Malaysia Open : ಸೈನಾ, ಶ್ರೀಕಾಂತ್ ಗೆ ನಿರಾಸೆ : ಸಿಂಧು ಇಂದು ಕಣಕ್ಕೆ
ಭಾರತದ ಅನುಭವಿ ಬ್ಯಾಡ್ಮಿಂಟನ್ ಆಟಗಾರರ್ತಿ ಸೈನಾ ನೆಹ್ವಾಲ್ ಮತ್ತು ಕಿಡಂಬಿ ಶ್ರೀಕಾಂತ್ ಮಲೇಷ್ಯಾ ಓಪನ್ ಸೂಪರ್ 1000 ಟೂರ್ನಿಯ ಮೊದಲ ಸುತ್ತಿನಲ್ಲೇ ಸೋಲು ಅನುಭವಿಸಿದ್ದಾರೆ.
ಎರಡು ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಸೈನಾ ಅವರನ್ನು ಚೀನಾದ ಹಾನ್ ಯುಯಿ 12-21, 21-17, 12-21 ಸೆಟ್‌ಗಳಿಂದ ಸೋಲಿಸಿದರು.
ಗಾಯ ಮತ್ತು ಕಳಪೆ ಫಾರ್ಮ್‌ನಿಂದಾಗಿ ಸೈನಾಗೆ ಕಳೆದ ವರ್ಷವೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಮೊದಲ ಗೇಮ್ ನಲ್ಲಿ ಸೋಲು ಕಂಡ್ರು ಧೃತಿ ಗೆಡದ ಸೈನಾ ಎರಡನೇ ಗೇಮ್ ನಲ್ಲಿ ಭರ್ಜರಿಯಾಗಿ ಕಮ್ ಬ್ಯಾಕ್ ಮಾಡಿದ್ರು.
ಅಲ್ಲದೆ ಎರಡನೇ ಗೇಮ್ನ್ನು ಗೆದ್ದು ಪಂದ್ಯವನ್ನು ಜೀವಂತವಾಗಿರಿಸಿಕೊಂಡ್ರು. ಆದ್ರೆ, ಮೂರನೇ ಗೇಮ್ ನಲ್ಲಿ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ವಿಫಲವಾದ ಸೈನಾ, ಸಾಲು ಸಾಲು ಅಂಕಗಳನ್ನು ಬಿಟ್ಟು ನಿರಾಸೆ ಅನುಭವಿಸಿದ್ದಾರೆ.
ವಿಶ್ವದ ಮಾಜಿ ನಂಬರ್ ಒನ್ ಆಟಗಾರ ಶ್ರೀಕಾಂತ್ ಜಪಾನ್‌ನ ಕೆಂಟಾ ನಿಶಿಮೊಟೊ ವಿರುದ್ಧ 21-19, 21-14 ಸೆಟ್‌ಗಳಿಂದ ಪರಾಭವಗೊಂಡರು. ಎರಡು ನೇರ ಸೆಟ್ಗಳಲ್ಲಿ ಶ್ರೀಕಾಂತ್ ಸೋತು ಆಘಾತ ಅನುಭವಿಸಿದರು.

ಇಂದು ಸಿಂಧು ಕಣಕ್ಕೆ
ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ ಸಿಂಧು ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಇಂದು ಅಖಾಡ ಪ್ರವೇಶಿಸಲಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಧುಗೆ ಕಠಿಣ ಸವಾಲು ಎದುರಾಗಿದೆ.
ಬುಧವಾರ ನಡೆಯುವ ಪಂದ್ಯದಲ್ಲಿ ಸಿಂಧು, ಕರೋಲಿನಾ ಮರಿನ್ ವಿರುದ್ಧ ಕಾದಾಟ ನಡೆಸಲಿದ್ದಾರೆ.
Malaysia Open, Saina Nehwal, Srikanth disappointed : Pv Sindhu to play today