Mamamtha Banerjee
ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ಕೆಲವು ತಿಂಗಳುಗಳು ಬಾಕಿ ಇವೆ. ಇದರ ಬೆನ್ನಲ್ಲೇ ಸಿಎಂ ಮಮತಾ ಬ್ಯಾನರ್ಜಿ ದೊಡ್ಡ ಆತಂಕ ಎದುರಾಗಿದೆ. ಇದ್ದಕ್ಕಿದ್ದಂತೆ ‘ದೀದಿ’ ಸಂಪುಟದ ಐವರು ಸಚಿವರು ನಾಪತ್ತೆಯಾಗಿದ್ದಾರೆ. ಈಗ ನಡೆಯುತ್ತಿರುವ ಕ್ಯಾಬಿನೆಟ್ ಸಭೆಗೆ ಐವರು ಸಚಿವರು ಹಾಜರಾಗಿಲ್ಲ. ಅಷ್ಟೇ ಅಲ್ಲದೇ ಈ ಪೈಕಿ ಒಬ್ಬರು ಸಚಿವರು ತೃಣಮೂಲ ಬ್ಯಾನರ್ ಇಲ್ಲದೆಯೇ ಕಾರ್ಯಕ್ರಮಗಳನ್ನು ಭಾಗಿಯಾಗಿದ್ದಾರೆ. ಇವೆಲ್ಲ ಬೆಳವಣಿಗೆಗಳು ‘ದೀದಿ’ಗೆ ಆತಂಕ ತಂದಿದೆ.
ಹೇಳಿ ಕೇಳಿ ರಾಷ್ಟ್ರದಲ್ಲಿ ಬಿಜೆಪಿ ಅಲೆ ಜೋರಾಗಿಯೇ ಇದೆ. ಎಲ್ಲಿ ನೋಡಿದ್ರೂ ಬಿಜೆಪಿಯದ್ದೇ ಆರ್ಭಟ ಶುರುವಾಗಿದೆ. ಅದು ಅಲ್ದೇ ‘ಕೇಸರಿ’ ನಾಯಕರ ಕಣ್ಣು ಪಶ್ಚಿಮ ಬಂಗಾಳದ ಮೇಲಿದೆ. ಇಷ್ಟು ವಗರ್ಷಗಳ ದೀದಿ ಭದ್ರಕೋಟೆ ಛಿದ್ರ ಛಿದ್ರ ಮಾಡುವ ಎಲ್ಲಾ ಪ್ಲಾನ್ ಗಳನ್ನ ಬಿಜೆಪಿ ಮಾಡಿಕೊಳ್ತಾಯಿದೆ. ಈ ಹೊತ್ತಿನಲ್ಲಿ ಐವರು ಸಚಿವರು ಸಭೆಗೆ ಹಾಜರು ಆಗದೇ ತಪ್ಪಿಸಿಕೊಂಡಿರುವುದನ್ನು ನೋಡಿದರೆ ಇವರೆಲ್ಲವೂ ಬಿಜೆಪಿಯನ್ನು ಸೇರಲಿದ್ದಾರೆಯೇ ಎಂಬ ಗುಮಾನಿ ಈಗ ಭಾರೀ ಸದ್ದು ಮಾಡ್ತಿದೆ.
ಮತ್ತೊಬ್ಬ ಬಾಲಿವುಡ್ ನಟ ನೇಣಿಗೆ ಶರಣು
ಮಮತಾ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಸಾರಿಗೆ ಸಚಿವ ಸುವೇಂಡು ಅವರು ಗೈರಾಗಿದ್ದರು. ಸುವೇಂಡು ಅವರು ಈಗಾಗಲೇ ಪಕ್ಷದ ಬ್ಯಾನರ್ ಇಲ್ಲದೆ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಅದು ಅಲ್ದೇ ಇತ್ತೀಚೆಗೆ ಪಕ್ಷದ ಎಲ್ಲಾ ಚಟುವಟಿಕೆಗಳಿಂದಲೂ ಸುವೇಂಡು ಅವರು ಕೊಂಚ ದೂರವೇ ಉಳಿದಿಬಿಟ್ಟಿದ್ದಾರೆ. ಹೀಗಾಗಿ ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಇನ್ನು ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಕೂಡ ಸಂಪುಟ ಸಭೆಯಲ್ಲಿ ಭಾಗವಹಿಸಲಿಲ್ಲ. ಆದ್ರೆ ಅವರು ತಮ್ಮ ಆರೋಗ್ಯ ಹದಗೆಟ್ಟಿರುವುದಾಗಿ ಕಾರಣಕೊಟ್ಟಿದ್ದಾರೆ. ಇನ್ನೂ ಐವರ ಪೈಕಿ ಉಳಿದವರು ರಾಜೇವ್ ಬ್ಯಾನರ್ಜಿ, ಗೌತಮ್ ದೇವ್ ಮತ್ತು ರವೀಂದ್ರನಾಥ ಘೋಷ್ ಅವರು ಕೂಡ ಸಭೆಗೆ ಹಾಜರಾಗದೇ ಇದ್ದದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
Mamamtha Banerjee
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel