Madhya Pradesh : ಹೆಂಡತಿ ಮಕ್ಕಳನ್ನ ಕೊಂದು ಮನೆಯಂಗಳದಲ್ಲಿ ಹೂತು ಹಾಕಿದ ಪತಿ….
ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನ ಕೊಂದು ಮನೆಯಂಗಳಲ್ಲಿ ಹೂತು ಹಾಕಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ರತ್ಲಾಮ್ ನಗರದ ವಿಂದ್ಯಾವಾಹಿನಿ ಅಮರಪಾಲಿ ಕಾಲೋನಿಯಲ್ಲಿ ಘಟನೆ ನಡೆದಿದ್ದು 2 ತಿಂಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಮಹಿಳೆ ಹಾಗೂ ಮಕ್ಕಳು ಹಲವು ದಿನಗಳಿಂದ ಕಾಣಿಸಕೊಳ್ಳದೇ ಇದ್ದಿದ್ದರಿಂದ ಅನುಮಾನಗೊಂಡ ಸ್ಥಳಿಯರು ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ನಂತರ ತನಿಖೆ ಕೈಗೆತ್ತಿಕೊಂಡ ಪೊಲೀಸರು ಪ್ರಕರಣದನ್ನ ಭೇಧಿಸಿ ವ್ಯಕ್ತಿಯನ್ನ ಬಂಧಿಸಿದ್ದಾರೆ.
ರತ್ಲಾಮ್ ಜಿಲ್ಲೆಯ ನಿವಾಸಿ ಸೋನು ತಲೆವಾಡೆ ರೈಲ್ವೆ ಇಲಾಖೆಯಲ್ಲಿ ಗ್ಯಾಂಗ್ ಮೆನ್ ಆಗಿ ಕೆಲಸ ಮಾಡುತ್ತಿದ್ದ. ಈತ ತನ್ನ ಎರಡನೇ ಪತ್ನಿ ಜೊತೆ ಸಂಸಾರ ಮಾಡುತ್ತಿದ್ದು, ಇವರಿಗೆ ಏಳು ವರ್ಷದ ಮಗ ಹಾಗೂ ನಾಲ್ಕು ವರ್ಷದ ಮಗಳಿದ್ದರು. ಇತ್ತೀಚೆಗೆ ಕುಟುಂಬದಲ್ಲಿ ಆಗಾಗ ಕಲಹ ಉಂಟಾಗುತ್ತಿತ್ತು.
ಕೋಪದಲ್ಲಿ ತನ್ನಿಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಕೊಲೆ ಮಾಡಿ ಸ್ನೇಹಿತನ ಸಹಾಯದಿಂದ ಮನೆಯಂಗಳದಲ್ಲಿ ಮೂರು ಶವಗಳನ್ನು ಹೂತು ಹಾಕಿದ್ದಾನೆ. ಸ್ಥಳಿಯರ ದೂರಿನ ಮೇರೆಗೆ ಪೊಲೀಸರು ವ್ಯಕ್ತಿಯನ್ನ ವಿಚಾರಣೆ ನಡೆಸಿದಾಗ ದುಷ್ಕತ್ಯ ಬಯಲಾಗಿದೆ.
Madhya Pradesh: The husband killed his wife and children and buried them in the house.