ಮಾಧುರಿ ದೀಕ್ಷಿತ್ ಬಾಡಿಗೆ ಬಂಗಲೇ ನೋಡಿದ್ರೆ ಅಬ್ಬಾ!! ಅಂತೀರಾ
ನಟಿ ಮಾಧುರಿ ದೀಕ್ಷಿತ್ ಮತ್ತು ಅವರ ಪತಿ ಡಾ ಶ್ರೀರಾಮ್ ನೆನೆ ಮುಂಬೈನಲ್ಲಿ ಹೊಸ ಮನೆಯನ್ನು ಬಾಡಿಗೆಗೆ ಪಡೆದಿದ್ದಾರೆ. ಮುಂಬೈನ ಐಷಾರಾಮಿ ಪ್ರದೇಶವಾದ ವರ್ಲಿಯ ಬಹುಮಹಡಿ ಕಟ್ಟಡದಲ್ಲಿ ಈ ಮನೆ ಇದೆ. ಮಾಧುರಿ ದೀಕ್ಷಿತ್ ಅವರ ಹೊಸ ಮನೆ 29 ನೇ ಮಹಡಿಯಲ್ಲಿದೆ. 5500 ಚದರ ಅಡಿಗಳಷ್ಟು ಜಾಗ ಹೊಂದಿರುವ ಅಪಾರ್ಟ್ಮೆಂಟ್ ನ ಬಾಡಿಗೆ ತಿಂಗಳಿಗೆ 12.5 ಲಕ್ಷ ರೂ ಇದೆ.
ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ, ಮನೆಯನ್ನು ವಿನ್ಯಾಸಗೊಳಿಸಿದ ಅಪೂರ್ವ ಶ್ರಾಫ್, ಅವರು ಮಾಧುರಿ ಮತ್ತು ಶ್ರೀರಾಮ್ ಅವರನ್ನ ಹೊಗಳಿದ್ದಾರೆ. “ಪ್ರಾಮಾಣಿಕವಾಗಿ, ಅವರು ತುಂಬಾ ಡೌನ್ ಟು ಅರ್ಥ್ ಮತ್ತು ಅವರ ವಿನಂತಿಗಳು ಎಷ್ಟು ಪ್ರಾಯೋಗಿಕವಾಗಿವೆ ಎಂದು ನನಗೆ ಆಶ್ಚರ್ಯವಾಯಿತು. ಎಂದು ವಿನ್ಯಾಸಕಿ ಅಪೂರ್ವಾ ಶ್ರಾಫ್ ಹೇಳಿದ್ದಾರೆ.
ಮಾಧುರಿ ದಿಕ್ಷೀತ್ ಇತ್ತೀಚೆಗೆ ನೆಟ್‌ಫ್ಲಿಕ್ಸ್ ವೆಬ್-ಸರಣಿ ದಿ ಫೇಮ್ ಗೇಮ್‌ನಲ್ಲಿ ಕಾಣಿಸಿಕೊಂಡರು, ಇದು ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಮಾಧುರಿ 1984 ರಲ್ಲಿ ಅಬೋಧ್ ಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಿದ್ದರು. 1988 ರಲ್ಲಿ ತೇಜಾಬ್ ಬಿಡುಗಡೆಯಾದ ನಂತರ ಯಶಸ್ಸನ್ನು ಗಳಿಸಿದರು, ಇದರಲ್ಲಿ ನಟ ಅನಿಲ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಂತರ ದಿಲ್ ತೋ ಪಾಗಲ್ ಹೈ, ದೇವದಾಸ್, ಕೊಯ್ಲಾ, ಅಂಜಾಮ್, ಹಮ್ ಆಪ್ಕೆ ಹೈ ಕೌನ್..!, ಸಾಜನ್, ಹಮ್ ತುಮ್ಹಾರೆ ಹೈ ಸನಮ್, ದಿಲ್ ತೇರಾ ಆಶಿಕ್ ಮತ್ತು ಇನ್ನೂ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡರು.