Madikeri : ಆಟವಾಡುತ್ತ ಉಂಗುರ ನುಂಗಿದ 8 ತಿಂಗಳ ಮಗು ; ಶಸ್ತ್ರಚಿಕಿತ್ಸೆ ನಡೆಸಿದರೂ ಉಳಿಯಲಿಲ್ಲ ಪ್ರಾಣ….
ಆಟವಾಡುತ್ತಾ 8 ತಿಂಗಳ ಮಗು ಉಂಗುರ ನುಂಗಿದ ಪರಿಣಾಮ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮದಲ್ಲಿ ನಡೆದಿದೆ.
ಮುನೀರ್ ಎಂಬುವರ ಎಂಟು ತಿಂಗಳ ಮಗು ಬುಧವಾರ ರಾತ್ರಿ ವೇಳೆ ಮಗು ಆಕಸ್ಮಿಕವಾಗಿ ಆಟವಾಡುತ್ತಾ ಉಂಗುರ ನುಂಗಿದೆ. ಈ ವೇಳೆ ಮಗುವಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಕೂಡಲೇ ಪೋಷಕರು ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ.
ಉಸಿರಾಟದ ಸಮಸ್ಯೆ ಹೆಚ್ಚಾದ ಕಾರಣ ವೈದ್ಯರ ಸಲಹೆ ಮೇರೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಮಗುವಿನ ಆರೋಗ್ಯ ಪರಿಶೀಲನೆ ನಡೆಸಿದ ವೈದ್ಯರ ತಂಡ ಸತತವಾಗಿ ಮೂರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಉಂಗುರವನ್ನು ಹೊರತೆಗೆಯಲು ಯಶಸ್ವಿಯಾಗಿದೆ. ಆದರೆ ಬೆಳಗ್ಗೆ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಮಗು ಕೊನೆಯುಸಿರೆಳೆದಿದೆ.
Madikeri: 8-month-old child swallowed ring while playing; Despite the surgery, he did not survive.