Maharashtra : ಸಿಎಂ ಶಿಂಧೇ ಶಾಸಕರ ರಕ್ಷಣೆಗೆ ನಿರ್ಭಯಾ ನಿಧಿಯಡಿ ಖರೀದಿಸಿದ ವಾಹನ ಬಳಕೆ – ಕಾಂಗ್ರೆಸ್ ಕಿಡಿ
ಮಹಿಳೆಯರ ಸುರಕ್ಷತೆಗಾಗಿ ನಿರ್ಭಯಾ ನಿಧಿಯಡಿ ಮುಂಬೈ ಪೊಲೀಸರು ಖರೀದಿಸಿದ ಕೆಲವು ವಾಹನಗಳನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಬಣದ ಶಾಸಕರು ಮತ್ತು ಸಂಸದರಿಗೆ ವೈ ಪ್ಲಸ್ ಭದ್ರತೆಯನ್ನು ಒದಗಿಸಲು ಬಳಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಈ ವರ್ಷದ ಜೂನ್ನಲ್ಲಿ ನಗರ ಪೊಲೀಸ್ ಪಡೆ ನಿರ್ಭಯಾ ನಿಧಿಯಡಿ ಪಡೆದ 30 ಕೋಟಿ ರೂಪಾಯಿ ಕಾರ್ಪಸ್ ಬಳಸಿ 220 ಬೊಲೆರೋಗಳು, 35 ಎರ್ಟಿಗಾಸ್, 313 ಪಲ್ಸರ್ ಮೋಟಾರ್ಸೈಕಲ್ಗಳು ಮತ್ತು 200 ಆಕ್ಟಿವಾ ದ್ವಿಚಕ್ರ ವಾಹನಗಳನ್ನು ಖರೀದಿಸಿದೆ.
ಈ ಬೆಳವಣಿಗೆಯ ಪ್ರತಿಪಕ್ಷಗಳಾದ ಶಿವಸೇನೆ (ಯುಬಿಟಿ), ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಶಿಂಧೆ ನೇತೃತ್ವದ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿವೆ. ಮಹಿಳೆಯರ ರಕ್ಷಣೆಗಿಂತ ಆಡಳಿತ ಶಾಸಕರ ಭದ್ರತೆಯೇ ಮುಖ್ಯವಾಯಿತಾ ಎಂದು ಪ್ರತಿಪಕ್ಷಗಳು ಪ್ರಶ್ನಿಸಿವೆ.
ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ಯೋಜನೆಗಳನ್ನು ಜಾರಿಗೊಳಿಸಲು 2013 ರಿಂದ ನಿರ್ಭಯಾ ನಿಧಿಯನ್ನು ಕೇಂದ್ರವು ರಾಜ್ಯ ಸರ್ಕಾರಗಳಿಗೆ ನೀಡುತ್ತಿದೆ.
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್, “ಮಹಿಳೆಯರನ್ನು ದೌರ್ಜನ್ಯದಿಂದ ರಕ್ಷಿಸುವುದಕ್ಕಿಂತ ಆಡಳಿತಾರೂಢ ಶಾಸಕರ ಭದ್ರತೆ ಮುಖ್ಯವೇ? ಮಹಾರಾಷ್ಟ್ರದ ಮಹಿಳೆಯರಿಗಾಗಿ ಉದ್ದೇಶಿಸಲಾದ ನಿರ್ಭಯಾ ನಿಧಿಯನ್ನ ಶಾಸಕರ ರಕ್ಷಣೆಗೆ ಬಳಸುತ್ತಿರುವುದು ಭಯಾನಕವಾಗಿದೆ ಎಂದು ಹೇಳಿದ್ದಾರೆ.
Maharashtra : CM shinde faction using vehicles bought under Nirbhaya Fund for security,