ADVERTISEMENT
Sunday, August 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮಕರ ಸಂಕ್ರಾಂತಿ ಹಬ್ಬದ ಪೌರಾಣಿಕ ಹಿನ್ನೆಲೆ, ಎಲ್ಲೆಲ್ಲಿ ಹೇಗೆ ಆಚರಣೆ ಮಾಡಲಾಗುತ್ತೆ ನಿಮಗೆ ಗೊತ್ತಿದ್ಯಾ…!

Namratha Rao by Namratha Rao
January 14, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಮಕರ ಸಂಕ್ರಾಂತಿ ಹಬ್ಬದ ಪೌರಾಣಿಕ ಹಿನ್ನೆಲೆ, ಎಲ್ಲೆಲ್ಲಿ ಹೇಗೆ ಆಚರಣೆ ಮಾಡಲಾಗುತ್ತೆ ನಿಮಗೆ ಗೊತ್ತಿದ್ಯಾ…!

ಹಿಂದೂಗಳು ಆಚರಣೆ ಮಾಡುವ ಮುಖ್ಯ ಹಬ್ಬಗಳಲ್ಲಿ ಒಂದಾಗಿರುವ ಮಕರ ಸಂಕ್ರಾಂತಿಯು ಅನೇಕ ವಿಶೇಷತೆಗಳಿಂದ ಕೂಡಿದೆ. ಒಂದೊಂದು ಭಾಗದಲ್ಲೂ ಒಂದೊಂದು ರೀತಿಯಲ್ಲಿ ವಿಶೇಷವಾಗಿ ಆಚರನೆ ಮಾಡಲಾಗುತ್ತೆ. ಅದ್ರಲ್ಲೂ ದಕ್ಷಿಣ ಭಾರತದಲ್ಲಿಇ ಅದ್ಧೂರಿಯಾಗಿ ಸಂಕ್ರಾಂತಿ ಆಚರಿಸಲಾಗುತ್ತೆ. ವರ್ಷದ ಮೊದಲ ಬೆಳೆ, ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತವಾಗಿದೆ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆ.  ಅದ್ರಲ್ಲೂ ಮುಖ್ಯವಾಗಿ ಕರ್ನಾಟಕ,  ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಈ ಹಬ್ಬವನ್ನ ಅದ್ಧೂರಿಯಾಗಿ ಸಾಂಪ್ರದಾಯಿಕ ರೀತಿಯಲ್ಲಿ ಆಚರನೆ ಮಾಡಲಾಗುತ್ತದೆ.

Related posts

ಕೆಂಪುಕೋಟೆಯ ಸ್ವಾತಂತ್ರ್ಯೋತ್ಸವಕ್ಕೆ ಸತತ 2ನೇ ಬಾರಿಯೂ ಗೈರಾದ ರಾಹುಲ್ ಗಾಂಧಿ, ಖರ್ಗೆ: ರಾಷ್ಟ್ರೀಯ ಹಬ್ಬದಲ್ಲೂ ತಾರಕಕ್ಕೇರಿದ ರಾಜಕೀಯ!

ಕೆಂಪುಕೋಟೆಯ ಸ್ವಾತಂತ್ರ್ಯೋತ್ಸವಕ್ಕೆ ಸತತ 2ನೇ ಬಾರಿಯೂ ಗೈರಾದ ರಾಹುಲ್ ಗಾಂಧಿ, ಖರ್ಗೆ: ರಾಷ್ಟ್ರೀಯ ಹಬ್ಬದಲ್ಲೂ ತಾರಕಕ್ಕೇರಿದ ರಾಜಕೀಯ!

August 16, 2026
ಮೋದಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಕುಸಿತ, RSS ಬಿಟ್ಟು ಎಲ್ಲರೂ ಸ್ವಾತಂತ್ರ್ಯಕ್ಕೆ ಹೋರಾಡಿದ್ರು : ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ

ಮೋದಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಕುಸಿತ, RSS ಬಿಟ್ಟು ಎಲ್ಲರೂ ಸ್ವಾತಂತ್ರ್ಯಕ್ಕೆ ಹೋರಾಡಿದ್ರು : ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ

August 16, 2026

ಈ ಮಕರ ಸಂಕ್ರಾತಿಯ ಹಿನ್ನೆಲೆಯನ್ನ ನೋಡೋದಾದ್ರೆ ಜ್ಯೋತಿಷ್ಯ ಶಾಸ್ತ್ರ, ಪುರಾಣಗಳಲ್ಲಿ ಅನೇಕ ವಿಭಿನ್ನ ರೀತಿಯ ವಿಶ್ಲೇಷಣೆಗಳು ಸಿಗುತ್ತವೆ. ಜೋತಿಷ್ಯ ಶಾಸ್ತ್ರದ ಪ್ರಕಾರ ನೋಡುವುದಾದರೆ,  ಸೂರ್ಯನು ನಿರ್ಯಾಣ ಮಕರರಾಶಿಯನ್ನು ಪ್ರವೇಶಿಸಿವುದನ್ನೇ, ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಜನವರಿ 14 ರಂದು ನಡೆಯುವ ಮಕರಸಂಕ್ರಾಂತಿಯಂದೇ ಉತ್ತರಾಯಣದ ಆಚರಣೆಯೂ ನಡೆಯುತ್ತದೆ. ಮಹಾಭಾರತದ  ಕತೆಯಲ್ಲಿ ಇಚ್ಚಾ ಮರಣಿಯಾದ.  ಭೀಷ್ಮರು ಪ್ರಾಣ ಬಿಡಲು ಉತ್ತರಾಯಣ ಪರ್ವ ಕಾಲವನ್ನು ಕಾದಿದ್ದರು ಎಂಬ ಉಲ್ಲೆಖವೂ ಇದೆ.

ಎಳ್ಳು ಬೆಲ್ಲ ಹಂಚಿ ಖುಷಿ ಹಂಚುವ ಹಬ್ಬ… ವರ್ಷದ ಮೊದಲನೇಯ ಹಬ್ಬ… ಮಕರ ಸಂಕ್ರಾತಿ ಹಬ್ಬ..!

ಇನ್ನೂ ಮಕರ ಸಂಕ್ರಾಂತಿಯನ್ನು ಎಲ್ಲೆಲ್ಲಿ ಯಾವ ರೀತಿ ಆಚರನೆ ಮಾಡಲಾಗುತ್ತೆ ಅನ್ನುವುದನ್ನ ನೋವುಡದಾದ್ರೆ ,

ಕರ್ನಾಟಕ : ಈ ಹಬ್ಬದ ಪ್ರಮುಖ ಭಾಗ ಎಳ್ಳು ಬೆಲ್ಲ.. ಅದ್ರಲ್ಲೂ ಕರ್ನಾಟಕದಲ್ಲಿ ವಿಶೇಷವಾಗಿ ಎಳ್ಳು ಬೆಲ್ಲ ಬೀರಿ ಸಂತೋಷ ಹಂಚುವ ಮೂಲಕ ಹಬ್ಬ ಆಚರಿಸಲಾಗುತ್ತೆ. ಇನ್ನೂ ಸಂಜೆಯಾಗ್ತಿದ್ದಂತೆ ಮಹಿಳೆಯರು ಯುವತಿಯರು ಅಂದವಾಗಿ ಅಲಂಕಾರ ಮಾಡಿಕೊಂಡು ಮನೆಮನೆಗೂ ಎಳ್ಳು ಬೀರುವ ಪದ್ಧತಿಯಿದೆ. ಇದರ ಅನ್ವಯ ಎಳ್ಳು – ಬೆಲ್ಲ , ಕಬ್ಬನ್ನ ಮನೆ ಮನೆಗೂ ಹೋಗಿ ನೀಡಿ ಸಂಭ್ರಮಿಸುತ್ತಾರೆ.

ಎಳ್ಳಿನ ಜೊತೆಗೆ ಬೆಲ್ಲ, ಒಣ ಕೊಬ್ಬರಿ , ಹುರಿಗಡಲೆ, ಕಡಲೇಬೀಜ, ಹುರಿದ ಬಿಳಿ ಎಳ್ಳನ್ನು ಸೇರಿಸಿ “ಎಳ್ಳು ಬೆಲ್ಲ” ತಯಾರಿಸಲಾಗುತ್ತದೆ. ಇನ್ನೂ ಕರ್ನಾಟಕದಲ್ಲಿ ಈ ಹಬ್ಬವನ್ನ ಅದ್ರಲ್ಲೂ  ಪ್ರಮುಖವಾಗಿ ರೈತರಿಗೆ ಈ ಹಬ್ಬ ಸುಗ್ಗಿ ಹಬ್ಬವಾಗಿರುತ್ತೆ. ಇನ್ನೂ ಕರ್ನಾಟಕದ ಕೆಲವು ಭಾಗಗಳಲ್ಲಿ, ಹೊಸದಾಗಿ ಮದುವೆಯಾದ ಮಹಿಳೆ ಯರು ತನ್ನ ಮದುವೆಯ ಮೊದಲ ವರ್ಷದಿಂದ ಐದು ವರ್ಷಗಳ ಕಾಲ ಮುತ್ತೈದೆಯರಿಗೆ ಬಾಳೆಹಣ್ಣುಗಳನ್ನ  ಕೊಡುವ ಸಂಪ್ರದಾಯ ಇದೆ. ಬಾಳೆಹಣ್ಣುಗಳ ಸಂಖ್ಯೆಯನ್ನು ಪ್ರತಿವರ್ಷ ಐದರಿಂದ ಹೆಚ್ಚಿಸಲಾಗುತ್ತದೆ. ಅಷ್ಟೇ ಅಲ್ಲ ಕರ್ನಾಟಕದಲ್ಲಿ ಸಂಕ್ರಾಂತಿ ಹಬ್ಬಬಕ್ಕೆ ಗಾಳಿಪಟ ಹಾರಿಸುವ ಸಂಪ್ರದಾಯವಿದೆ.

ತಮಿಳುನಾಡು: ದ್ರಾವಿಡರ ನಾಡು ತಮಿಳುನಾಡಿನಲ್ಲಿ 5 ದಿನಗಳ ಕಾಲ ಸಂಕ್ರಾಂತಿ ಹಬ್ಬವನ್ನ  ‘ಪೊಂಗಲ್’ ಎಂದು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತೆ.  ಮೊದಲನೇಯ ದಿನ ‘ಭೋಗಿ’ ಎಂದು ಆಚರಣೆ ಮಾಡಲಾಗುತ್ತೆ. ಈ ದಿನದಂದು ಹಳೆಯ ಬಟ್ಟೆ , ಹಳೆಯ ವಸ್ತುಗಳನ್ನ ಸುಟ್ಟು ಹಾಕಲಾಗುತ್ತೆ. ( ಹೊಸತನವನ್ನ ಆಹ್ವಾನಿಸುವ ಉದ್ದೇಶ) ಆ ದಿನ ಹೊಸ ಬಟ್ಟೆ ತೊಟ್ಟು ಸಂಭ್ರಮಿಸುತ್ತಾರೆ. ಮಾರನೇ ದಿನ ‘ಪೊಂಗಲ್’ ಆಚರಣೆ ಮಾಡ್ತಾರೆ. ಆ ದಿನ ಎಲ್ಲಾರು ಒಟ್ಟಾಗಿ ಸೇರಿ ಒಂದು ಮಡಿಕೆಯಲ್ಲಿ ಪೊಂಗಲ್ ಮಾಡಿ ಪರಸ್ಪರ ಎಲ್ಲರೂ ಹಂಚಿಕೊಂಡು ತಿಂದು ಪ್ರಸಾದದ ರೂಪದಲ್ಲಿ ನೆರೆಹೊರಯವರಿಗೂ ಹಂಚುತ್ತಾರೆ.  ಸಮೃದ್ಧಿಯ ಸಂಕೇತವಾಗಿ ಹಾಲು-ಬೆಲ್ಲಗಳನ್ನು ಪಾತ್ರೆಯಲ್ಲಿ ಹಾಕಿ ಆ ಮಿಶ್ರಂವನ್ನ ಕುದಿಸಿ ಪೊಂಗಲ್ ಅನ್ನ  ಉಕ್ಕಿಸಲಾಗುತ್ತದೆ.

ಇನ್ನೂ 3ನೇ ‘ಮಾಟ್ಟು ಪೊಂಗಲ್’ ಅಂದ್ರೆ ಈ ದಿನ ವಿಶೇಷವಾಗಿ ಗೋವುಗಳನ್ನ ಅಲಂಕರಿಸಿ ಅವುಗಳಿಗೆ ಪೂಜೆ ಮಾಡಿ ಬಗೆಬಗೆಯ ಆಹಾರಗಳನ್ನ ನೀಡಲಾಗುತ್ತೆ.   ಮಾರನೇ ದಿನ ‘ಕಾಣಮ್ ಪೊಂಗಲ್’. ಇನ್ನೂ ತಮಿಳುನಾಡಿನಲ್ಲಿ ಈಗಲೂ ಪ್ರಚಲಿತದಲ್ಲಿರುವ ಐತಿಹಾಸಿಕ ಜಲ್ಲಿಕಟ್ಟು ಕ್ರೀಡೆಯನ್ನೂ ಸಹ ಇದೇ ಹಬ್ಬದಲ್ಲಿ ನಡೆಸಲಾಗುತ್ತೆ. ಜಲ್ಲಿಕಟ್ಟು.. ಈ ಕ್ರೀಡೆಯಲ್ಲಿ  ಗೂಳಿಯನ್ನು ಪಳಗಿಸುವ ಆಟ.

ಕೇರಳ : ದೇವರ ನಾಡು  ಕೇರಳದಲ್ಲಿ ಮಕರ ಸಂಕ್ರಾಂತಿಗೆ ಅದರದ್ದೇ ಆದ ವೈಶಿಷ್ಠ್ಯಯಿದ್ದು, ಇಡೀ ವಿಶ್ವದ ಗಮನ ಸೆಳೆಯುತ್ತೆ. ಯಾಕಂದ್ರೆ ಮಕರ ಸಂಕ್ರಾಂತಿ ಹಬ್ಬದಂದು ಶಬರಿ ಮಲೆಯಲ್ಲಿ ಮಕರ ಜ್ಯೋತಿಯ ದರ್ಶನವಾಗುತ್ತೆ. ಈ ಜ್ಯೋತಿ ಅಯ್ಯಪ್ಪ ಸ್ವಾಮಿಯ ದಿವ್ಯ ಜ್ಯೋತಿಯೇ ಎಂಬ ನಂಬಿಕೆಯಿದೆ. ಈ ವಪವಾಡ ವೀಕ್ಷಣೆ ಮಾಡಿ ಅಯ್ಯಪ್ಪನ ಕೃಪೆಗೆ ಪಾತ್ರರಾಗುತ್ತಾರೆ ಅನ್ನೋ ನಂಬಿಕೆಯಿದೆ.  ಹೀಗಾಗಿ ಲಕ್ಷಾಂತರ ಅಯ್ಯಮ ವ್ರತಾಧಾರಿಗಳು ಶಬರಿಮಲೆಗೆ ಆಗಮಿಸಿ ಜ್ಯೋತಿ ವೀಕ್ಷಣೆ ಮಾಡ್ತಾರೆ. ಈ ಜ್ಯೋತಿಯನ್ನು “ಮಕರ ವಿಳಕ್ಕು”ಎಂದು ಕರೆಯಲಾಗುತ್ತದೆ.  ಈ ಜ್ಯೋತಿಯು ಶಬರಿಮಲೆಯ ಬೆಟ್ಟದಿಂದ ಮೂರು ಬಾರಿ ಗೋಚರವಾಗುತ್ತದೆ. ಆದ್ರೆ ಇದು ಈವರೆಗೂ ಸಾಬೀತಾಗಿಲ್ಲ.

ದಕ್ಷಿಣ ಭಾರತ ಬಿಟ್ಟು ಬೇರೆ ರಾಜ್ಯಗಳನ್ನ ನೋಡೋದಾದ್ರೆ …

ಮಹಾರಾಷ್ಟ್ರ : ಮಹಾರಾಷ್ಟ್ರದಲ್ಲಿಯೂ ಈ ಹಬ್ಬವನ್ನ ಅದ್ಧೂರಿಯಾಗಿ ಆಚರಣೆ ಮಾಡಲಾಗ್ತಿದೆ. ಎಳ್ಳು – ಬೆಲ್ಲ ಹಂಚಿ ಎಳ್ಳುಂಡೆಗಳ್ಳ ಹಂಚಿ ಸಂಭ್ರಮಿಸುತ್ತಾರೆ.  ಈ ಉಂಡೆಗಳನ್ನ ಅವರು ಲಡ್ಡುಗಳನ್ನ ಎಂದು ಕರೆಯುತ್ತಾರೆ.  ಎಳ್ಳುಂಡೆ ಹಂಚುವಾಗ ತಿಳ್ಗುಳ್ ಘ್ಯಾ, ಅಣಿ ಗೋಡ್ ಗೋಡ್ ಬೋಲ ಅಂತ ಹೇಳಿ ಹಂಚುತ್ತಾರೆ. ಅಂದ್ರೆ ಎಳ್ಳು ಬೆಲ್ಲ ತಿಂದು  ಒಳ್ಳೊಳ್ಳೆಯ ಮಾತಾಡಿ ಎಂದರ್ಥ.

ಅದ್ರಂತೆ ಗುಜರಾತ್, ಪಂಜಾಬ್, ಹರಿಯಾಣದಲ್ಲೂ ಈ ಹಬ್ಬವನ್ನ ಸಡಗರ ಸಂಭ್ರಮದಿಂದ ವಿಶೇಷವಾಗಿ ಆಚರಣೆ ಮಾಡಲಾಗುತ್ತೆ. ಪಂಜಾಬ್ ಮತ್ತು ಹರಿಯಾಣದಲ್ಲಿ ಈ ಹಬ್ಬವನ್ನ ‘ಲೋಹರಿ’ ಎಂದೂ ಕರೆಯಲಾಗುತ್ತೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

 

 

Tags: different ritualsdifferent statekarnataka tamilunadukarntakamakara sankranthi
ShareTweetSendShare
Join us on:

Related Posts

ಕೆಂಪುಕೋಟೆಯ ಸ್ವಾತಂತ್ರ್ಯೋತ್ಸವಕ್ಕೆ ಸತತ 2ನೇ ಬಾರಿಯೂ ಗೈರಾದ ರಾಹುಲ್ ಗಾಂಧಿ, ಖರ್ಗೆ: ರಾಷ್ಟ್ರೀಯ ಹಬ್ಬದಲ್ಲೂ ತಾರಕಕ್ಕೇರಿದ ರಾಜಕೀಯ!

ಕೆಂಪುಕೋಟೆಯ ಸ್ವಾತಂತ್ರ್ಯೋತ್ಸವಕ್ಕೆ ಸತತ 2ನೇ ಬಾರಿಯೂ ಗೈರಾದ ರಾಹುಲ್ ಗಾಂಧಿ, ಖರ್ಗೆ: ರಾಷ್ಟ್ರೀಯ ಹಬ್ಬದಲ್ಲೂ ತಾರಕಕ್ಕೇರಿದ ರಾಜಕೀಯ!

by Shwetha
August 16, 2026
0

ನವದೆಹಲಿ: ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ...

ಮೋದಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಕುಸಿತ, RSS ಬಿಟ್ಟು ಎಲ್ಲರೂ ಸ್ವಾತಂತ್ರ್ಯಕ್ಕೆ ಹೋರಾಡಿದ್ರು : ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ

ಮೋದಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಕುಸಿತ, RSS ಬಿಟ್ಟು ಎಲ್ಲರೂ ಸ್ವಾತಂತ್ರ್ಯಕ್ಕೆ ಹೋರಾಡಿದ್ರು : ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ

by Shwetha
August 16, 2026
0

ಬೆಂಗಳೂರು: ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ಬಳಿಕ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ತೀವ್ರವಾಗಿ ಕುಸಿಯಲಾರಂಭಿಸಿದ್ದು, ಇಡೀ ದೇಶವೇ ಸಾಲು ಸಾಲು ಕಠಿಣ ಸಮಸ್ಯೆಗಳಿಂದ ತೊಂದರೆಗೆ ಸಿಲುಕಿದೆ...

‘ಆರ್‌ಎಸ್‌ಎಸ್‌ ಇದುವರೆಗೆ ನೋಂದಣಿಯಾಗಿಲ್ಲ, ಮುಂದೆಯೂ ಮಾಡಲ್ಲ’: ‘ನೋಂದಣಿ ಮಾಡಿಕೊಂಡ ಸಂಸ್ಥೆಗಳು ಏನ್ ಮಾಡ್ತಿವೆ ಗೊತ್ತಿದೆ’- ಕಾಂಗ್ರೆಸ್ ಸರ್ಕಾರಕ್ಕೆ ಬಿ.ಎಲ್. ಸಂತೋಷ್‌ ಟಾಂಗ್

‘ಆರ್‌ಎಸ್‌ಎಸ್‌ ಇದುವರೆಗೆ ನೋಂದಣಿಯಾಗಿಲ್ಲ, ಮುಂದೆಯೂ ಮಾಡಲ್ಲ’: ‘ನೋಂದಣಿ ಮಾಡಿಕೊಂಡ ಸಂಸ್ಥೆಗಳು ಏನ್ ಮಾಡ್ತಿವೆ ಗೊತ್ತಿದೆ’- ಕಾಂಗ್ರೆಸ್ ಸರ್ಕಾರಕ್ಕೆ ಬಿ.ಎಲ್. ಸಂತೋಷ್‌ ಟಾಂಗ್

by Shwetha
August 16, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ನೋಂದಣಿ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಆರ್‌ಎಸ್‌ಎಸ್ ನಡುವೆ ಸೃಷ್ಟಿಯಾಗಿರುವ ರಾಜಕೀಯ ಸಂಘರ್ಷ ಈಗ ಮತ್ತಷ್ಟು ತೀವ್ರಗೊಂಡಿದೆ. ಆರ್‌ಎಸ್‌ಎಸ್‌...

ನಾನು ಹಿಂದೂಸ್ತಾನಿ, ನಾನು ಕನ್ನಡಿಗ – ನನ್ನ ದೇಶಪ್ರೇಮಕ್ಕೆ ಬಿಜೆಪಿಯ ಸರ್ಟಿಫಿಕೇಟ್ ಬೇಕಿಲ್ಲ: ಧ್ವಜಾರೋಹಣ ವಿವಾದಕ್ಕೆ ಜಮೀರ್ ತೆರೆ

ನಾನು ಹಿಂದೂಸ್ತಾನಿ, ನಾನು ಕನ್ನಡಿಗ – ನನ್ನ ದೇಶಪ್ರೇಮಕ್ಕೆ ಬಿಜೆಪಿಯ ಸರ್ಟಿಫಿಕೇಟ್ ಬೇಕಿಲ್ಲ: ಧ್ವಜಾರೋಹಣ ವಿವಾದಕ್ಕೆ ಜಮೀರ್ ತೆರೆ

by Shwetha
August 16, 2026
0

ಬೆಂಗಳೂರು: "ನಾನು ಹಿಂದೂಸ್ತಾನಿ, ನಾನು ಕನ್ನಡಿಗ. ದೇಶಾಭಿಮಾನ ಮತ್ತು ದೇಶಭಕ್ತಿಯನ್ನು ನಾವು ಬಿಜೆಪಿಯವರಿಂದ ಕಲಿಯಬೇಕಾದ ಅಗತ್ಯವಿಲ್ಲ" ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ವಿಪಕ್ಷಗಳ ಟೀಕೆಗೆ...

‘ಧರ್ಮೇಂದ್ರ ಪ್ರಧಾನ್ ರನ್ನೇ ಕಿತ್ತು ಹಾಕಿದ್ದೇವೆ, ನೀನ್ಯಾವ ಲೆಕ್ಕ?’: ಖಾಕಿ ಪಡೆಗೆ ಧಮ್ಕಿ ಹಾಕಿದ  ಸಿಜೆಪಿ ನಾಯಕ ಆಶುತೋಷ್ ರಾಂಕಾ

‘ಧರ್ಮೇಂದ್ರ ಪ್ರಧಾನ್ ರನ್ನೇ ಕಿತ್ತು ಹಾಕಿದ್ದೇವೆ, ನೀನ್ಯಾವ ಲೆಕ್ಕ?’: ಖಾಕಿ ಪಡೆಗೆ ಧಮ್ಕಿ ಹಾಕಿದ ಸಿಜೆಪಿ ನಾಯಕ ಆಶುತೋಷ್ ರಾಂಕಾ

by Shwetha
August 16, 2026
0

ಜೈಪುರ: ಜರ್ಜರಿತಗೊಂಡಿದ್ದ ಸರ್ಕಾರಿ ಶಾಲೆಯ ಕಟ್ಟಡದ ಛಾವಣಿ ಕುಸಿದು ಬಿದ್ದಿದ್ದನ್ನು ಖಂಡಿಸಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳದಲ್ಲಿ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ತೀವ್ರ ಹೈಡ್ರಾಮಾ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram