ತ್ರಿವಿಕ್ರಮ್ ಜೊತೆಗೆ ಮಹೇಶ್ ಬಾಬು ಮುಂದಿನ ಸಿನಿಮಾ… ರಾಜಮೌಳಿ ಜೊತೆಗಿನ ಸಿನಿಮಾ ಯಾವಾಗ..??
ಭಾರತದ ಸ್ಟಾರ್ ಡೈರೆಕ್ಟರ್ ರಾಜಮೌಳಿ ಅವರು ಪ್ರಸ್ತುತ ‘RRR’ ಸಿನಿಮಾದ ಪ್ರಚಾರದಲ್ಲಿ ಬ್ಯಸುಇಯಾಗಿದ್ದಾರೆ.. ರಾಜಮೌಳಿ , ರಾಮ್ ಚರಣ್ , ಜ್ಯೂ. NTR ಕಾಂಬಿನೇಷನ್ ನ ಈ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆಯೇ ಇದೆ.. ಇದಾದ ನಂತರ ರಾಜಮೌಳಿ ಅವರು ಟಾಲಿವುಡ್ ನ ಪ್ರಿನ್ಸ್ ಮಹೇಶ್ ಬಾಬುಗೆ ಆಕ್ಷನ್ ಕಟ್ ಹೇಳಲಿದ್ದಾರೆ.. ಈ ಸಿನಿಮಾದಲ್ಲಿ ತಮಿಳಿನ ಮತ್ತೊಬ್ಬ ಸ್ಟಾರ್ ನಟ ಚಿಯಾನ್ ವಿಕ್ರಮ್ ವಿಲ್ಲನ್ ಆಗಲಿದ್ದಾರೆ..
ಸದ್ಯ ಮಹೇಶ್ ಬಾಬು ‘ಸರ್ಕಾರು ವಾರಿ ಪಾಠ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಆದ್ರೆ ಮಹೇಶ್ ಬಾಬು ಅವರು ರಾಜಮೌಳಿ ಅವರ ಜೊತೆಗೆ ಸಿನಿಮಾ ಮಾಡೋದಕ್ಕೂ ಮುನ್ನ ಮತ್ತೊಬ್ಬ ಹಿಟ್ ನಿರ್ದೇಶಕರ ಜೊತೆಗೆ ಕೈ ಜೋಡಿಸಿದ್ದು, ಅವರ ಜೊತೆಗೆ ಮೊದಲು ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ..
ರಾಜಮೌಳಿ ಇದೇ ಮೊದಲ ಬಾರಿಗೆ ಮಹೇಶ್ ಬಾಬು ನಟಿಸಲಿರುವ ಸಿನಿಮಾ ನಿರ್ದೇಶಿಸಲಿದ್ದಾರೆ. ಆದರೆ ರಾಜಮೌಳಿ ಸಿನಿಮಾಕ್ಕೆ ಮುನ್ನವೇ ತೆಲುಗು ಚಿತ್ರರಂಗದ ಮತ್ತೊಬ್ಬ ಹಿಟ್ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಜೊತೆ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಹೊಸ ಸಿನಿಮಾ ಮಾಡುತ್ತಿರುವುದು ಖಚಿತವಾಗಿದೆ.. ನಿರ್ದೇಶಕ ತ್ರಿವಿಕ್ರಮ್, ಸಂಗೀತ ನಿರ್ದೇಶಕ ತಮನ್ ಹಾಗೂ ನಾಗ ವಂಶಿ ಅವರು ದುಬೈನಲ್ಲಿ ನಟ ಮಹೇಶ್ ಬಾಬುರನ್ನು ಭೇಟಿಯಾಗಿ ಸಿನಿಮಾದ ಬಗ್ಗೆ ಚರ್ಚೆ ಮಾಡಿದ್ದಾರೆ.
ತ್ರಿವಿಕ್ರಮ್ ನಿರ್ದೇಶಿಸಲಿರುವ ಸಿನಿಮಾವನ್ನು ಎಸ್ ರಾಧಾ ಕೃಷ್ಣ ನಿರ್ಮಾಣ ಮಾಡಲಿದ್ದಾರೆ. ತ್ರಿವಿಕ್ರಮ್ ಹಾಗೂ ಮಹೇಶ್ ಬಾಬು ಕಾಂಬಿನೇಶನ್ ನ ಸಿನಿಮಾದ ಚಿತ್ರೀಕರಣವು ರಾಜಮೌಳಿ-ಮಹೇಶ್ ಬಾಬು ಸಿನಿಮಾಕ್ಕಿಂತ ಮುಂಚೆಯೇ ಆರಂಭವಾಗಲಿದೆ. ಅಂದ್ಹಾಗೆ ತ್ರಿವಿಕ್ರಮ್ ಅವರು ಈ ಹಿಂದೆ ಸೂಪರ್ ಹಿಟ್ ಸಿನಿಮಾ ‘ಅತಡು’ ವಿನಲ್ಲಿ ಮಹೇಶ್ ಬಾಬುಗೆ ಆಕ್ಷನ್ ಕಟ್ ಹೇಳಿದ್ದರು.. ಖಲೇಜವನ್ನೂ ತ್ರಿವಿಕ್ರಮ್ ಅವರೇ ನಿರ್ದೇಶಿಸಿದ್ದರು. ಇದೀಗ ಈ ಜೋಡಿಯ ಮೂರನೇ ಪ್ರಾಜೆಕ್ಟ್ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.








