Mallikarjun Kharge | ರಾಹುಲ್ ಗಾಂಧಿಯೇ ಅಧ್ಯಕ್ಷರಾಗಬೇಕು
ಕಲಬುರಗಿ : ರಾಹುಲ್ ಗಾಂಧಿ ಯವರೇ ಅಧ್ಯಕ್ಷರಾಗಬೇಕು ಅನ್ನೋ ಬಯಕೆ ನಮ್ಮದು ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.
ಅಕ್ಟೋಬರ್ 17 ರಂದು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಮುಂದಾಗಿದ್ದಾರೆ.
ಅಕ್ಟೋಬರ್ 15 ರಂದು ನಾಮಪತ್ರ ಸಲ್ಲಿಕೆ ಆರಂಭವಾಗಿದೆ. 19ಕ್ಕೆ ರಿಸಲ್ಟ್ ಬರಲಿದೆ.
ಈ ಬಗ್ಗೆ ಕಲಬುರಗಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ ಯವರೇ ಅಧ್ಯಕ್ಷರಾಗಬೇಕು ಅನ್ನೋ ಬಯಕೆ ನಮ್ಮದು.
ರಾಹುಲ್ ಗಾಂಧಿಯವರನ್ನ ಮನವೊಲಿಸುವ ಕೆಲ ಮಾಡ್ತಿದ್ದೇವೆ. ಆದ್ರೆ ನಮ್ಮ ಕುಟುಂಬದವರು ಬೇಡ ಅಂತ ಸೋನಿಯಾ ಹೇಳಿದ್ದಾರೆ ಎಂದು ಹೇಳಿದರು.

ಇದೇವೇಳೆ ದೇಶದಲ್ಲಿ ಅನೇಕ ಕಡೆ NIA ಅಧಿಕಾರಿಗಳ ದಾಳಿ ವಿಚಾರವಾಗಿ ಮಾತನಾಡಿ, ಯಾವ ಉದ್ದೇಶಕ್ಕಾಗಿ ದಾಳಿ ಮಾಡಿದ್ದಾರೆ ಅಂತ ನನಗೆ ಮಾಹಿತಿ ಇಲ್ಲ.
ದೇಶದ್ರೋಹದ ಕೆಲಸ ಯಾರೇ ಮಾಡಿದ್ರೂ ಅದು ತಪ್ಪು. ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಹಕ್ಕಿದೆ. ಆದ್ರೆ ಯಾವುದೇ ಕ್ರಮ ಕೈಗೊಳ್ಳುವ ಮುನ್ನ ಸಾಧಕ ಬಾಧಕ ಬಗ್ಗೆ ಚರ್ಚಿಸಲಿ ಎಂದರು.
ದೇಶಕ್ಕೆ ಚೀತಾ ಕರೆತಂದ ವಿಚಾರವಾಗಿ ಮಾತನಾಡಿ, ದೇಶದಲ್ಲಿ ಕೊರೊನಾದಿಂದ ಸಾವಿರಾರು ಜನ ಸತ್ರೂ ಅವರ ಬಗ್ಗೆ ಚಿಂತೆಯಿಲ್ಲ.
ಲಕ್ಷಾಂತರ ಜನ ಹಸಿವಿನಿಂದ ನರಳುತಿದ್ದಾರೆ ಗೊತ್ತಿಲ್ಲವಾ. ಚೀತಾ ತರದಿದ್ದರೆ ದೇಶದ ಅಭಿವೃದ್ಧಿ ಏನು ನಿಂತು ಹೋಗುತ್ತಿತ್ತಾ ಎಂದು ಪ್ರಶ್ನಿಸಿದ್ದಾರೆ.