ಆನ್ಲೈನ್ ಶಾಪಿಂಗ್ ಮಾಡುವ ಮೊದಲು ಈ ವಿಚಾರಗಳು ನಿಮಗೆ ತಿಳಿದಿರಲಿ
ಮಂಗಳೂರು, ಅಕ್ಟೋಬರ್03: ಆನ್ಲೈನ್ ಶಾಪಿಂಗ್ ನಲ್ಲಿ ಗ್ರಾಹಕರು ಮನೆಯಲ್ಲೇ ಕುಳಿತು ಬೇಕಾದ ವಸ್ತುಗಳನ್ನು ಖರೀದಿಸಲು ಸಾಧ್ಯವಿದೆ. ಬಹುತೇಕ ಜನರು ಈ ಸೌಲಭ್ಯದ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ನಾಣ್ಯಕ್ಕೆ ಎರಡು ಮುಖವಿರುವಂತೆ ಆನ್ಲೈನ್ ಶಾಪಿಂಗ್ ಅನುಕೂಲ ಮತ್ತು ಅನಾನುಕೂಲತೆಗಳನ್ನು ಹೊಂದಿದೆ.
ಆನ್ಲೈನ್ ಶಾಪಿಂಗ್ ನಲ್ಲಿ ತುಂಬಾ ಅನುಕೂಲತೆ ಇದ್ದು, ಕೆಲವು ಅನಾನುಕೂಲಗಳೂ ಇವೆ. ಹಾಗಾಗಿ ಆನ್ಲೈನ್ ಶಾಪಿಂಗ್ ಮಾಡುವ ಮೊದಲು ಇದನ್ನು ತಿಳಿದಿದ್ದರೆ ಉತ್ತಮ.
ಮೊದಲು ಆನ್ಲೈನ್ ಶಾಪಿಂಗ್ ನ ಅನುಕೂಲತೆಗಳನ್ನು ತಿಳಿಯೋಣ.
ಆನ್ಲೈನ್ ಶಾಪಿಂಗ್ ಮಾಡುವುದು ತುಂಬಾ ಸುಲಭ. ಖರೀದಿಸಲು ನೀವು ಎಲ್ಲಿಗೂ ಹೋಗಬೇಕಾಗಿಲ್ಲ. ಮನೆಯಲ್ಲೇ ಕೂತು ನಿಮಗೆ ಬೇಕಾದ ಐಟಂ ಅನ್ನು ಆನ್ಲೈನ್ ನಲ್ಲಿ ಬುಕ್ ಮಾಡಿ, ಆರ್ಡರ್ ಮಾಡಿದರೆ ಆಯಿತು. ಕೆಲವೇ ದಿನಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ಆ ಐಟಂ ಬರುತ್ತದೆ.
ಆನ್ಲೈನ್ ನಲ್ಲಿ ಸ್ಪರ್ಧೆ ಇರುವ ಕಾರಣ ನೀವು ಸರಕುಗಳನ್ನು ರಿಯಾಯಿತಿ ದರದಲ್ಲಿ ಪಡೆಯುತ್ತೀರಿ. ಹಬ್ಬದ ಸಮಯದಲ್ಲಿ ಹೆಚ್ಚಿನ ಕೊಡುಗೆಗಳು ಇರುತ್ತವೆ. ಇದು ಗ್ರಾಹಕರಿಗೆ ಪ್ರಯೋಜನಕಾರಿಯಾಗಿದೆ,
ಹಾಗೆಯೇ ಇಲ್ಲಿ ವಿವಿಧ ಉತ್ಪನ್ನಗಳನ್ನು ಕಾಣಬಹುದಾಗಿದೆ.
ಇದು ನಮಗೆ ಉಪಯುಕ್ತವಾದದ್ದನ್ನು ಖರೀದಿಸಲು ಸುಲಭ ಮಾಡುತ್ತದೆ. ಅಷ್ಟೇ ಅಲ್ಲ ಅನೇಕ ಜನರು ತಮ್ಮ ಹಳೆಯ ವಸ್ತುಗಳನ್ನು ಮಾರಾಟ ಮಾಡಲು ಆನ್ಲೈನ್ ವ್ಯವಸ್ಥೆಗಳನ್ನು ಬಳಸುತ್ತಾರೆ ಮತ್ತು ಕೆಲವೊಮ್ಮೆ ಮಾರುಕಟ್ಟೆಯಲ್ಲಿ ಇನ್ನೂ ಬಿಡುಗಡೆಯಾಗದ ವಸ್ತುಗಳು ಆನ್ಲೈನ್ ಶಾಪಿಂಗ್ ಮೂಲಕ ಸುಲಭವಾಗಿ ಲಭ್ಯವಿದೆ.
ಅನಾನುಕೂಲತೆಗಳು
ಅನೇಕ ಬಾರಿ, ಆನ್ಲೈನ್ ಶಾಪಿಂಗ್ ನ ಶಿಪ್ಪಿಂಗ್ ಶುಲ್ಕವು ಬಹಳಷ್ಟು ಹೆಚ್ಚು. ಇದು ಉತ್ಪನ್ನದ ಬೆಲೆಗಿಂತ ಹೆಚ್ಚಿನದನ್ನು ಪಾವತಿಸುವಂತೆ ಮಾಡುತ್ತದೆ.
ಆನ್ಲೈನ್ ಶಾಪಿಂಗ್ನಲ್ಲಿ, ಉತ್ಪನ್ನದ ಚಿತ್ರವನ್ನು ಮಾತ ಕಾಣಬಹುದಾಗಿದೆ. ಇದರಿಂದಾಗಿ ಗುಣಮಟ್ಟವನ್ನು ತಿಳಿಯಲು ಸಾಧ್ಯವಿಲ್ಲ. ಹಾಗಾಗಿ ಉತ್ತಮ ಗುಣಮಟ್ಟದ ಉತ್ಪನ್ನವು ಕೆಲವೊಮ್ಮೆ ನಮ್ಮನ್ನು ತಲುಪುವುದಿಲ್ಲ.
ನಕಲಿ ವೆಬ್ಸೈಟ್ ಸಹ ಆನ್ಲೈನ್ ಮಾರುಕಟ್ಟೆಯಲ್ಲಿ ಇರುವ ಕಾರಣ, ಗ್ರಾಹಕರು ವಂಚನೆಗೆ ಬಲಿಯಾಗುವ ಸಾಧ್ಯತೆ ಇದೆ.
ಆನ್ಲೈನ್ನಲ್ಲಿ ಶಾಪಿಂಗ್ ಮಾಡುವಾಗ ಜಾಗರೂಕರಾಗಿದ್ದರೆ ವಂಚನೆಗೆ ಬಲಿಯಾಗುವುದರಿಂದ ತಪ್ಪಿಸಿಕೊಳ್ಳಬಹುದು.
Our Website : https://saakshatv.com/
Subscribe Now on YouTube – https://www.youtube.com/channel/UCJKH.
Like us on Facebook: https://www.facebook.com/saakshatv/
Follow us on Twitter : https://twitter.com/SaakshaTv
Follow us on Instagram : https://www.instagram.com/saaksha_tv/ Subscribe to our Telegram Channel : https://t.me/saakshatv