಗೆ ತೆರಿಗೆ ವಿನಾಯಿತಿ!

ಮೈಲಾರಲಿಂಗೇಶ್ವರ ಕಾರ್ಣಿಕ ನುಡಿ: ಕರ್ನಾಟಕ ಸಿಎಂ ಬದಲಾವಣೆಯ ಸುಳಿವು?

by Shwetha
July 13, 2025
0

ವಿಜಯನಗರ, ಕರ್ನಾಟಕ: ವಿಜಯನಗರ ಜಿಲ್ಲೆಯ ಹೂವಿನಡಗಲಿ ತಾಲ್ಲೂಕಿನ ಸುಪ್ರಸಿದ್ಧ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ, 2025ರ ಪ್ರಸಕ್ತ ವರ್ಷದ ಕಾರ್ಣಿಕ ನುಡಿ ಹೊರಬಿದ್ದಿದ್ದು, ಇದು ಕರ್ನಾಟಕ ರಾಜಕೀಯ ವಲಯದಲ್ಲಿ ತೀವ್ರ...

ವಾಣಿಜ್ಯ ತೆರಿಗೆ ಇಲಾಖೆಯಿಂದ ಸಿಹಿ ಸುದ್ದಿ: ಬೇಕರಿ, ಕಾಂಡಿಮೆಂಟ್ಸ್ ಮಾಲೀಕರಿಗೆ ತೆರಿಗೆ ವಿನಾಯಿತಿ!

ಡಿಕೆ ಸುರೇಶ್: “ರಾಜಕಾರಣದಲ್ಲಿ ನಿವೃತ್ತಿ ಇಲ್ಲ, ಸಿದ್ದರಾಮಯ್ಯ 2028ರಲ್ಲೂ ನಾಯಕತ್ವ ಮುಂದುವರೆಸುವ ಹೇಳಿಕೆ ನೀಡಿರಬಹುದು”

by Shwetha
July 13, 2025
0

ಬೆಂಗಳೂರು: ರಾಜಕೀಯದಲ್ಲಿ ನಿವೃತ್ತಿ ಎಂಬ ಪರಿಕಲ್ಪನೆ ಇಲ್ಲದ ಕಾರಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2028ರಲ್ಲೂ ತಮ್ಮ ನಾಯಕತ್ವ ಮುಂದುವರೆಯುತ್ತದೆ ಎಂದು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿರಬಹುದು ಎಂದು ಮಾಜಿ...

ವಾಣಿಜ್ಯ ತೆರಿಗೆ ಇಲಾಖೆಯಿಂದ ಸಿಹಿ ಸುದ್ದಿ: ಬೇಕರಿ, ಕಾಂಡಿಮೆಂಟ್ಸ್ ಮಾಲೀಕರಿಗೆ ತೆರಿಗೆ ವಿನಾಯಿತಿ!

ಮುಸ್ಲಿಮರು ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಧಾರ್ಮಿಕ ಗುಂಪು: ಪ್ಯೂ ಸಂಶೋಧನೆ

by Shwetha
July 13, 2025
0

ವಾಷಿಂಗ್ಟನ್ ಡಿ.ಸಿ.: 2010 ರಿಂದ 2020 ರ ಅವಧಿಯಲ್ಲಿ ಜಾಗತಿಕವಾಗಿ ಮುಸ್ಲಿಮರು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಧಾರ್ಮಿಕ ಗುಂಪಾಗಿ ಹೊರಹೊಮ್ಮಿದ್ದಾರೆ ಎಂದು ಪ್ಯೂ ಸಂಶೋಧನಾ ಕೇಂದ್ರದ...

ವಾಣಿಜ್ಯ ತೆರಿಗೆ ಇಲಾಖೆಯಿಂದ ಸಿಹಿ ಸುದ್ದಿ: ಬೇಕರಿ, ಕಾಂಡಿಮೆಂಟ್ಸ್ ಮಾಲೀಕರಿಗೆ ತೆರಿಗೆ ವಿನಾಯಿತಿ!

ವಾಣಿಜ್ಯ ತೆರಿಗೆ ಇಲಾಖೆಯಿಂದ ಸಿಹಿ ಸುದ್ದಿ: ಬೇಕರಿ, ಕಾಂಡಿಮೆಂಟ್ಸ್ ಮಾಲೀಕರಿಗೆ ತೆರಿಗೆ ವಿನಾಯಿತಿ!

by Shwetha
July 13, 2025
0

ನಗರದ ಬೇಕರಿ, ಜ್ಯೂಸ್ ಅಂಗಡಿ, ಕಾಂಡಿಮೆಂಟ್ಸ್ ಮಾಲೀಕರಿಗೆ ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆಯು ಮಹತ್ವದ ಸ್ಪಷ್ಟನೆಯನ್ನು ನೀಡಿದೆ. ಆನ್‌ಲೈನ್ ಮೂಲಕ ಹಣ ಸ್ವೀಕರಿಸಿದ ಸಣ್ಣ ವ್ಯಾಪಾರಿಗಳಿಗೆ ಇಲಾಖೆಯು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram