ಸೇತುವೆ ದಾಟುವಾಗ ಕೊಚ್ಚಿ ಹೋದ ಕಾರು – 3 ಸಾವು, ಮೂವರು ನಾಪತ್ತೆ…
ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗ್ತಿದ್ದು ನದಿ ಕೊಳ್ಳಗಳು ತುಂಬಿ ಹರಿಯುತ್ತಿವೆ. ನಾಗ್ಪುರದ ಸವ್ನೆರ್ ತೆಹ್ಸಿಲ್‌ನಲ್ಲಿ ಭಾರೀ ಮಳೆಯ ನಡುವೆ ಸೇತುವೆಯನ್ನು ದಾಟುವಾಗ ಕಾರು ಕೊಚ್ಚಿಹೋಗಿ ಮಹಿಳೆ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಸ್ಕಾರ್ಪಿಯೋ ಕಾರಿನಲ್ಲಿ ವಾಹನದಲ್ಲಿ ಆರು ಮಂದಿ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ. ಮೂವರು ಸಾವನ್ನಪ್ಪಿದ್ದು, ಮೂವರು ನಾಪತ್ತೆಯಾಗಿದ್ದಾರೆ. ಉಳಿದ ಮೂವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
#Maharashtra 3 died and about 3 trapped after a scorpio car washed away in Nanda river of Kelwad, Tahsil Saoner, District #Nagpur amid heavy flow of water induced by rains, confirms @SPNagpurrural@CMOMaharashtra@Dev_Fadnavis@Devendra_Office #MaharashtraRains pic.twitter.com/TvcaoMAYeR
— Praveen Mudholkar (@JournoMudholkar) July 12, 2022
ವಾಹನದಲ್ಲಿದ್ದವರು ಮಧ್ಯಪ್ರದೇಶದ ಮುಲ್ತಾಯಿ ಮೂಲದವರು ಎಂದು ಗುರುತಿಸಲಾಗಿದೆ. ಅವರೆಲ್ಲರೂ ಮದುವೆ ಸಮಾರಂಭದಲ್ಲಿ ಭಾಗವಹಿಸಲು ನಾಗ್ಪುರಕ್ಕೆ ಬಂದಿದ್ದರು. ಮದುವೆ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೂನ್ 1 ರಿಂದ ಜುಲೈ 10 ರ ನಡುವೆ ಮಹಾರಾಷ್ಟ್ರದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ 83 ಜನರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೋಮವಾರ ವರದಿಯಲ್ಲಿ ತಿಳಿಸಿದೆ.