ಮುಂಬಯಿ : ಅದಿತಿ ರಾವ್ ಹದರಿ ಮತ್ತು ಜಯಸೂರ್ಯರ ಸುಫಿಯುಂ ಸುಜಾತವುಂನ ಯಶಸ್ವಿ ವಿಶ್ವ ಪ್ರದರ್ಶನದ ನಂತರ, ಅಮೆಜಾನ್ ಪ್ರೈಂ ವೀಡಿಯೊ ಇಂದು ಮಲಯಾಳಿ ಚಲನಚಿತ್ರ ಸಿಯು ಸೂನ್ ನ ನೇರ-ಸೇವೆಯ ವಿಶ್ವ ಪ್ರದರ್ಶನವನ್ನು ಪ್ರಕಟಿಸಿದೆ. ಮಹೇಶ್ ನಾರಾಯಣ್(ಟೇಕ್ ಆಫ್) ಅವರು ನಿರ್ದೇಶಿಸಿದ ಈ ಸೆಳೆಯುವ ಡ್ರಾಮ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಸೂಪರ್ ಸ್ಟಾರ್ ಫಹಾದ್ ಫಾಸಿಲ್ (ಟೇಕ್ ಆಫ್, ಕುಂಬಲಾಂಗಿ ನೈಟ್ಸ್), ರೋಷನ್ ಮ್ಯಾಥ್ಯು(ಕೂಡೆ, ದಿ ಎಲ್ಡರ್ ವನ್) ಮತ್ತು ದರ್ಶನಾ ರಾಜೇಂದ್ರನ್ (ಕವನ್, ವೈರಸ್) ಅವರು ನಟಿಸಿದ್ದಾರೆ. ಸಿಯು ಸೂನ್ ಕೇರಳದ ಒಬ್ಬ ಸಾಫ್ಟ್‍ವೇರ್ ಇಂಜಿನಿಯರ್ ಅವರ ಆಕರ್ಷಕ ಕಥೆಯಾಗಿದ್ದು, ಇದರಲ್ಲಿ ಅವರು ತಮ್ಮ ಕುಟುಂಬದ ಆಸೆಯಂತೆ ತನ್ನ ದುಬೈ ಮೂಲದ ಸೋದರರಿಗೆ ಅವರ ಕಾಣೆಯಾದ ಮದುಮಗಳನ್ನು ಹುಡುಕಲು ಸಹಾಯ ಮಾಡುತ್ತಾರೆ. ಕಾಣೆಯಾಗುವ ಮುನ್ನ ವಧುವು ಒಂದು ಆತ್ಮಹತ್ಯೆಯ ವೀಡಿಯೊ ಸಂದೇಶವನ್ನು ಕಳಿಸಿರುತ್ತಾರೆ. ಲಾಕ್‍ಡೌನ್ ಅವಧಿಯಲ್ಲಿ ಒಂದು ನಿಯಂತ್ರಿತ ಮತ್ತು ನಿರ್ಬಂಧಿತ ಪರಿಸರದಲ್ಲಿ ಒಂದು ಫೋನ್ ನಲ್ಲಿ ಚಿತ್ರೀಕರಿಸಲಾಗಿರುವುದು ಈ ಚಿತ್ರದ ವಿಶೇಷತೆಯಾಗಿದೆ. ಭಾರತ ಮತ್ತು 200 ದೇಶಗಳ ಪ್ರೈಂ ಸದಸ್ಯರು ಅಮೆಜಾನ್ ಪ್ರೈಂ ವೀಡಿಯೊದಲ್ಲಿ ಸೆಪ್ಟೆಂಬರ್ 1ರಿಂದ ಈ ಚಿತ್ರವನ್ನು ಸ್ಟ್ರೀಂ ಮಾಡಿ ನೋಡಬಹುದು.
ಅನೇಕ ಭಾಷೆಗಳಲ್ಲಿ ಮತ್ತು ಅನನ್ಯವಾದ ಮಾದರಿಗಳಲ್ಲಿ ನಮ್ಮ ಗ್ರಾಹಕರಿಗೆ ಇತ್ತೀಚಿನ ಮನರಂಜನೆಯನ್ನು ನಿರಂತರವಾಗಿ ತರುವುದು ನಮ್ಮ ಗುರಿಯಾಗಿದೆ. ಸೂಫಿಯುಂ ಸುಜಾತವುಂ, ಟ್ರಾನ್ಸ್, ಲುಸಿಫರ್ ಮತ್ತು ಕುಂಬಲಂಗಿ ನೈಟ್ಸ್ ನಂತಹ ಮಲಯಾಳಿ ಚಿತ್ರಗಳ ದೊಡ್ಡ ಯಶಸ್ಸನ್ನು ನಾವು ಕಂಡಿದ್ದೇವೆ ಎನ್ನುತ್ತಾರೆ ವಿಜಯ್ ಸುಬ್ರಮಣ್ಯಂ, ನಿರ್ದೇಶಕರು ಮತ್ತು ಮುಖ್ಯಸ್ಥರು, ಕಂಟೆಂಟ್, ಅಮೆಜಾನ್ ಪ್ರೈಂ ವೀಡಿಯೊ ಇಂಡಿಯಾ. ‘ಫಹಾದ್ ಫಾಸಿಲ್ ಅವರು ಭಾರತೀಯ ಭಾಷಾ ಬ್ಲಾಕ್ ಬಸ್ಟರ್‍ಗಳಿಗೆ ಹೆಸರಾಗಿದ್ದಾರೆ, ಮತ್ತು ಒಂದು ಪ್ರಾಯೋಗಿಕ ಚಿತ್ರ ಮಾದರಿಯಲ್ಲಿ ಅವರೊಂದಿಗೆ ನಿರ್ದೇಶಕ ಮಹೇಶ್ ನಾರಾಯಣ್ ಸೇರಿರುವುದು, ಖಂಡಿತ ನೋಡಲೇ ಬೇಕಾದ ಚಿತ್ರ. ಓಣಂ ಹತ್ತಿರವಿದ್ದು, ಸಿಯು ಸೂನ್ ಬಿಡುಗಡೆಯೊಂದಿಗೆ ಹಬ್ಬಕ್ಕೆ ಹೆಚ್ಚು ಸಹಿ ಸೇರಿಸಲು ನಾವು ಯತ್ನಿಸಿದ್ದೇವೆ.”
“ಮಹೇಶ್ ರೊಂದಿಗೆ ಕೆಲಸ ಮಾಡುವುದು ಯಾವಾಗಲೂ ಒಂದು ಸ್ಫೂರ್ತಿದಾಯಕ ಅನುಭವವಾಗಿದೆ. ನಮ್ಮ ಹಿಂದಿನ ಬ್ಲಾಕ್ ಬಸ್ಟರ್ ಟೇಕ್ ಆಫ್‍ನಲ್ಲಿ ನಾವು ಅದ್ಭುತವಾದ ಅನುಭವ ಪಡೆದಿದ್ದೆವು” ಎನ್ನುತ್ತಾರೆ ನಟ ಮತ್ತು ನಿರ್ಮಾಪಕ ಫಹಾದ್ ಫಾಸಿಲ್. “ಸಿಯು ಸೂನ್ ಮಾಡುವುದು ಒಂದು ಆಸಕ್ತಿಕರ ಮತ್ತು ರೋಮಾಂಚಕ ಅನುಭವವಾಗಿತ್ತು. ಇಡೀ ಚಿತ್ರವನ್ನು ಲಾಕ್‍ಡೌನ್ ಅವಧಿಯಲ್ಲಿ ಚಿತ್ರೀಕರಿಸಲಾಗಿದ್ದು, ಇಂತಹ ಸಮಯದಲ್ಲಿಯೂ ನಮ್ಮ ವೀಕ್ಷಕರಿಗೆ ಆಕರ್ಷಕ ವಿಷಯಗಳನ್ನು ತಂದು ಅವರಿಗೆ ಮನರಂಜನೆ ನೀಡಲು ನಮಗೆ ಖುಷಿಯಾಗಿದೆ, ಮತ್ತು ವಿಶ್ವಾದ್ಯಂತ ನಮ್ಮ ಅಭಿಮಾನಿಗಳು ಈ ಚಿತ್ರವನ್ನು ಆನಂದಿಸಿ, ಅದನ್ನು ಪ್ರೀತಿಸುತ್ತಾರೆ ಎಂದು ಆಶಿಸುತ್ತೇನೆ.”
“ಸಿಯು ಸೂನ್ ಒಂದು ಕಂಪ್ಯೂಟರ್ ಸ್ಕ್ರೀನ್ ಆಧಾರಿತ ರೋಮಾಂಚಕ ಚಿತ್ರ – ಇದನ್ನು ಭಾರತೀಯ ಚಿತ್ರರಂಗದಲ್ಲಿ ಹೆಚ್ಚಾಗಿ ಕಾಣದ ಹೊಸ ಪರಿಕಲ್ಪನೆ’ಎನ್ನುತ್ತಾರೆ ನಿರ್ದೇಶಕ ಮಹೇಶ್ ನಾರಾಯಣ್.” ಈ ಅನಿರೀಕ್ಷಿತ ಅವಧಿಯಲ್ಲಿ ಮಿಥವಾಸ್ತವಿಕವಾಗಿ ಸಂಪರ್ಕದಲ್ಲಿರಲು ಜನರು ಯತ್ನಿಸುತ್ತಿದ್ದಾ ಮತ್ತು ಅನೇಕ ಸ್ಕ್ರೀನ್ ಉಪಕರಣಗಳ ಮೂಲಕ ಕಥಾನಿರೂಪಣೆಯ ಹೊಸ ಮಾದರಿಯನ್ನು ಅನ್ವೇಷಿಸುವ ಮೂಲಕ ಈ ಕಲ್ಪನೆಯನ್ನು ನಾವು ಒಂದು ಹೆಜ್ಜೆ ಮುಂದೆ ಒಯ್ಯಲು ಯತ್ನಿಸಿದ್ದೇವೆ. ಮಿಥವಾಸ್ತವಿಕ ಸಂವಹನದ ತಂತ್ರಾಂಶಗಳು ಮತ್ತು ಅದರ ಡೆವೆಲಪರ್‍ಗಳ ನೆರವಿಲ್ಲದೆ ಈ ಚಿತ್ರವನ್ನು ಸೃಷ್ಟಿಸಲು ಅಥವಾ ಕಲ್ಪಿಸಿಕೊಳ್ಳಲು ಸಾಧ್ಯವಿರುತ್ತಿರಲಿಲ್ಲ. ಇಂತಹ ಸಮಯದಲ್ಲಿ ತಮ್ಮ ಸೃಜನಶೀಲತೆಯನ್ನು ತಿಳಿದುಕೊಳ್ಳಲು ಇದು ಅನೇಕ ಕಲಾವಿದರಿಗೆ ಸ್ಫೂರ್ತಿ ನೀಡುತ್ತದೆ ಮತ್ತು ಇಂತಹ ಸವಾಲಿನ ಸಮಯಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಂಡು ಕಥಾನಿರೂಪಣೆಯ ಹೊಸ ಮಾದರಿಗಳನ್ನು ಅನ್ವೇಷಿಸಲು ಸಾಧ್ಯವಾಗಿಸುತ್ತದೆ ಎಂದು ಆಶಿಸುತ್ತೇನೆ. ಅಮೆಜಾನ್ ಪ್ರೈಂ ವೀಡಿಯೊದಲ್ಲಿ ಸಿಯು ಸೂನ್ ಅನ್ನು ವಿಶ್ವಾದ್ಯಂತ ಪ್ರದರ್ಶನ ಮಾಡಲು ನನಗೆ ಹರ್ಷವಾಗಿದೆ.
ಸಿಯು ಸೂನ್ ಪ್ರೈಂ ವೀಡಿಯೊ ಪಟ್ಟಿಯಲ್ಲಿರುವ ಅನೇಕ ಹಾಲಿವುಡ್ ಮತ್ತು ಬಾಲಿವುಡ್ ಚಲನಚಿತ್ರ ಮತ್ತು ಟಿವಿ ಪ್ರದರ್ಶನಗಳನ್ನೂ ಸೇರುತ್ತದೆ, ಇದರಲ್ಲಿ ಭಾರತೀಯ ಚಿತ್ರಗಳಾದ ಗುಲಾಬೊ ಸಿತಾಬೊ, ಶಾಕುಂತಲಾ ದೇವಿ, ಪೆÇಣ್ಮಗಳ್ ವಂದಾಳ್, ಲಾ, ಫ್ರೆಂಚ್ ಬಿರ್ಯಾನಿ, ಸೂಫಿಯುಂ ಸುಜಾತವುಂ, ಮತ್ತು ಪೇಂಗ್ವಿನ್ ಮತ್ತು ಭಾರತೀಯರು ನಿರ್ಮಿಸಿದ ಅಮೆಜಾನ್ ಒರಿಜಿನಲ್ ಸರಣಿಯಾದ ಬಂದಿಷ್ ಬ್ಯಾಂಡಿಟ್ಸ್, ಬ್ರೀತ್: ಇಂಟು ದ ಷಾಡೋಸ್, ಪಾತಾಳ್ ಲೋಕ್,ಫೋರ್ ಮೋರ್ ಶಾಟ್ಸ್ ಪ್ಲೀಸ್, ಪಾತಾಳ್ ಲೋಕ್, ದಿ ಫರ್ಗಾಟನ್ ಆರ್ಮಿ ಆಜಾದಿ ಕೆ ಲಿಯೆ, ದಿ ಫ್ಯಾಮಿಲಿ ಮ್ಯಾನ್, ಮಿರ್ಜಾಪುರ್, ಇನ್ಸೈಡ್ ಎಡ್ಜ್ ಮತ್ತು ಮೇಡ್ ಇನ್ ಹೆವನ್ ಮತ್ತು ಪ್ರಶಸ್ತಿ ವಿಜೇತ ಮತ್ತು ಪ್ರಶಂಸೆ ಪಡೆದ ಜಾಗತಿಕ ಅಮೆಜಾನ್ ಒರಿಜಿನಲ್ ಸರಣಿಯಾದ ಟಾಂ ಕ್ಲಾನ್ಸಿಸ್ ಜ್ಯಾಕ್ ರಯಾನ್, ದಿ ಬಾಯ್ಸ್, ಹಂಟರ್ಸ್, ಫ್ಲೀಬ್ಯಾಗ್ ಮತ್ತು ದಿ ಮಾರ್ವೆಲಸ್ ಮಿಸಸ್ ಮೈಸೆಲ್ ಗಳೂ ಸೇರಿದೆ ಮತ್ತು ಇವೆಲ್ಲವೂ ಪ್ರೈಂ ವೀಡಿಯೊದಲ್ಲಿ ಸಿಗಲಿದೆ, ಇದು ಅಮೆಜಾನ್ ಪ್ರೈಂ ಸದಸ್ಯರಿಗೆ ಹೆಚ್ಚು ವೆಚ್ಚವಿಲ್ಲದೆ ಲಭ್ಯವಿದೆ. ಈ ಸೇವೆಗಳಲ್ಲಿ ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಪಂಜಾಬಿ ಮತ್ತು ಬೆಂಗಾಲಿ ಚಿತ್ರಗಳೂ ಲಭ್ಯವಿದೆ.
ಪ್ರೈಂ ಸದಸ್ಯರು ಸಿಯು ಸೂನ್ ಅನ್ನು ಎಲ್ಲಿಯಾದರೂ, ಯಾವಸಮಯದಲ್ಲಾದರೂ, ಸ್ಮಾರ್ಟ್ ಟಿವಿ, ಮೊಬೈಲ್, ಫಿರ್ ಟಿವಿ, ಪೈಟ್ ಟಿವಿ ಸ್ಟಿಕ್, ಫೈರ್ ಟಾಬ್ಲೆಟ್, ಆಪಲ್ ಟಿವಿ, ಏರ್ಟೆಲ್, ವೊಡಾಫೋನ್ ಇತ್ಯಾದಿ ಪ್ರೈಂ ವೀಡಿಯೊ ಆಪ್ ಗಳಲ್ಲಿ ನೋಡಬಹುದು. ಪ್ರೈಂ ವೀಡಿಯೊ ಆಪ್‍ನಲ್ಲಿ ಸದಸ್ಯರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸಂಚಿಕೆಗಳನ್ನು ತಮ್ಮ ಮೊಬೈಲ್ ಉಪಕರಣಗಳಲ್ಲಿ ಡೌನ್ಲೋಡ್ ಮಾಡಿ ನೋಡಬಹುದು.
ಭಾರತದಲ್ಲಿ ಪ್ರೈಂ ವೀಡಿಯೊ ವಾರ್ಷಿಕ ರೂ. 999 ಅಥವಾ ಮಾಸಿಕ ರೂ. 129 ಗೆ ಪ್ರೈಂ ಸದಸ್ಯತ್ವದಲ್ಲಿ ಲಭ್ಯವಿದೆ. ಹೊಸ ಗ್ರಾಹಕರು www.amazon.in/primeನಲ್ಲಿ ಹೆಚ್ಚು ಮಾಹಿತಿ ಪಡೆಯಬಹುದು ಮತ್ತು ಉಚಿತ 30 ದಿನಗಳ ಪರೀಕ್ಷೆಯನ್ನು ಪಡೆಯಬಹುದು.
ಅಮೆಜಾನ್ ಪ್ರೈಂ ವಿಡಿಯೋ ಬಗ್ಗೆ ಪ್ರೈಂ ವೀಡಿಯೊ ಒಂದು ಉತ್ಕೃಷ್ಟ ಸ್ಟ್ರೀಮಿಂಗ್ ಸೇವೆಯಾಗಿದ್ದು, ಪ್ರೈಂ ಸದಸ್ಯರಿಗೆ ಪ್ರಶಸ್ತಿ ವಿಜೇತ ಅಮೆಜಾನ್ ಒರಿಜಿನಲ್ ಸರಣಿಗಳನ್ನು, ಸಾವಿರಾರು ಚಲನಚಿತ್ರ ಮತ್ತು ಟಿವಿ ಕಾರ್ಯಕ್ರಮಗಳನ್ನು ನೀಡುತ್ತದೆ – ಇವೆಲ್ಲವನ್ನೂ ಅವರು ಒಂದೇ ಸ್ಥಳದಲ್ಲಿ ಸುಲಭವಾಗಿ ಹುಡುಕಿ ನೋಡಬಹುದು. PrimeVideo.comನಲ್ಲಿ ಹೆಚ್ಚು ತಿಳಿಯಿರಿ.
ಪ್ರೈಂ ವೀಡಿಯೊದಲ್ಲಿ ಸಿಗಲಿದೆ: ಪ್ರೈಂ ವೀಡಿಯೊ ಪಟ್ಟಿಯಲ್ಲಿರುವ ಅನೇಕ ಹಾಲಿವುಡ್ ಮತ್ತು ಬಾಲಿವುಡ್ ಚಲನಚಿತ್ರ ಮತ್ತು ಟಿವಿ ಪ್ರದರ್ಶನಗಳನ್ನೂ ಸಿಯು ಸೂನ್ ಚಿತ್ರ ಸೇರುತ್ತದೆ, ಇದರಲ್ಲಿ ಭಾರತೀಯರು ನಿರ್ಮಿಸಿದ ಅಮೆಜಾನ್ ಒರಿಜಿನಲ್ ಸರಣಿಯಾದ ಫೋರ್ ಮೋರ್ ಶಾಟ್ಸ್ ಪ್ಲೀಸ್, ದಿ ಫ್ಯಾಮಿಲಿ ಮ್ಯಾನ್, ಮಿರ್ಜಾಪುರ್, ಇನ್ಸೈಡ್ ಎಡ್ಜ್ ಮತ್ತು ಮೇಡ್ ಇನ್ ಹೆವನ್ ಮತ್ತು ಪ್ರಶಸ್ತಿ ವಿಜೇತ ಮತ್ತು ಪ್ರಶಂಸೆ ಪಡೆದ ಜಾಗತಿಕ ಅಮೆಜಾನ್ ಒರಿಜಿನಲ್ ಸರಣಿಯಾದ ಟಾಂ ಕ್ಲಾನ್ಸಿಸ್ ಜ್ಯಾಕ್ ರಯಾನ್, ದಿ ಬಾಯ್ಸ್, ಹಂಟರ್ಸ್, ಫ್ಲೀಬ್ಯಾಗ್ ಮತ್ತು ದಿ ಮಾರ್ವೆಲಸ್ ಮಿಸಸ್ ಮೈಸೆಲ್ ಗಳೂ ಸೇರಿದೆ ಮತ್ತು ಇವೆಲ್ಲವೂ ಪ್ರೈಂ ವೀಡಿಯೊದಲ್ಲಿ ಸಿಗಲಿದೆ, ಇದು ಅಮೆಜಾನ್ ಪ್ರೈಂ ಸದಸ್ಯರಿಗೆ ಹೆಚ್ಚು ವೆಚ್ಚವಿಲ್ಲದೆ ಲಭ್ಯವಿದೆ. ಈ ಸೇವೆಗಳಲ್ಲಿ ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಪಂಜಾಬಿ ಮತ್ತು ಬೆಂಗಾಲಿ ಚಿತ್ರಗಳೂ ಲಭ್ಯವಿದೆ.
ತಕ್ಷಣದ ಲಭ್ಯತೆ: ಪ್ರೈಂ ಸದಸ್ಯರು ಎಲ್ಲಾ ಟೈಟಲ್ ಗಳನ್ನೂ ಎಲ್ಲಿಯಾದರೂ, ಯಾವಸಮಯದಲ್ಲಾದರೂ, ಸ್ಮಾರ್ಟ್ ಟಿವಿ, ಮೊಬೈಲ್, ಫಿರ್ ಟಿವಿ, ಪೈಟ್ ಟಿವಿ ಸ್ಟಿಕ್, ಫೈರ್ ಟಾಬ್ಲೆಟ್, ಆಪಲ್ ಟಿವಿ, ಇತ್ಯಾದಿ ಪ್ರೈಂ ವೀಡಿಯೊ ಆಪ್ ಗಳಲ್ಲಿ ನೋಡಬಹುದು. ಪ್ರೈಂ ವೀಡಿಯೊ ಗ್ರಾಹಕರಿಗೆ ಏರ್ಟೆಲ್, ವೊಡಾಫೋನ್ ಪ್ರಿಪೈಡ್ ಮತ್ತು ಪೋಸ್ಟ್ ಪೈಡ್ ಚಂದಾ ಯೋಜನೆಗಳಲ್ಲಿ ಲಭ್ಯವಿದೆ. ಪ್ರೈಂ ವೀಡಿಯೊ ಆಪ್ ನಲ್ಲಿ ಸದಸ್ಯರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸಂಚಿಕೆಗಳನ್ನು ತಮ್ಮ ಮೊಬೈಲ್ ಉಪಕರಣಗಳಲ್ಲಿ ಡೌನ್ಲೋಡ್ ಮಾಡಿ ಆಫ್ಲೈನ್ ಆಗಿಯೂ ನೋಡಬಹುದು.
ವರ್ಧಿತ ಅನುಭವ: 4ಏ ಅಲ್ಟ್ರಾ ಎಚ್ ಡಿ ಮತ್ತು ಹೈ ಡೈನಾಮಿಕ್ ರೇಂಜ್ (HDR) ಸುಸಂಗತವಾದ ಕಾರ್ಯಕ್ರಮಗಳೊಂದಿಗೆ ಪ್ರತಿ ವೀಕ್ಷಣೆಯನ್ನೂ ಆನಂದಿಸಿ. ಐಏಮ್ ಡಿಬಿ ಬೆಂಬಲಿತ ಪ್ರತ್ಯೇಕ ಎಕ್ಸ್ ರೇ ಸೌಲಭ್ಯದೊಂದಿಗೆ ನಿಮ್ಮ ಮೆಚ್ಚಿನ ಚಲನಚಿತ್ರ ಮತ್ತು ಟಿವಿ ಕಾರ್ಯಕ್ರಮಗಳ ತೆರೆಮರೆಯ ನೋಟ ಪಡೆಯಿರಿ. ಆಫ್ಲೈನ್ ವೀಕ್ಷಣೆಗೆ ಆಯ್ದ ಮೊಬೈಲ್ ಡೌನ್ಲೋಡ್ ನಿಂದ ಇದನ್ನು ಸೇವ್ ಮಾಡಿರಿ.
ಪ್ರೈಮ್ ನಲ್ಲಿದೆ: ಪ್ರೈಂ ಸದಸ್ಯತ್ವದೊಂದಿಗೆ ಭಾರತದಲ್ಲಿ ಹೆಚ್ಚುವರಿ ಶುಲ್ಕವಿಲ್ಲದೆ ಪ್ರೈಂ ವೀಡೀಯೊ ತಿಂಗಳಿಗೆ ಕೇವಲ ರೂ. 129 ಅಥವಾ ವಾರ್ಷಿಕ ರೂ. 999 ಗೆ ಲಭ್ಯವಿದೆ, ಹೊಸ ಗ್ರಾಹಕರು www.amazon.in/prime ನಲ್ಲಿ ಹೆಚ್ಚು ಮಾಹಿತಿ ಪಡೆಯಬಹುದು ಮತ್ತು 30 ದಿನಗಳ ಉಚಿತ ಪರೀಕ್ಷೆಗೆ ಸೇರಬಹುದು.