ಆಗಸ್ಟ್​ ಅಂತ್ಯಕ್ಕೆ ಮಹಾರಾಷ್ಟ್ರದಲ್ಲಿ ಕೊರೊನಾ ನಿಗ್ರಹ ಸಾಧ್ಯ..?

ಒಂದೆಡೆ ಮಹಾರಾಷ್ಟ್ರದಲ್ಲೇ ಹೆಚ್ಚು ಸೋಂಕಿತರ ಸಂಖ್ಯೆ ಏರಿಕೆಯಾಗ್ತಿದ್ದು, ದಿನವೊಮದರಲ್ಲಿ 10ಸಾವಿರಕ್ಕೂ ಅಧಿಕ ಕೇಸ್ ಗಳು ಪತ್ತೆಯಾಗ್ತಿರುವ ರಾಜ್ಯ ಮಹಾರಾಷ್ಟ್ರ
ಎನಿಸಿಕೊಂಡಿದೆ. ಆದ್ರೆ ಇದರ ಬೆನ್ನಲ್ಲೇ ಸಮಾಧಾನಕರ ಸಂಗತಿಯೊಂದು ಬಹಿರಂಗವಾಗಿದೆ. ಯಾಕೆಂದ್ರೆ ಇತರೇ ರಾಜ್ಯಗಳಿಗೆ ಹೋಲಿಕೆ ಮಾಡಿಕೊಂಡ್ರೆ ಚೇತರಿಕೆ ಪ್ರಮಾಣ ಹೆಚ್ಚಾಗಿರುವುದು ಕೂಡ ಮಹಾರಾಷ್ಟ್ರದಲ್ಲೇ. ಹೌದು ಮಹಾರಾಷ್ಟ್ರದಲ್ಲಿ ದಿನೇ ದಿನೇ ಸೋಂಕಿತಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗ್ತಿದೆ. ಹೀಗೆ ಮುಂದುವರದು, ಹೊಸ ಪ್ರಕರಣಗಳಿಗೆ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗಿದ್ದೇ ಆದ್ರೆ ಆಗಸ್ಟ್​ ಅಂತ್ಯಕ್ಕೆ ರಾಜ್ಯದಲ್ಲಿ ಕರೊನಾ ನಿಗ್ರಹ ಸಾಧ್ಯ ಎನ್ನಲಾಗ್ತಿದೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 4.22 ಲಕ್ಷದ ಗಡಿದಾಟಿದೆ. ರಾಜ್ಯದಲ್ಲಿ ಆರಂಭದಲ್ಲಿ ಕೊರೊನಾ ತಾಂಡವವಿತ್ತು. ಇದೀಗ ಚೇತರಿಕೆ ಪ್ರಮಾಣ ಹೆಚ್ಚಾಗಿದ್ದು, ಒಟ್ಟು ಸೋಂಕಿತರ ಪೈಕಿ ಸಕ್ರಿಯ ಪ್ರಕರಣಗಳ ಸಂಖ್ಯೆ ಕೇವಲ 20,561 ಆಗಿದೆ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This