ಬೆಂಗಳೂರು: ಮಹಾಮಾರಿ ಕೊರೊನಾ (Corona) ಈಗ ಇಲ್ಲ. ಆದರೆ, ಇದರ ಅವಾಂತರ ಒಂದೊಂದಾಗಿ ಬೆಳಕಿಗೆ ಬರುತಿವೆ.
ರಾಜ್ಯದಲ್ಲಿ ಬರೊಬ್ಬರಿ 2 ಲಕ್ಷಕ್ಕೂ ಅಧಿಕ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಮಕ್ಕಳ ಬದುಕಿನಲ್ಲಿ ಹೆಮ್ಮಾರಿ ಕೊರೊನಾ ಕತ್ತಲನ್ನೇ ಸೃಷ್ಟಿಸಿದೆ. ಅಪೌಷ್ಠಿಕತೆಯ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೇ ಶಾಕಿಂಗ್ ರಿಪೋರ್ಟ್ ಕೊಟ್ಟಿದೆ.
5 ವರ್ಷಕ್ಕಿಂತ ಕೆಳಗಿನ ಮಕ್ಕಳು ಅಪೌಷ್ಟಿಕತೆಗೆ ಬಲಿಯಾಗುತ್ತಿರುವುದು ಪೋಷಕರಲ್ಲಿ ಭೀತಿ ಹುಟ್ಟಿಸಿದೆ. ಮಕ್ಕಳ್ಳಲ್ಲಿ ಹೆಚ್ಚಿದ ಅಪೌಷ್ಠಿಕತೆ ಪರಿಣಾಮ ಮಕ್ಕಳಲ್ಲಿ ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ. ರಾಜ್ಯದಲ್ಲಿ 8,711 ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ ಕಂಡು ಬಂದರೆ 2,23,221 ಮಕ್ಕಳು ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅಪೌಷ್ಠಿಕತೆಯ ಕಾರಣಕ್ಕೆ ಮಕ್ಕಳಲ್ಲಿ ಕಡಿಮೆ ತೂಕ, ರಕ್ತಹೀನತೆ ಸಮಸ್ಯೆಗಳು ಮಕ್ಕಳಲ್ಲಿ ಕಂಡು ಬರುತ್ತಿವೆ. ಸಾಕಷ್ಟು ಮಕ್ಕಳ ಸಾವಿಗೂ ಕಾರಣವಾಗುತ್ತಿರುವುದು ನಿಜಕ್ಕೂ ಆತಂಕಕಾರಿಯಾಗಿದೆ.








