ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಹಾಕುಂಭಮೇಳದ ನಿರ್ವಹಣೆಯನ್ನು ಟೀಕಿಸಿದ್ದು, ಅದು ‘ಮೃತ್ಯು ಕುಂಭ’ವಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಅವರು, ನಾನು ಕುಂಭಮೇಳ ಮತ್ತು ಪವಿತ್ರ ಗಂಗಾ ಮಾತೆಯನ್ನು ಗೌರವಿಸುತ್ತೇನೆ. ಆದರೆ, ಸರಿಯಾದ ನಿರ್ವಹಣೆ ಇಲ್ಲ. ಶ್ರೀಮಂತರಿಗೆ ಲಕ್ಷಾಂತರ ರೂಪಾಯಿ ಬೆಲೆಯ ಟೆಂಟ್ಗಳು ಲಭ್ಯವಿದ್ದರೆ, ಬಡವರಿಗೆ ಯಾವುದೇ ಸೌಲಭ್ಯವಿಲ್ಲ ಎಂದು ಕಿಡಿಕಾರಿದರು.
ಇದೇ ವೇಳೆ, ಕೇಂದ್ರ ಸರ್ಕಾರ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ವಿರುದ್ಧ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ಸರ್ಕಾರದ ವೈಫಲ್ಯದಿಂದ ಕುಂಭಮೇಳ ಅಸುರಕ್ಷಿತವಾಗಿದೆ ಎಂದು ಆರೋಪಿಸಿದರು. ಮೇಳದ ಸೌಲಭ್ಯಗಳಲ್ಲಿ ಅಸಮತೋಲನವಿದೆ ಮತ್ತು ಸರ್ಕಾರವು ಎಲ್ಲ ವರ್ಗದ ಭಕ್ತರಿಗೆ ಸಮಾನ ಅವಕಾಶ ನೀಡಲು ವಿಫಲವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.







