Mamata Banerjee ಬಿಸಿಸಿಐ ಅಧ್ಯಕ್ಷ ಸ್ಥಾನ : ದಾದಾ ಪರ ದೀದಿ ಬ್ಯಾಟಿಂಗ್
ಭಾರತ್ ಕ್ರಿಕೆಟ್ ನಿಯಂತ್ರಣ ಮಂಡಲಿ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಅವರಿಗೆ ಎರಡನೇ ಬಾರಿಗೆ ಅವಕಾಶ ನೀಡದಿದ್ದಕ್ಕೆ ಪಶ್ಚಿಮ ಬೆಂಗಾಲ್ ಸಿಎಂ ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗಂಗೂಲಿಯನ್ನು ವಂಚಿಸಿ, ಅನ್ಯಾಯವಾಗಿ ಪದವಿ ರೇಸ್ ನಿಂದ ತಪ್ಪಿಸಿದ್ದಾರೆ. ದಾದಾ ಕೇವಲ ಬೆಂಗಾಲ್ ಗೆ ಮಾತ್ರವಲ್ಲದೇ ಇಡೀ ದೇಶದ ಹೆಮ್ಮೆ.
ಟೀಂ ಇಂಡಿಯಾ ಕ್ಯಾಪ್ಟನ್ ಆಗಿ ಹಲವು ದಾಖಲೆಗಳನ್ನು ಮಾಡಿರುವ ದಾದಾ ಯಾವ ತಪ್ಪು ಮಾಡಿದ್ದಾರೆಂದು ಅವರಿಗೆ ಮತ್ತೊಂದು ಅವಕಾಶ ನೀಡಲಿಲ್ಲ ಎಂದು ಮಮತಾ ಪ್ರಶ್ನಿಸಿದ್ದಾರೆ.
ಗಂಗೂಲಿ ವಿಷಯದಲ್ಲಿ ಪ್ರಧಾನಿಗಳು ಮಧ್ಯಪ್ರದೇಶಿಸಬೇಕು ಎಂದು ಮನವಿ ಮಾಡಿಕೊಂಡಿರುವ ದೀದಿ,ಬಿಸಿಸಿಐ ಪದವಿ ಕೊಡದ ಸಂದರ್ಭದಲ್ಲಿ ಅವರಿಗೆ ಐಸಿಸಿ ಅಧ್ಯಕ್ಷ ಸ್ತಾನ ನೀಡಬೇಕು ಎಂದು ಸೂಚಿಸಿದ್ದಾರೆ.
ಅದಕ್ಕಾಗಿ ಐಸಿಸಿ ಚೇರ್ಮನ್ ಎಲೆಕ್ಷನ್ ಗೆ ಸ್ಪರ್ಧಿಸಲು ದಾದಾಗೆ ಅನುಮತಿ ನೀಡಬೇಕು ಎಂದು ಕೋರಿಕೊಂಡಿದ್ದಾರೆ.
ಇದೇ ವೇಳೆ ಬಿಸಿಸಿಐ ಅಧ್ಯಕ್ಷರಾಗಿ ಗಂಗೂಲಿ, ಕಾರ್ಯದರ್ಶಿಯಾಗಿ ಜೈ ಶಾ ಅವರನ್ನು ಎರಡನೇ ಅವಧಿಗೆ ಮುಂದುವರೆಸಬಹುದು ಎಂದು ಕೋರ್ಟ್ ಹೇಳಿದ್ದ ಇಲ್ಲಿ ಉಲ್ಲೇಖಿಸಿರುವ ಮಮತಾ, ಅಮಿತ್ ಶಾ ಪುತ್ರ ಜೈಶಾ ಅವರನ್ನು ಮುಂದುವರೆಸಿ, ಗಂಗೂಲಿ ಅವರನ್ನು ತಪ್ಪಿಸಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.