ಓ ಮಜ್ಜಿಗೆ ಮೆಣಸೇ ಚಳಿಗಾಲದ ಊಟಕ್ಕೆ ನೀನಿದ್ದರೆ ಚೆನ್ನ ಅಲ್ವಾ ಅನ್ನುತ್ತಾ ಮುಂದಕ್ಕ ಹೋಗೋಣ..
ಮಜ್ಜಿಗೆ ಮೆಣಸು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ,. ಊಟಕ್ಕೆ ಉಪ್ಪಿನಕಾಯಿ ಇದ್ದ ಹಾಗೆ ಈ ಮಜ್ಜಿಗೆ ಮೆಣಸು. ಹಸಿ ಮೆಣಸಿನಕಾಯಿಯನ್ನು ಮೊಸರಿನಲ್ಲಿ ನೆನೆಸಿ ಐದು ದಿನಗಳವರೆಗೆ ಇಟ್ಟು ಮಜ್ಜಿಗೆ ಮೆಣಸು ಮಾಡಬಹುದು.
ಇದನ್ನು ತಯಾರಿಸುವುದು ಹೇಗೆ..?
2 ಟೀ ಸ್ಪೂನ್ ಜೀರಿಗೆ, 1/2 ಟೀ ಸ್ಪೂನ್ ಮೆಂತ್ಯ ಬೀಜಗಳು, 1/4 ಟೀ ಸ್ಪೂನ್ ಇಂಗನ್ನು ಪುಡಿ ಮಾಡಿ ಇಟ್ಟುಕೊಳ್ಳಿ.
ನಂತರ ಪುಡಿ ಮಾಡಿದ ಪದಾರ್ಥಗಳನ್ನು ಉಪ್ಪಿನ ಜೊತೆಗೆ ಮಜ್ಜಿಗೆಗೆ ಸೇರಿಸಿ.
ರಾತ್ರಿ ಮತ್ತು ಮರುದಿನ ಮಜ್ಜಿಗೆಯಲ್ಲಿ ಮೆಣಸಿನಕಾಯಿಗಳನ್ನು ಮುಳುಗಿಸಿ,ನಂತರ ಮೆಣಸಿನಕಾಯಿಗಳನ್ನು ತೆಗೆದು ಬಿಸಿಲಿನಲ್ಲಿ ಒಣಗಿಸಿ.
ಸಂಜೆ ಮತ್ತೆ ಅದೇ ಮಜ್ಜಿಗೆಗೆ ಹಾಕಿ. ಮರುದಿನ, ಅವುಗಳನ್ನು ಮತ್ತೆ ಒಣಗಿಸಿ. ಸುಮಾರು 4-5 ದಿನಗಳವರೆಗೆ ಈ ವಿಧಾನವನ್ನು ಪುನರಾವರ್ತಿಸಿ ಬೇಕು. ನಂತರ ಮೆಣಸಿನಕಾಯಿಯನ್ನು ಸಂಪೂರ್ಣವಾಗಿ ಒಣಗಿಸಿ ಮತ್ತು ಗರಿಗರಿಯಾಗುವವರೆಗೆ 4-5 ದಿನಗಳವರೆಗೆ ಒಣಗಿಸಿ. ಕೋಣೆಯ ಉಷ್ಣಾಂಶಕ್ಕೆ ತಣ್ಣಗಾದ ನಂತರ ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ.
ನಿಮಗೆ ಬೇಕಾದಾಗ ಇದನ್ನು ಎಣ್ಣೆಯಲ್ಲಿ ಕರಿದು ಊಟದ ಜೊತೆ ನೆಂಚಿಕೊಳ್ಳಬಹುದು. ಚಳಿಗಾಲದ ಊಟಕ್ಕೆ ಉತ್ತಮ Combination ಆಗಬಹುದು ಅಲ್ವಾ …?
ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ