Maharashtra: ಹುಟ್ಟು ಹಬ್ಬ ಬಂತೆಂದರೆ ಸಾಕೂ ಎಲ್ಲಿಲ್ಲದ ಸಂಭ್ರಮ ಕೆಲವರು ಈ ಸಂಭ್ರಮವನ್ನು ಸಿಹಿ ಹಂಚುವ ಮೂಲಕ ಆಚರಿಸಿ ಕೊಳ್ಳುತ್ತಾರೆ . ಈ ಸಂಭ್ರಮದ ದಿನ ದಂದು ಚಾಕಲೇಟ ಹಂಚುವುದು ಸಾಮಾನ್ಯ ಇದು ಚಿಕ್ಕ ಮಕ್ಕಳಲ್ಲದೆ. ದೊಡ್ಡವರು ಸಹ ಚಾಕಲೇಟ ಹಂಚಿ ಕುಷಿ ವ್ಯಕ್ತ ಪಡಿಸುವುದು ವಾಡಿಕೆ .
ಆದರೆ ಕೆಲವೊಮ್ಮೆ ಸಂತಸವು ದುಃಖವಾಗಿ ಪರಿಣಮಿಸುತ್ತದೆ ಇದಕ್ಕೆ ನಿದರ್ಷನದಂತೆ
ತನ್ನ ಹುಟ್ಟುಹಬ್ಬದಂದು ಶಾಲೆಯ ಹೊರಗೆ ಆಟವಾಡುತ್ತಿದ್ದ ಮಕ್ಕಳಿಗೆ ವ್ಯಕ್ತಿಯೊಬ್ಬ ಚಾಕಲೇಟ್ ಹಂಚಿದ್ದಾನೆ. ಆಗ ಒಂದು ಅನಿರೀಕ್ಷಿತ ಘಟನೆ ನಡೆದಿದೆ. ಚಿಕ್ಕಮಕ್ಕಳು ಖುಷಿಯಿಂದ ಚಾಕಲೇಟ ತೆಗೆದುಕೊಂಡು ಹೋಗಿ ತಿಂದು ಅಸ್ವಸ್ಥರಾದ ಘಟನೆ ಮಹಾರಾಷ್ಟ್ರ ದಲ್ಲಿ ನಡೆದಿದೆ.
ಚಾಕಲೇಟ ತಿಂದ ಮಕ್ಕಳು ಒಟ್ಟಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಕ್ಕಳ ಪಾಲಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಾಕಲೇಟ್ ವಿತರಿಸಿದವರ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಮಹಾರಾಷ್ಟ್ರದ ನಾಗ್ಪುರದ ಉತ್ತರ ಅಂಬಾಜಾರಿ ರಸ್ತೆಯಲ್ಲಿರುವ ಮದನ್ ಗೋಪಾಲ್ ಶಾಲೆಯ ವಿದ್ಯಾರ್ಥಿಗಳು ಮಧ್ಯಾಹ್ನದ ಊಟ ಮುಗಿಸಿ ಶಾಲೆಯ ಮುಂದೆ ಆಟವಾಡುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಕಾರಿನಲ್ಲಿ ಬಂದಿದ್ದಾನೆ. ಹುಟ್ಟುಹಬ್ಬದಂದು ಅಲ್ಲಿ ಆಡುತ್ತಿದ್ದ ಮಕ್ಕಳಿಗೆ ಚಾಕಲೇಟ್ ಹಂಚಿ ಹೊಗಿದ್ದಾರೆ.
ಆದರೆ ಚಾಕಲೇಟ್ ತಿಂದ ಸ್ವಲ್ಪ ಹೊತ್ತಿನಲ್ಲೇ ಅವರ ಆರೋಗ್ಯ ಹದಗೆಟ್ಟಿದೆ. ಒಂದು ಗಂಟೆಯೊಳಗೆ ಅವರೆಲ್ಲರಿಗೂ ಎದೆನೋವು ಮತ್ತು ವಾಂತಿ ಕಾಣಿಸಿಕೊಂಡಿತು. ಕೂಡಲೇ ಶಾಲಾ ಆಡಳಿತ ಮಂಡಳಿಗೆ ಮಾಹಿತಿ ನೀಡಲಾಗಿದ್ದು, ಅಸ್ವಸ್ಥ ವಿದ್ಯಾರ್ಥಿಗಳನ್ನು ಸಮೀಪದ ಲತಾ ಮಂಗೇಶ್ಕರ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕಾರಿನಲ್ಲಿ ಅಪರಿಚಿತರು ನೀಡಿದ ಚಾಕಲೇಟ್ ತಿಂದಿದ್ದರಿಂದ ಈ ಸ್ಥಿತಿ ಉಂಟಾಗಿದೆ ಎಂದು ಮಕ್ಕಳು ಹೇಳಿದ್ದಾರೆ.
ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಕಪ್ಪು ಕಾರಿನಲ್ಲಿ ಮಾಸ್ಕ್ ಹಾಕಿಕೊಂಡು ಬಂದಿದ್ದ ಎಂದು ವಿದ್ಯಾರ್ಥಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.