ದೇಶದ ಆಸ್ತಿ ಮಾರಲು ಹೊರಟ ಬಿಜೆಪಿ, ಮೋದಿಯ ವಿರುದ್ಧ ಗುಡುಗಿದ ದೀದಿ..!
ಪಶ್ಚಿಮ ಬಂಗಾಳ : ರಾಷ್ಟ್ರೀಯ ನಗದೀಕರಣ ಯೋಜನೆಯ ಮೂಲಕ ದೇಶದ ಆಸ್ತಿ ಮಾರಾಟ ಮಾಡಲು ಹೊರಟಿರುವ ಬಿಜೆಪಿ , ಕೇಂದ್ರ ಸರ್ಕಾರ , ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಪಕ್ಷದವರು ಕೆಂಡ ಕಾರುತ್ತಿದ್ದಾರೆ.. ಇದೀಗ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಮೋದಿ ವಿರುದ್ಧ ಗುಡುಗಿದ್ದಾರೆ.
ದೇಶದ ಆಸ್ತಿ ಬಿಜೆಪಿ, ಮೋದಿಯ ಸ್ವಂತದಲ್ಲ. ಇದು ಅವರಿಗೆ ಅರಿವಿರಬೇಕು ಎಂದು ದೀದಿ ಕಿಡಿಕಾರಿದ್ದಾರೆ. ಅಲ್ಲದೇ ಎನ್ಎಂಪಿ ಯೋಜನೆಯ ಮೂಲಕ ದೇಶದ ಆಸ್ತಿಯನ್ನು ಮಾರಾಟಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನಡೆ ಆಘಾತಕಾರಿಯಾಗಿದೆ. ಬಿಜೆಪಿ ಸರ್ಕಾರ ಆಸ್ತಿ ಮಾರಾಟದಿಂದ ಬರುವ ಹಣವನ್ನು ಚುನಾವಣೆಗಳಲ್ಲಿ ಬಳಸುತ್ತದೆ ಎಂದು ಆರೋಪಿಸಿದ್ದಾರೆ.
ದೇಶಕ್ಕೆ ಸೇರಿದ ಆಸ್ತಿಯನ್ನು ಮಾರಾಟ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಎಲ್ಲರೂ ಒಟ್ಟಾಗಿ ಸೇರಿ ವಿರೋಧಿಸಲಿದ್ದಾರೆ. ಕೇಂದ್ರ ಸರ್ಕಾರಕ್ಕೆ ಅಥವಾ ಮೋದಿಗೆ ಬೇಕಾದಹಾಗೆ ಆಸ್ತಿ ಮಾರಾಟ ಮಾಡಲು ಇದು ಇವರ ಮನೆಯ ಸ್ವತ್ತಲ್ಲ ಎಂದು ದೀದಿ ಗುಡುಗಿದ್ದಾರೆ.
ಲೈಂಗಿಕ ಕ್ರಿಯೆ ವೇಳೆ ಖಾಸಗಿ ಭಾಗಕ್ಕೆ ಗಮ್ ಹಚ್ಚಿಕೊಂಡು ಪ್ರಾಣ ಬಿಟ್ಟ ಯುವಕ..!
ಡ್ರಗ್ಸ್ ಕೇಸ್ : ರವಿತೇಜಾ, ರಾಣಾ, ರಕುಲ್ ಸೇರಿ 10 ಜನರಿಗೆ ಮತ್ತೆ ಸಂಕಷ್ಟ – ಇಡಿ ಸಮನ್ಸ್
ನಟ ದೊಡ್ಡಣ್ಣ ಆಸ್ಪತ್ರೆಗೆ ದಾಖಲು : ಐಸಿಯುನಲ್ಲಿ ಚಿಕಿತ್ಸೆ