ಕೌಲಾಲಂಪುರ: ಮಲೇಷ್ಯಾ ಮಾಸ್ಟರ್ಸ್ (Malaysia Masters) ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಪಿ.ವಿ. ಸಿಂಧು (PV Sindhu) ಫೈನಲ್ ಪ್ರವೇಶಿಸಿದ್ದಾರೆ.
ಥಾಯ್ಲೆಂಡ್ ನ ಬುಸಾನನ್ ಒಂಗ್ ಬಮ್ರುಂಗ್ ಫಾನ್ ವಿರುದ್ಧ ಸೆಮಿಫೈನಲ್ ನಲ್ಲಿ ಗೆದ್ದು ಸಿಂಧು ಫೈನಲ್ ಪ್ರವೇಶಿಸಿದ್ದಾರೆ. ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ 5ನೇ ಶ್ರೇಯಾಂಕಿತ ಸಿಂಧು, ಜಿದ್ದಾಜಿದ್ದಿನ ಸೆಮಿಫೈನಲ್ಲಿ ಗೆದ್ದು ಬೀಗಿದ್ದಾರೆ. ವಿಶ್ವದ 20ನೇ ಶ್ರೇಯಾಂಕಿತ ಬುಸಾನನ್ (Busanan Ongbamrungphan) ವಿರುದ್ಧ 13-21, 21-16, 21-12 ಅಂಕಗಳೊಂದಿಗೆ ಗೆಲುವು ಸಾಧಿಸಿ ಮೈಲುಗಲ್ಲು ಸಾಧಿಸಿದ್ದಾರೆ.
2 ವರ್ಷಗಳಿಂದ ಫಾರ್ಮ್ ಕಳೆದುಕೊಂಡಿದ್ದ ಸಿಂಧು ಯಾವುದೇ ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾಗಿದ್ದರು. ಕಳೆದ ವರ್ಷ ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್‌ನಲ್ಲಿ ರನ್ನರ್ ಅಪ್ ಆಗಿದ್ದರು. 2022ರಲ್ಲಿ ಸಿಂಗಾಪುರ ಓಪನ್ಸ್ (Singapore Opens) ಟ್ರೋಫಿ ಗೆದ್ದಿದ್ದರು. ಎರಡು ಆವೃತ್ತಿಯ ಒಲಿಂಪಿಕ್ಸ್‌ನಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ವಿಜೇತೆಯಾಗಿದ್ದ ಪಿ.ವಿ ಸಿಂಧು, ಪ್ರಸಕ್ತ ವರ್ಷದಲ್ಲಿ ಮೊಣಕಾಲಿನ ಗಾಯದ ಸಮಸ್ಯೆಯಿಂದ ಬ್ಯಾಡ್ಮಿಂಟನ್‌ನಿಂದ ದೂರ ಉಳಿದಿದ್ದರು. ಈಗ ಮತ್ತೆ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಈ ಪ್ರಶಸ್ತಿ ಗೆಲುವಿನೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವ ವಿಶ್ವಾಸದಲ್ಲಿ ಸಿಂಧು ಇದ್ದಾರೆ.