Train Accident: ಮಹಾರಾಷ್ಟ್ರದಲ್ಲಿ ಪ್ಯಾಸೆಂಜರ್ ಮತ್ತು ಗೂಡ್ಸ್ ರೈಲಿನ ನಡುವೆ ಡಿಕ್ಕಿ – ಹಲವರಿಗೆ ಗಾಯ
ಮಹಾರಾಷ್ಟ್ರದ ಗೊಂಡಿಯಾದಲ್ಲಿ ಪ್ಯಾಸೆಂಜರ್ ರೈಲಿನ ಬೋಗಿ ಹಳಿತಪ್ಪಿದೆ. ಅಪಘಾತದಲ್ಕಿ ಹಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗೂಡ್ಸ್ ರೈಲು ಮತ್ತು ಪ್ಯಾಸೆಂಜರ್ ರೈಲಿನ ನಡುವೆ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ. ಯಾವುದೇ ಪ್ರಾಣಹಾನಿಯಾದ ಬಗ್ಗೆ ವರದಿಯಾಗಿಲ್ಲ. ರೈಲು ಛತ್ತೀಸ್ಗಢದ ಬಿಲಾಸ್ಪುರದಿಂದ ರಾಜಸ್ಥಾನದ ಜೋಧಪುರಕ್ಕೆ ಹೋಗುತ್ತಿತ್ತು.
ಅಪಘಾತ ಸಂಭವಿಸಿದ ವೇಳೆ ರೈಲಿನಲ್ಲಿದ್ದ ಬಹುತೇಕ ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದರು. ಅಪಘಾತದ ನಂತರ ತಕ್ಷಣ ಪ್ರಯಾಣಿಕರು ರೈಲಿನಿಂದ ಕೆಳಗಿಳಿದಿದ್ದಾರೆ. ಸಿಗ್ನಲ್ ಸಿಗದಿರುವುದು ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಅಪಘಾತದ ನಂತರ 4.30 ಕ್ಕೆ ಮರು-ಹಳಿ ಜೋಡಣೆ ಕಾಮಗಾರಿ ಪೂರ್ಣಗೊಂಡಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ. ಅಪಘಾತಕ್ಕೀಡಾದ ಪ್ಯಾಸೆಂಜರ್ ರೈಲು 5.24 ಕ್ಕೆ ಹೊರಟು 5.44 ಕ್ಕೆ ಗೊಂಡಿಯಾ ತಲುಪಿದೆ. ಬೆಳಗ್ಗೆ 5.45ಕ್ಕೆ ಸಂಚಾರ ಮತ್ತೆ ಪುನಾರಂಭವಾಗಿದೆ.
ಎರಡೂ ರೈಲುಗಳು ಒಂದೇ ಹಳಿಯಲ್ಲಿ ಬಂದಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ರೈಲ್ವೇಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಗ್ರೀನ್ ಸಿಗ್ನಲ್ ಸಿಕ್ಕ ನಂತರ ಬಿಲಾಸ್ಪುರ-ಭಗತ್ ಕಿ ಕೋಠಿ ಎಕ್ಸ್ಪ್ರೆಸ್ ಪ್ಯಾಸೆಂಜರ್ ರೈಲು ಹಿಂದಿಕ್ಕಿತ್ತು. ಗೋಡಿಯಾ ತಲುಪಿದ ಕೂಡಲೇ ಅದೇ ಹಳಿಯಲ್ಲಿ ನಿಂತಿದ್ದ ಗೂಡ್ಸ್ ರೈಲು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ತಂತ್ರಜ್ಞರ ಕಡೆಯಿಂದ ಸರಿಯಾದ ಸಿಗ್ನಲ್ ಇಲ್ಲದ ಕಾರಣ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. 50ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, 13 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.