ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಬ್ಬೀ ಸಮುದ್ರದಲ್ಲಿ ಮಲ್ಪೆ ಮೂಲದ “ಸೀ ಹಂಟರ್” ಹೆಸರಿನ ಬೋಟ್ ಮುಳುಗಡೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಬೋಟ್ನ ನಿಯಂತ್ರಣ ತಪ್ಪಿ, 9 ನಾಟಿಕಲ್ ಮೈಲು ದೂರದ ಲೈಟ್ ಹೌಸ್ ಬಳಿ ಅಪಘಾತಕ್ಕೀಡಾಗಿದ್ದು ಅದನ್ನು ಮೀನುಗಾರರು ಚಿತ್ರೀಕರಿಸಿರುವ ವಿಡಿಯೋದಲ್ಲಿ ಕಾಣಬಹುದು.
ಮಕರ ಸಂಕ್ರಾಂತಿ ಹಬ್ಬದಂದು, ಉಡುಪಿ ಜಿಲ್ಲೆಯ ಮಲ್ಪೆಯಿಂದ ಮಹಾರಾಷ್ಟ್ರದತ್ತ ಮೀನುಗಾರಿಕೆಗೆ ಹೊರಟ ಈ ಬೋಟ್ನಲ್ಲಿ ಒಟ್ಟು 8 ಮೀನುಗಾರರು ಇದ್ದರು. ಈ ವೇಳೆ ಬೋಟ್ನ ಕಬ್ಬಿಣದ ತಳಭಾಗದಲ್ಲಿ ವೆಲ್ಡಿಂಗ್ ಬಿಟ್ಟು ಹೋಗಿತ್ತು. ಇದರ ಪರಿಣಾಮವಾಗಿ, ಬೋಟ್ನ ಇಂಜಿನ್ ಭಾಗಕ್ಕೆ ನೀರು ನುಗ್ಗಿ, ಬೋಟ್ ಮುಳುಗಡೆಯಾಯಿತು
ನೀರು ನುಗ್ಗಿದ ಮೇಲೇ, ಬೋಟ್ನಲ್ಲಿದ್ದ ಮೀನುಗಾರರು ಅದನ್ನು ತಡೆಯಲು ಬಹಳಷ್ಟು ಪರಿಶ್ರಮ ನಡೆಸಿದ್ದು, ಈ ದೃಶ್ಯಗಳನ್ನು ತಮ್ಮ ಫೋನ್ ಮೂಲಕ ಸ್ವತಃ ಅವರೇ ಚಿತ್ರೀಕರಿಸಿದ್ದಾರೆ. ಬೋಟ್ ಸಂಪೂರ್ಣವಾಗಿ ಮುಳುಗುತ್ತದೆ ಎಂಬುದು ಖಚಿತ ಆಗುತ್ತಿದ್ದಂತೆ ಬೋಟಿನಲ್ಲಿದ್ದ ಮೀನುಗಾರರು ಸಹಾಯಕ್ಕಾಗಿ ಸಿಗ್ನಲ್ ನೀಡಿದ್ದಾರೆ. ಈ ವೇಳೆ ಸ್ಥಳೀಯ ಮೀನುಗಾರರು ಪ್ರಜ್ಞಾಪೂರ್ವಕವಾಗಿ ಕಾರ್ಯನಿರ್ವಹಿಸಿ, ಸಮುದ್ರದಿಂದ 8 ಮೀನುಗಾರರನ್ನು ರಕ್ಷಿಸಿ, ಅವರನ್ನು ಸುರಕ್ಷಿತವಾಗಿ ಕಡಲ ತೀರಕ್ಕೆ ತಂದು ಬಿಟ್ಟಿದ್ದಾರೆ.