ದುಬಾರಿ ಮೊತ್ತದ ಅಪಾರ್ಟ್ ಮೆಂಟ್ ಖರೀದಿಸಿದ ಮಾಧುರಿ ದೀಕ್ಷಿತ್..!!
ಬಾಲಿವುಡ್ ನ ಎವರ್ ಗ್ರೀನ್ ಬ್ಯೂಟಿ ನಟಿ ಮಾಧುರಿ ದೀಕ್ಷಿತ್ ಅವರು ಇದೀಗ ದುಬಾರಿ ಅಪಾರ್ಟ್ ಪೆಂಟ್ ಖರೀದಿ ಮಾಡಿದ್ದಾರೆ,.. ಮುಂಬೈನ ಲೋವರ್ ಪರೇಲ್ ಪ್ರದೇಶದಲ್ಲಿ 48 ಕೋಟಿ ರೂಪಾಯಿ ಮೌಲ್ಯದ ಹೊಸ ಅಪಾರ್ಟ್ ಮೆಂಟ್ ವೊಂದನ್ನು ಖರೀದಿಸಿದ್ದಾರೆ.. ಈ ಅಪಾರ್ಟ್ ಮೆಂಟ್ ನ ಮೌಲ್ಯ ಬರೋಬ್ಬರಿ 48 ಕೋಟಿ ರೂಪಾಯಿ ಎನ್ನಲಾಗ್ತಿದೆ..
ಸದ್ಯ ಸಿನಿಮಾರಂಗದ ಜೊತೆಗೆ ಡ್ಯಾನ್ಸಿಂಗ್ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಮಾಧುರಿ ದೀಕ್ಷಿತ್ ಬ್ಯುಸಿಯಿದ್ದಾರೆ.. ಸಮುದ್ರದ ಸಮೀಪ ಹಾಗೂ ಉತ್ತಮ ವೀವ್ ಹೊಂದಿರುವ ಮಾಧುರಿ ದೀಕ್ಷಿತ್ ಅವರ ಹೊಸ ಅಪಾರ್ಟ್ಮೆಂಟ್ ನಲ್ಲಿ ಸ್ವಿಮ್ಮಿಂಗ್ ಪೂಲ್, ಫುಟ್ ಬಾಲ್ ಕೋರ್ಟ್, ಜಿಮ್, ಸ್ಪಾ ಕ್ಲಬ್ ಸೇರಿ ಇನ್ನೂ ಸಾಕಷ್ಟು ಲಕ್ಷೂರಿಯಸ್ ಸೌಲಭ್ಯಗಳಿವೆ ಎನ್ನಲಾಗಿದೆ..
ಮಾಧುರಿ ದೀಕ್ಷಿತ್ ಅವರ ಅಪಾರ್ಟ್ಮೆಂಟ್ 53ನೇ ಮಹಡಿಯಲ್ಲಿದ್ದು, 5,384 ಚದರ ಅಡಿ ವಿಸ್ತೀರ್ಣ ಹೊಂದಿದೆ ಎಂದು ದಾಖಲೆ ಪತ್ರದಲ್ಲಿ ತೋರಿಸಲಾಗಿದೆ. ಈ ಅಪಾರ್ಟ್ ಮೆಂಟ್ನಲ್ಲಿ ಏಳು ಕಾರ್ ಪಾರ್ಕಿಂಗ್ ವ್ಯವಸ್ಥೆ ಸಹ ಇದೆ ಎನ್ನಲಾಗಿದೆ..
Madhuri Dixit Buys A Luxury Apartment For ₹ 48 Crore In Mumbai