Madya Prdesh cheetah : ಕಾಂಗ್ರೆಸ್ ಓಟರ್ ಗಳನ್ನ ತಗ್ಗಿಸಲು ಆಫ್ರಿಕಾದಿಂದ ಚೀತಾ ತರಲಾಗಿದೆ –ಶಾಸಕ ಆರೋಪ…
ಕಾಂಗ್ರೆಸ್ ಮತದಾರರನ್ನ ತಗ್ಗಿಸುವುದಕ್ಕೋಸ್ಕರ ಬಿಜೆಪಿ ಸರ್ಕಾರ ಆಫ್ರಿಕಾದಿಂದಾ ಚಿರತೆಗಳನ್ನ ತಂದಿದೆ ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರು ವಿಚಿತ್ರವಾದವನ್ನ ಮುನ್ನಲೆಗೆ ತಂದಿದ್ದಾರೆ. ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಆಫ್ರಿಕಾದಿಂದ ಚಿರತೆಗಳನ್ನು ತರುವುದರ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಪ್ರಗಿಲಾಲ್ ಜಾತವ್ ಹೇಳಿದ್ದಾರೆ.
ಭಾರತದಲ್ಲಿ ಚೀತಾ ಗಳು ಅಳಿವಿನಂಚಿನಲ್ಲಿದ್ದರಿಂದ ಪ್ರಧಾನಿ ಮೋದಿ ಸರ್ಕಾರ ಆಫ್ರಿಕಾದಿಂದ ಎಂಟು ಚಿರತೆಗಳನ್ನ ತಂದಿತ್ತು. ಆಫ್ರಿಕಾದ ನಮೀಬಿಯಾದಿಂದ ವಿಶೇಷ ವಿಮಾನದ ಮೂಲಕ ತರಲಾದ ಈ ಚಿರತೆಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾಗಿತ್ತು.74 ವರ್ಷಗಳ ನಂತರ ಚೀತಾಗಳು ಭಾರತಕ್ಕೆ ಮರಳಿ ಬಂದಿವೆ.
ಈ ನಡುವೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಕರೇರಾದ ಕಾಂಗ್ರೆಸ್ ಶಾಸಕ ಪ್ರಗಿಲಾಲ್ ಜಾತವ್ ಅವರು ಆಫ್ರಿಕಾದಿಂದ ಚಿರತೆಗಳನ್ನು ತರುವುದರ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂದಿದ್ದಾರೆ. ಪ್ರಧಾನಿ ಮೋದಿ ಸರ್ಕಾರ ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ಆಫ್ರಿಕಾದಿಂದ ಚಿರತೆಗಳನ್ನ ತರುತ್ತಿರುವುದು ಕಾಂಗ್ರೆಸ್ ಪಕ್ಷದ ಮತದಾರರನ್ನು ತಿಂದು ಕಡಿಮೆ ಮಾಡಲು. ಇದು ಬಿಜೆಪಿ ಸರ್ಕಾರದ ಷಡ್ಯಂತ್ರವಾಗಿದೆ ಎಂದು ಹೇಳಿದ್ದಾರೆ.
ಅಷ್ಟೆ ಅಲ್ಲದೇ ಬಡವರು ಮತ್ತು ದೀನದಲಿತ ವರ್ಗಕ್ಕೆ ಸೇರಿದ ಕಾಂಗ್ರೆಸ್ ಪಕ್ಷಕ್ಕೆ ಹಾನಿ ಮಾಡಲು ಚಿರತೆಗಳನ್ನು ತರಲಾಗಿದೆ ಎಂಬ ಸಂಚಲನಾತ್ಮಕ ಆರೋಪ ಮಾಡಿದ್ದಾರೆ. ಬಿಜೆಪಿ ಪ್ರಾಣಿಗಳನ್ನ ಬಳಸಿಕೊಂಡು ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದ್ದಾರೆ. ಇದನ್ನ ಕೇಳಿದ ಹಲವು ಶಾಸಕರು ಕಾರ್ಯಕರ್ತರು ಚಪ್ಪಾಳೆ ಹೊಡೆದು ನಗೆಗಡಲಲ್ಲಿ ತೇಲಿದರು.
Madya Prdesh cheetah: Cheetah brought from Africa to reduce Congress otters – MLA accused…








