Makara Sankranti : ಎಳ್ಳು ಬೆಲ್ಲ ಸೇವನೆಯ ಮಹತ್ವ – ಮನೆಯಲ್ಲೇ ತಯಾರಿಸುವ ವಿಧಾನ… ಓದಿ
ಇಂದು ಮಕರ ಸಂಕ್ರಾಂತಿ ಹಬ್ಬ. ಸಂಕ್ರಾಂತಿ ಸಮಯದಲ್ಲಿ ಎಳ್ಳು ಬೆಲ್ಲ ತಿಂದು ಒಳ್ಳೆಯದು ಮಾತನಾಡಿ ಎಂಬ ಗಾದೆ ಇದೆ. ಡಿಸೆಂಬರ್ – ಜನವರಿ ತಿಂಗಳು ಬಂತೆಂದರೆ ಚಳಿ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಚರ್ಮಕ್ಕೆ ಹೆಚ್ಚುವರಿ ಕೊಬ್ಬಿನಂಶ ಬೇಕಾಗುತ್ತದೆ. ಹಾಗಾಗಿ ನಮ್ಮ ಹಿರಿಯರು ಚರ್ಮಕ್ಕೆ ಅಗತ್ಯವಾದ ಎಣ್ಣೆ ಮತ್ತು ಪೋಷಕಾಂಶಗಳನ್ನ ಹೆಚ್ಚಿಸುವ ಎಳ್ಳು ಬೆಲ್ಲ ತಿನ್ನಬೇಕು ಎಂದು ಸಂಪ್ರದಾಯ ಮಾಡಿದ್ದಾರೆ.
ಆದ್ದರಿಂದ ಹಬ್ಬಕ್ಕಾಗಿ ಅಂಗಡಿಯಿಂದ ಎಳ್ಳು ಬೆಲ್ಲ ತಂದು ಮಾಡುವ ಬದಲು ಮನೆಯಲ್ಲಿಯೇ ಸುಲಭವಾಗಿ ತಯಾರು ಮಾಡಿ. ನಿಮಗಾಗಿ ಎಳ್ಳು-ಬೆಲ್ಲ ತಯಾರು ಮಾಡುವ ವಿಧಾನ ಇಲ್ಲಿದೆ.
ಬೇಕಾಗುವಸಾಮಾಗ್ರಿಗಳು
- ಬಿಳಿ ಎಳ್ಳು – 200 ಗ್ರಾಂ
- ಅಚ್ಚು ಬೆಲ್ಲ – 2
- ಕೊಬ್ಬರಿ – 2 ಓಳು
- ಹುರಿಗಡಲೆ – 1 ಕಪ್
- ಕಡ್ಲೆಕಾಯಿಬೀಜ – 1 ಕಪ್
- ಜೀರಿಗೆ ಪೆಪ್ಪರ್ ಮೆಂಟ್ – 100 ಗ್ರಾಂ
- ಬಿಳಿ ಬತಾಸು – 100 ಗ್ರಾಂ
ಮಾಡುವ ವಿಧಾನ
* ಶೇಂಗಾ ಅಥವಾ ಕಡ್ಲೆಕಾಯಿ ಬೀಜವನ್ನ ಚೆನ್ನಾಗಿ ಹುರಿದು ಸಿಪ್ಪೆ ತೆಗೆದು ಬಿಡಿ ಬಿಡಿ ಮಾಡಿಕೊಳ್ಳಿ.
* ಎಳ್ಳನ್ನು ಬೆಚ್ಚಗಾಗುವ ಹಾಗೇ ಹುರಿದುಕೊಳ್ಳಿ.
* ಅಚ್ಚು ಬೆಲ್ಲವನ್ನು ಚಾಕುವಿನಿಂದ ಸಣ್ಣ ಸಣ್ಣದಾಗಿ ಕಟ್ ಮಾಡಿ ಪುಡಿ ಮಾಡಿಕೊಳ್ಳಿ .
* ಕೊಬ್ಬರಿ ಕಪ್ಪು ಭಾಗವನ್ನು ತೆಗೆದು ಚಿಕ್ಕದಾಗಿ ಕಟ್ ಮಾಡಿ.
* ಹುರಿಗಡಲೆಯನ್ನು ಬೆಚ್ಚಗಾಗುವಷ್ಟು ಹುರಿದುಕೊಳ್ಳಿ.
* ಈಗ ಒಂದು ಮಿಕ್ಸಿಂಗ್ ಬೌಲ್ಗೆ ಎಳ್ಳು, ಕಡ್ಲೆಕಾಯಿಬೀಜ, ಹುರಿಗಡಲೆ, ಸಣ್ಣಗೆ ತುಂಡರಿಸಿದ ಬೆಲ್ಲ, ಕೊಬ್ಬರಿ, ಜೀರಿಗೆ ಪೆಪ್ಪರ್ ಮೆಂಟ್, ಬಿಳಿ ಬತಾಸು ಸೇರಿಸಿ ಮಿಕ್ಸ್ ಮಾಡಿ.
ಇದೀಗ ಎಳ್ಳಿ ಬೆಲ್ಲದ ಮಿಶ್ರಣ ಹಂಚಲು ರೆಡಿಯಾಗಿದೆ. ಅಂಗಡಿಯಲ್ಲಿ ಸಿಗುವ ರೆಡಿ ಮಿಕ್ಸ್ ಗಿಂತ ಮನೆಯಲ್ಲೇ ಮಾಡಿ ಪ್ರೆಶ್ ಆಗಿ ತಿನ್ನಿರಿ.
Makara Sankranti : Importance of consuming Sesame jaggery – how to prepare it at home… read








