ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾದ್ರೆ ಸಂತೋಷ, ಸ್ವಾಗತ ಮಾಡುತ್ತೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಸಿಎಂ ಬದಲಾವಣೆ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿಯ ಬಗ್ಗೆ ಹೆಚ್ಚಿನ ಮಾಹಿತಿ ನಮಗಿಲ್ಲ. ಆದರೆ ಖರ್ಗೆ ಅವರಿಗೆ ರಾಜ್ಯದ ಎಲ್ಲಾ ವಿಚಾರಗಳೂ ತಿಳಿದಿವೆ. ಅವರು AICC ಅಧ್ಯಕ್ಷರಾಗಿರುವುದೇ ನಮಗೆ ಸೌಭಾಗ್ಯ ಎಂದರು.
ರಾಜಕೀಯ ಅನುಭವ, ಆಡಳಿತ ಪಟ್ಟು ಹಾಗೂ ರಾಜ್ಯ ರಾಜಕಾರಣದ ಅರಿವು ಖರ್ಗೆ ಅವರಿಗೆ ಇದೆ. ಅವರು ಸಿಎಂ ಆದ್ರೆ ಖಂಡಿತ ಸ್ವಾಗತಿಸುತ್ತೇವೆ ಎಂದು ಪರಮೇಶ್ವರ್ ಹೇಳಿದರು.
ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಸಿಎಂ ಬದಲಾವಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ ನೀಡಿದೆ.








