Mahesh Babu : OTT ದೈತ್ಯನ ಜೊತೆಗೆ ಕೈ ಜೋಡಿಸಿದ’ಸರ್ಕಾರು ವಾರಿ ಪಾಠ’…!!!
ಸೌತ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಅಭಿನಯದ ಸರ್ಕಾರು ವಾರಿ ಪಾಠ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ..
ಕೋವಿಡ್ ನಿಂದಾಗಿ ಪೋಸ್ಟ್ ಪೋನ್ ಆಗುತ್ತಲೇ ಇದ್ದ ಸಿನಿಮಾ ಇತ್ತೀಚೆಗೆ RRR ಸಿನಿಮಾಗಾಗಿ ಮತ್ತೆ ಬಿಡುಗಡೆ ದಿನಾಂಕ ಮುಂದೂಡಿತ್ತು.. ಈ ನಡುವೆ ಅಭಿಮಾನಿಗಳು ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂದು ಕಾತರದಿಂದ ಕಾಯುತ್ತಿದ್ದುಮ, ಇತ್ತೀಚೆಗಷ್ಟೇ ಸಿನಿಮಾ ತಂಡವು ಹೊಸ ರಿಲೀಸ್ ದಿನಾಂಕ ಬಹಿರಂಗಪಡಿಸಿದೆ.. ಈ ಸಿನಿಮಾ ಮೇ 12, 2022 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.
ಅಂದ್ಹಾಗೆ ಹೊಸ ವಿಚಾರ ಅಂದ್ರೆ , ಒಟಿಟಿಗೆ ಸಿನಿಮಾದ ಮಾರಾಟದ ಬಗ್ಗೆ.. ಹೌದು.. ಥಿಯೇಟರ್ ಗಳಲ್ಲಿ ರಿಲೀಸ್ ಆಗುವುದಕ್ಕೂ ಮುನ್ನವೆ ಸಿನಿಮಾ ಮೇಕರ್ಸ್ ಟಾಪ್ ಒಟಿಟಿ ಸಂಸ್ಥೆ ಅಮೇಜನ್ ಗೆ ಚಿತ್ರದ ಡಿಜಿಟಲ್ ರೈಟ್ಸ್ ಸೇಲ್ ಮಾಡಲು ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಭಾರೀ ಮೊತ್ತಕ್ಕೆ ಅಮೇಜಾನ್ ಪ್ರೈಮ್ ಸಿನಿಮಾ ಖರೀದಿಸಿದೆ ಎನ್ನಲಾಗಿದೆ.. ಆದ್ರೆ ಅಧಿಕೃತವಾಗಿ ಖರೀದಿ ಬಗ್ಗೆ ಆಗಲಿ , ಒಟ್ಟಾರೆ ಖರೀದಿ ಮೊತ್ತದ ಬಗ್ಗೆ ಆಗಲಿ ಮಾಹಿತಿ ಸಿಕ್ಕಿಲ್ಲ…
mahesh babu’s sarkaru vari patta to tie up with amazon prime video ott
ಮೂಲಗಳ ಪ್ರಕಾರ ಸಿನಿಮಾ ಥಿಯೇಟರ್ ಗಳಲ್ಲಿ ಧೂಳೆಬ್ಬಿಸಿದ ಸ್ವಲ್ಪ ಸಮಯದ ನಂತರವೇ ಒಟಿಟಿಗೆ ಬರಲಿದೆ.. ಏತನ್ಮಧ್ಯೆ, ಮಹೇಶ್ ಅವರ ಮುಂಬರುವ ಚಲನಚಿತ್ರದ ಮೊದಲ ಸಿಂಗಲ್ ಫೆಬ್ರವರಿ 14 ರಂದು ಅಂದ್ರೆ ವ್ಯಾಲೆಂಟೈನ್ಸ್ ದಿನದಂದು ಬಿಡುಗಡೆಯಾಗಲಿದೆ. ಚಿತ್ರದ ತಯಾರಕರು “ಮೆಲೋಡಿ ಆಫ್ ದಿ ಇಯರ್” ಹಾಡನ್ನು ರಿಲೀಸ್ ಮಾಡುವ ಪ್ಲಾನ್ ಮಾಡಿಕೊಂಡಿದ್ದಾರೆ.