ಕೊರೊನಾ ಬಂದಿದೆ ಎಂದು ಭಾವಿಸಿ ಗುಣಮುಖನಾಗಲು ಸೀಮೆಎಣ್ಣೆ ಕುಡಿದ ವ್ಯಕ್ತಿ – ಸಾವು

1 min read

ಕೊರೊನಾ ಬಂದಿದೆ ಎಂದು ಭಾವಿಸಿ ಗುಣಮುಖನಾಗಲು ಸೀಮೆಎಣ್ಣೆ ಕುಡಿದ ವ್ಯಕ್ತಿ – ಸಾವು

ಮಧ್ಯಪ್ರದೇಶ:  ದೇಶದಲ್ಲಿ ಕೊರೊನಾ 2ನೇ ಅಲೆ ಭಯಾನಕ ಸ್ವರೂಪ ಪಡೆದಿದ್ದು, ದಿನೇ ದಿನೇ ಸೋಂಕಿತರು ಸಾವಿನ ಸಂಖ್ಯೆ ಹೆಚ್ಚಾಗ್ತಲೇ ಇದೆ.. ೀ ನಡುವೆ ಅನೇಕರು ಭಯದಿಂದಲೇ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಗಳು ನಡೆಯುತ್ತಿದೆ..

ದೇಶದಲ್ಲಿ ವಿಷಮ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರು ಭಯದಲ್ಲೇ ಪ್ಯಾನಿಕ್ ಆಗುತ್ತಿದ್ದಾರೆ. ಸಣ್ಣ ನೆಗಡಿ , ಜ್ವರ ಕಾಣಿಸಿಕೊಂಡ್ರೂ ತಮಗೆ ಸೋಂಕಿದೆ ಎಂದು ಹೆದರಿಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ.  ಈ ನಡುವೆ ಕೊರೊನಾ ಸೋಂಕಿತ ವ್ಯಕ್ತಿಯೋರ್ವ ಸೋಂಕಿನಿಂದ ಗುಣಮುಖವಾಗಲು ಸೀಮೆಎಣ್ಣೆ ಸೇವಿಸಿದ್ದು, ಪರಿಣಾಮ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಹೇಂದ್ರ ಎಂಬಾತ ಮೃತ ದುರ್ದೈವಿಯಾಗಿದ್ದಾನೆ. ಈತನಿಗೆ ಸಣ್ಣ ಪ್ರಮಾಣದ ಜ್ವರ ಕಾಣಿಸಿಕೊಂಡಿತ್ತು. ಆದರೆ ತನಗೆ ಕೊರೊನಾ ಇದೆ ಎಂದು ಭಾವಿಸಿ ಸೀಮೆಎಣ್ಣೆ ಸೇವಿಸಿದರೆ ಕೊರೊನಾದಿಂದ ಗುಣವಾಗಬಹುದು ಎಂದು ನಂಬಿ ಸೀಮೆಎಣ್ಣೆ ಸೇವಿಸಿದ ಪರಿಣಾಮ ಸಾವನ್ನಪ್ಪಿದ್ದಾನೆ. ಮಹೇಂದ್ರ ತನಗೆ ತಾನೇ ಕೊರೊನಾ ರೋಗವಿದೆ ಎಂದು ಭಾವಿಸಿದ್ದ. ಸೀಮೆಎಣ್ಣೆ ಕುಡಿಯುವುದರಿಂದ ವೈರಸ್ ಅನ್ನು ನಾಶಪಡಿಸಬಹುದು ಎಂದು ನಂಬಿ ತನ್ನ ಜೀವ ಕಳೆದುಕೊಮಡಿದ್ದಾನೆ.

ಮಹೇಂದ್ರ  ಸೀಮೆಎಣ್ಣೆ ಸೆವಿಸಿದ ನಂತರ ಆತನಿಗೆ ತೀವ್ರ  ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ನಂತರ ಅವನ ಕುಟುಂಬ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ಧಾರೆ.  ಆದ್ರೆ ಅಲ್ಲಿ ಬೆಡ್ ಸಿಗದೇ  ಆಸ್ಪತ್ರೆ ಆಡಳಿತವು ಅವನನ್ನು ದಾಖಲಿಸಿಕೊಳ್ಳಲು ನಿರಾಕರಿಸಿದೆ. ಆ ಬಳಿಕ ಕುಟುಂಬ ಅವನನ್ನು ಹಮೀದಿಯಾ ಆಸ್ಪತ್ರೆಗೆ ಸಾಗಿಸಿದೆ. ಆದರೆ ಮಹೇಂದ್ರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಕೊರೊನ ಮಹಾಮಾರಿ:

 ಕೊರೊನ ವೈರಸ್  ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.

 ತಪ್ಪದೇ ಹೊರಗೆ ಹೋದಾಗ  ಸ್ವಚ್ಛವಾದ ಮಾಸ್ಕ ಧರಿಸಿ.

 ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .

 ಜನ ನಿಬಿಡ ಪ್ರದೇಶದಿಂದ ದೂರವಿರಿ.

 ಮನೆ ಸಮೀಪದ  ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.

 ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.

 ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ  ಸ್ನಾನ ಮಾಡಿ.

 ನಮ್ಮ  ಹೋರಾಟ ಕೊರೊನ ನಿರ್ಮೂಲನೆಯತ್ತ.

 ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd