ಇಷ್ಟು ದಿನ ತೋಟದಲ್ಲಿ ಬೆವರು ಸುರಿಸುತ್ತಿದ್ದ ಧೋನಿ ಈಗ ಕ್ರಿಕೆಟ್ ಮೈದಾನದಲ್ಲಿ ಕಠಿಣ ತಾಲೀಮು..! @Chennai Super Kings #IPL history @ipl @mahendrasinghdhoni #dhoni #csk @ipl #ipl2021 #saakshatv
ಮಹೇಂದ್ರ ಸಿಂಗ್ ಧೋನಿ ಈಗ ತನ್ನ ಫಾರ್ಮ್ ಹೌಸ್ ನಿಂದ ಹೊರಬಂದಿದ್ದಾರೆ. ಸುಮಾರು ಎರಡುವರೆ ತಿಂಗಳು ಕೃಷಿ ಕಾಯಕಕ್ಕೆ ರಜೆ ಹಾಕಿದ್ದಾರೆ.
ಸದ್ಯ ಚೆನ್ನೈ ನಲ್ಲಿ ಕ್ರಿಕೆಟ್ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಸಹ ಆಟಗಾರರೊಂದಿಗೆ ಮುಂಬರುವ ಐಪಿಎಲ್ ಟೂರ್ನಿಗೆ ತಯಾರಿ ನಡೆಸುತ್ತಿದ್ದಾರೆ.
ನೆಟ್ಸ್ ನಲ್ಲಿ ಬ್ಯಾಟಿಂಗ್ ತಾಲೀಮು ನಡೆಸುತ್ತಿರುವ ಮಹೇಂದ್ರ ಸಿಂಗ್ ಧೋನಿ ಮತ್ತೆ ತನ್ನ ಬ್ಯಾಟಿಂಗ್ ಲಯವನ್ನು ಕಂಡುಕೊಳ್ಳಲು ಶ್ರಮ ಪಡುತ್ತಿದ್ದಾರೆ.
@Chennai Super Kings #IPL history @ipl @mahendrasinghdhoni #dhoni #csk @ipl #ipl2021 #saakshatv
2020ರ, ಆಗಸ್ಟ್ 15ರಂದು ತನ್ನ ವರ್ಣ ರಂಜಿತ ಕ್ರಿಕೆಟ್ ಬದುಕಿಗೆ ಮಹೇಂದ್ರ ಸಿಂಗ್ ಧೋನಿ ವಿದಾಯ ಹೇಳಿದ್ದರು. ಟಿ-ಟ್ವೆಂಟಿ ವಿಶ್ವಕಪ್ ಆಡುವ ಆಸೆಯಲ್ಲಿದ್ದ ಧೋನಿಗೆ ಕೋವಿಡ್ 19 ವೈರಸ್ ನಿರಾಸೆಯನ್ನುಂಟು ಮಾಡಿತ್ತು. (2020ರ ಟಿ-ಟ್ವೆಂಟಿ ವಿಶ್ವಕಪ್ ಮುಂದೂಡಲಾಗಿತ್ತು)
ಆದಾದ ನಂತರ ದುಬೈ ಐಪಿಎಲ್ ನಲ್ಲಿ ಧೋನಿ ಭಾಗಿಯಾಗಿದ್ದರು. ಟೂರ್ನಿಗೆ ಬಹಳ ಆಸಕ್ತಿಯಿಂದ ತಯಾರಿ ನಡೆಸಿದ್ದ ಧೋನಿಗೆ ಆರಂಭದಲ್ಲೇ ಆಪ್ತಮಿತ್ರ ಸುರೇಶ್ ರೈನಾ ಶಾಕ್ ನೀಡಿದ್ದರು. ಟೂರ್ನಿಯ ಮಧ್ಯದಲ್ಲೇ ರೈನಾ ತಂಡದಿಂದ ಹೊರನಡೆದಿದ್ದರು. ಹರ್ಭಜನ್ ಸಿಂಗ್ ಟೂರ್ನಿಯಲ್ಲೇ ಆಡಲಿಲ್ಲ. ಆ ಬಳಿಕ ಚೆನ್ನೈ ತಂಡದ 13 ಮಂದಿಗೆ ಕೋವಿಡ್ ಸೋಂಕು ಆವರಿಸಿಕೊಂಡ ಕಾರಣ ಟೂರ್ನಿಗೆ ಸರಿಯಾಗಿ ತಯಾರಿ ನಡೆಸಲು ಆಗಲಿಲ್ಲ.
ಮತ್ತೊಂದೆಡೆ, ಚೆನ್ನೈ ಸೂಪರ್ ಕಿಂಗ್ಸ್ ನಿರೀಕ್ಷಿತ ಮಟ್ಟದ ಪ್ರದರ್ಶನವನ್ನು ನೀಡಿರಲಿಲ್ಲ. ಆಟಗಾರರ ನಡುವೆ ಹೊಂದಾಣಿಕೆ ಕೊರತೆ, ಕಳಪೆ ಫಾರ್ಮ್ ಹೀಗೆ ಸಮಸ್ಯೆಗಳ ಸುಳಿಯಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲೇ ಕೆಟ್ಟ ಪ್ರದರ್ಶನವನ್ನೇ ನೀಡಿತ್ತು.
2020ರ ಐಪಿಎಲ್ ನಂತರ ಧೋನಿ ಕೃಷಿ ಕ್ಷೇತ್ರದಲ್ಲಿ ಬಿಝಿಯಾಗಿಬಿಟ್ಟಿದ್ದರು. ತನ್ನದೇ ಫಾರ್ಮ್ ಹೌಸ್ ನಲ್ಲಿ ನಾನಾ ಬೆಳೆಗಳನ್ನು ಬೆಳೆಸಿ ಸುದ್ದಿಯಾಗುತ್ತಿದ್ದರು. ಅಷ್ಟೇ ಅಲ್ಲ, ಟ್ರ್ಯಾಕ್ಟರ್ ನಲ್ಲಿ ತಾನೇ ಉಳುಮೆ ಕೂಡ ಮಾಡಿದ್ದರು.
ಇದೀಗ ತನ್ನ ವೃತ್ತಿಯಾಗಿರುವ ಹಾಗೂ ತನ್ನ ಹೆಸರಿಗೆ ನೇಮ್ ಫೇಮ್ ಕೊಟ್ಟಿರುವ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟಿದ್ದಾರೆ.
40ರ ಹರೆಯದ ಧೋನಿ ಫಿಟ್ ನೆಸ್ ಬಗ್ಗೆ ಹೇಳುವುದೇ ಬೇಡ. ಹಾಗೇ ಬ್ಯಾಟಿಂಗ್ ಕಡೆಗೂ ಹೆಚ್ಚಿನ ಗಮನ ಹರಿಸಿರುವ ಮಹಿ, ನೆಟ್ಸ್ ನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.
ಈ ಬಾರಿಯ ಐಪಿಎಲ್ ನಲ್ಲಿ ಶ್ರೇಷ್ಠ ಪ್ರದರ್ಶನ ನೀಡುವುದೇ ಧೋನಿಯ ಮೊದಲ ಆದ್ಯತೆಯಾಗಿದೆ. ಕಳೆದ ಬಾರಿ ಟೀಕೆ ಮಾಡಿದವರಿಗೆ ಮತ್ತು ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್ ತುದಿಗಾಲಿನಲ್ಲಿ ನಿಂತಿದೆ.
@Chennai Super Kings #IPL history @ipl @mahendrasinghdhoni #dhoni #csk @ipl #ipl2021 #saakshatv








