Asif Basara
ನವದೆಹಲಿ: ಇತ್ತೀಚೆಗೆ ಚಿತ್ರರಂಗದಲ್ಲಿ ಅದ್ರಲ್ಲೂ ಬಾಲಿವುಡ್ ನಲ್ಲಿ ನಟರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಅದ್ರಲ್ಲೂ ದೇಶಾದ್ಯಂತ ತಲ್ಲಣವೆಬ್ಬಿಸಿದ್ದ ಬಾಲಿವುಡ್ ನ ಉದಯೋನ್ಮುಖ ನಟ ಸುಶಾಂತ್ ಸಿಂಗ್ ಸಾವಿನ ಸುದ್ದಿ ಇನ್ನೂವರೆಗೂ ಮಾಸಿಲ್ಲ. ಇದರ ಬೆನ್ನಲ್ಲೇ ಮತ್ತೋರ್ವ ಬಾಲಿವುಡ್ ನಟ ನೇಣಿಗೆ ಶರಣಾಗಿದ್ದಾರೆ.
ಬಾಲಿವುಡ್ ನಟ ಆಸಿಫ್ ಬಸರಾ ನೇಣಿಗೆ ಶರಣಾಗಿದ್ದಾರೆ. ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಧರ್ಮಶಾಲಾದಲ್ಲಿ ಬಾಸ್ರಾ ನೇಣಿಗೆ ಶರಣಾಗಿದ್ದಾರೆ. ಆದ್ರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದ್ರೆ ಆಸೀಫ್ ಹಲವಾರು ದಿನಗಳಿಂದ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಆಸೀಫ್ ಅವರು ಹಿಮಾಚಲ ಪ್ರದೇಶದ ಮೆಕ್ಲಿಯಾಡ್ಗಂಜ್ ಎಂಬಲ್ಲಿ ಸ್ನೇಹಿತೆಯ ಜತೆಗೆ ಲಿವ್ ಇನ್ ರಿಲೇಷನ್ನಲ್ಲಿ ಇದ್ದರು ಎನ್ನಲಾಗಿದೆ.
ಇನ್ನೂ ಬಾಲಿವುಡ್ ನಟ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರ ಜೊತೆಗೆ ‘ಕಾಯ್ ಪೂಚ್’ ಸಿನಿಮಾದಲ್ಲಿ ಆಸೀಫ್ ನಟನೆ ಮಾಡಿ ಗುರುತಿಸಿಕೊಂಡಿದ್ದರು. ಸಿನಿಮಾಗಳ ಜೊತೆಗೆ ಕಿರುತೆರೆಗಳಲ್ಲಿಯೂ ಆಸೀಫ್ ನಟಿಸಿದ್ದಾರೆ. ಅಷ್ಟೇ ಅಲ್ಲದೇ ಹಾಲಿವುಡ್ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ.
Asif Basara
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel