ನಟ ಮಹೇಶ್ ಬಾಬು ಅವರ ತಾಯಿ ಇಂದಿರಾ ದೇವಿ ನಿಧನ …
ತೆಲುಗು ಸೂಪರ್ ಸ್ಟಾರ್ ನಟ ಮಹೇಶ್ ಬಾಬು ಅವರ ತಾಯಿ ಮತ್ತು ಹಿರಿಯ ಸೂಪರ್‌ಸ್ಟಾರ್ ಕೃಷ್ಣ ಅವರ ಪತ್ನಿ ಇಂದಿರಾ ದೇವಿ ಅವರು ಬುಧವಾರ ನಸುಕಿನ ವೇಳೆ ಹೈದರಾಬಾದ್‌ನಲ್ಲಿ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.
ಕಳೆದ ಕೆಲವು ವಾರಗಳಿಂದ ಮಹೇಶ್ ಬಾಬು ಅವರ ತಾಯಿ ಅಸ್ವಸ್ಥರಾಗಿದ್ದು, ಹೈದರಾಬಾದ್‌ನ ಎಐಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇಂದಿರಾದೇವಿ ಅವರ ಪಾರ್ಥೀವ ಶರೀರವನ್ನು ಪದ್ಮಾಲಯ ಸ್ಟುಡಿಯೋದಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಜನರು ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ಮಹಾ ಪ್ರಸ್ಥಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಇಂದಿರಾ ದೇವಿ ಅವರು ಪತಿ ಕೃಷ್ಣ, ಪುತ್ರಿಯರಾದ ಪದ್ಮಾವತಿ, ಮಂಜುಳಾ, ಪ್ರಿಯದರ್ಶಿನಿ ಮತ್ತು ಪುತ್ರ ಮಹೇಶ್ ಬಾಬು ಅವರನ್ನು ಅಗಲಿದ್ದಾರೆ. ಅವರ ಹಿರಿಯ ಮಗ ರಮೇಶ್ ಬಾಬು ಜನವರಿಯಲ್ಲಿ ನಿಧನರಾದರು.
ಇಂದಿರಾ ದೇವಿಗೆ ನಿಧನಕ್ಕೆ ಹಲವು ತಾರೆಯರು ಸಂತಾಪ ವ್ಯಕ್ತಪಡಿಸಿದ್ದಾರೆ. ನಟ ಚಿರಂಜೀವಿ ಅವರು ಟ್ವಿಟ್ಟರ್ ನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. “ಶ್ರೀಮತಿ ಇಂದಿರಾ ದೇವಿ ಅವರ ನಿಧನದ ಸುದ್ದಿ ನನಗೆ ದುಃಖ ತಂದಿದೆ. ಸೂಪರ್‌ಸ್ಟಾರ್ ಕೃಷ್ಣ, ಸಹೋದರ ಮಹೇಶ್ ಬಾಬು ಮತ್ತು ಕುಟುಂಬದ ಎಲ್ಲ ಸದಸ್ಯರಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
Mahesh Babu’s mother Indira Devi passes away, Chiranjeevi leads Tollywood in paying tribute