ADVERTISEMENT
Sunday, October 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಬೆಂಗಳೂರು

ಫ್ರೆಂಚ್ ಫ್ರೈಸ್ ತಿನ್ನಲು ಬೇಡ ಅಂದಿದ್ದಕ್ಕೆ ಪತಿಯ ಮೇಲೆ ಕ್ರೌರ್ಯದ ಪ್ರಕರಣ ದಾಖಲು!

ಕೆಲಸಕ್ಕೂ ಹೋಗದ ಸ್ಥಿತಿಗೆ ಬಂದಿದ್ದ ಪತಿ

Author2 by Author2
August 23, 2024
in ಬೆಂಗಳೂರು, News
Share on FacebookShare on TwitterShare on WhatsappShare on Telegram

ಬೆಂಗಳೂರು: ಫ್ರೆಂಚ್‌ ಫ್ರೈಸ್‌ (French Fries) ತಿನ್ನಲು ಅನುಮತಿ ನೀಡದ ಹಿನ್ನೆಲೆಯಲ್ಲಿ ಪತ್ನಿಯು (Wife) ಪತಿಯ ವಿರುದ್ಧ ಕ್ರೌರ್ಯದ ಪ್ರಕರಣ ದಾಖಲಿಸಿದ್ದು, ಪತಿಗೆ (Husband) ಕರ್ನಾಟಕ ಹೈಕೋರ್ಟ್‌ (Karnataka High Court) ತಾತ್ಕಾಲಿಕ ರಿಲೀಫ್ ನೀಡಿದೆ.

ಪತ್ನಿ ಆರೋಪಿಸಿರುವ ಆರೋಪಗಳು ಕ್ಷುಲ್ಲಕವಾಗಿವೆ ಎಂದು ಅಭಿಪ್ರಾಯಪಟ್ಟ ನ್ಯಾ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ತನಿಖೆಗೆ ತಡೆ ನೀಡಿ ಉದ್ಯೋಗ ಕುರಿತಂತೆ ಪತಿಗೆ ಅಮೆರಿಕಕ್ಕೆ ತೆರಳಲು ಅನುಮತಿ ನೀಡಿದೆ.

Related posts

ಬೆಂಗಳೂರು ಬಸ್ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ ಬಿಎಂಟಿಸಿ ದರ ಏರಿಕೆ ಬಗ್ಗೆ ಸಚಿವ ಬೈರತಿ ಸುರೇಶ್ ನೀಡಿದ್ರು ಶಾಕಿಂಗ್ ಸುದ್ದಿ

ಬೆಂಗಳೂರು ಬಸ್ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ ಬಿಎಂಟಿಸಿ ದರ ಏರಿಕೆ ಬಗ್ಗೆ ಸಚಿವ ಬೈರತಿ ಸುರೇಶ್ ನೀಡಿದ್ರು ಶಾಕಿಂಗ್ ಸುದ್ದಿ

October 1, 2026
ಬರೀ ಬಿಲ್ಲು ಮಾಡೋದಲ್ಲ ಕೆಲಸ ಮಾಡೋದನ್ನ ಕಲಿಯಿರಿ: ಲೂಟಿ ಹೊಡೆಯುವ ಇಂಜಿನಿಯರ್‌ಗಳ ಅತಿಬುದ್ಧಿವಂತಿಕೆಗೆ ಕೃಷ್ಣ ಭೈರೇಗೌಡರ ಬ್ರೇಕ್

ಬರೀ ಬಿಲ್ಲು ಮಾಡೋದಲ್ಲ ಕೆಲಸ ಮಾಡೋದನ್ನ ಕಲಿಯಿರಿ: ಲೂಟಿ ಹೊಡೆಯುವ ಇಂಜಿನಿಯರ್‌ಗಳ ಅತಿಬುದ್ಧಿವಂತಿಕೆಗೆ ಕೃಷ್ಣ ಭೈರೇಗೌಡರ ಬ್ರೇಕ್

September 17, 2026

ವಕೀಲ ಶಾಂತಿ ಭೂಷಣ್ ಹೆಚ್ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ಪತಿ ತನ್ನ ವಿರುದ್ಧದ ದೂರು ಕ್ಷುಲ್ಲಕವಾಗಿದೆ ಎಂದು ಆರೋಪಿಸಿದ್ದರು. ಕಕ್ಷಿದಾರರಿಗೆ ಅಮೆರಿಕದಲ್ಲಿ (USA) ಉದ್ಯೋಗವಿದೆ. ಆದರೆ ಆದರೆ ನ್ಯಾಯವ್ಯಾಪ್ತಿಯ ನ್ಯಾಯಾಲಯವು ಪತ್ನಿಯ ದೂರಿನ ನಂತರ ಲುಕ್ ಔಟ್ ಸುತ್ತೋಲೆ (LOC) ಹೊರಡಿಸಿದ್ದರಿಂದ ಅಮೆರಿಕಕ್ಕೆ ತೆರಳಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಪತಿ ಪ್ರಕರಣ ತೆರವು ಮಾಡುವಂತೆ ಮನವಿ ಮಾಡಿದ್ದರು.

ಎರಡನೇ ಮಗುವಿಗೆ ಜನ್ಮ ನೀಡಿದ ನಂತರ ಫ್ರೆಂಚ್ ಫ್ರೈಸ್, ಅಕ್ಕಿ ಮತ್ತು ಮಾಂಸವನ್ನು ತಿನ್ನಲು ಪತಿ ನಿರಾಕರಿಸಿದ್ದಾರೆ ಎಂದು ಆರೋಪಿಸಿ ಪತ್ನಿ ಕ್ರೌರ್ಯದ ಅಡಿ ಪತಿ ವಿರುದ್ಧ ದೂರು ದಾಖಲಿಸಿದ್ದರು. ಅಲ್ಲದೇ, ಮಗು ಹುಟ್ಟುವುದಕ್ಕೂ ಮೊದಲು 6 ವರ್ಷ ನಾವು ಅಮೆರಿಕದಲ್ಲಿ ವಾಸಿಸುತ್ತಿದ್ದೇವು. ಮನೆಯ ಎಲ್ಲಾ ಕೆಲಸವನ್ನು ನಾನೇ ಮಾಡುತ್ತಿದ್ದೆ. ಆಕೆ ಫೋನ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಳು. ಈ ವೇಳೆ ಪಾಕಿಸ್ತಾನಿ ನಾಟಕ ಹೆಚ್ಚು ವೀಕ್ಷಿಸುತ್ತಿದ್ದಳು. ಬಾತ್‌ ರೂಂ ಸ್ವಚ್ಛ ಮಾಡುವಂತೆ ಮತ್ತು ಪಾತ್ರೆ ತೊಳೆಯುವಂತೆ ನನಗೆ ಸೂಚಿಸುತ್ತಿದ್ದಳು ಎಂದು ಪತಿ ನ್ಯಾಯಾಲಯಕ್ಕೆ ಹೇಳಿದ್ದರು.

ನಂತರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ, ಇದು ಕಾನೂನಿನ ಪ್ರಕ್ರಿಯೆಯ ಸ್ಪಷ್ಟ ದುರುಪಯೋಗವಾಗಿದೆ ಮತ್ತು ಪ್ರಕರಣದಲ್ಲಿ ಎಲ್ಒಸಿಯನ್ನು ಅಸ್ತ್ರವಾಗಿ ಬಳಸಲಾಗಿದೆ ಎಂದು ಅಭಿಪ್ರಾಯ ಪಟ್ಟು, ಪತಿಯ ವಿರುದ್ಧದ ತನಿಖೆಗೆ ಮಧ್ಯಂತರ ತಡೆ ನೀಡಿದೆ.

Tags: bengaluruViral news
ShareTweetSendShare
Join us on:

Related Posts

ಬೆಂಗಳೂರು ಬಸ್ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ ಬಿಎಂಟಿಸಿ ದರ ಏರಿಕೆ ಬಗ್ಗೆ ಸಚಿವ ಬೈರತಿ ಸುರೇಶ್ ನೀಡಿದ್ರು ಶಾಕಿಂಗ್ ಸುದ್ದಿ

ಬೆಂಗಳೂರು ಬಸ್ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ ಬಿಎಂಟಿಸಿ ದರ ಏರಿಕೆ ಬಗ್ಗೆ ಸಚಿವ ಬೈರತಿ ಸುರೇಶ್ ನೀಡಿದ್ರು ಶಾಕಿಂಗ್ ಸುದ್ದಿ

by Shwetha
October 1, 2026
0

ಬೆಂಗಳೂರು: ರಾಜಧಾನಿಯ ಜನಸಾಮಾನ್ಯರ ಸಾರಿಗೆಯಾದ ಬಿಎಂಟಿಸಿ ಬಸ್ ಪ್ರಯಾಣ ಇನ್ನು ಮುಂದೆ ದುಬಾರಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಕಳೆದ ಹಲವು ದಿನಗಳಿಂದ ಕೇಳಿಬರುತ್ತಿದ್ದ ಬಸ್ ಟಿಕೆಟ್ ದರ...

ಬರೀ ಬಿಲ್ಲು ಮಾಡೋದಲ್ಲ ಕೆಲಸ ಮಾಡೋದನ್ನ ಕಲಿಯಿರಿ: ಲೂಟಿ ಹೊಡೆಯುವ ಇಂಜಿನಿಯರ್‌ಗಳ ಅತಿಬುದ್ಧಿವಂತಿಕೆಗೆ ಕೃಷ್ಣ ಭೈರೇಗೌಡರ ಬ್ರೇಕ್

ಬರೀ ಬಿಲ್ಲು ಮಾಡೋದಲ್ಲ ಕೆಲಸ ಮಾಡೋದನ್ನ ಕಲಿಯಿರಿ: ಲೂಟಿ ಹೊಡೆಯುವ ಇಂಜಿನಿಯರ್‌ಗಳ ಅತಿಬುದ್ಧಿವಂತಿಕೆಗೆ ಕೃಷ್ಣ ಭೈರೇಗೌಡರ ಬ್ರೇಕ್

by Shwetha
September 17, 2026
0

ಬೆಂಗಳೂರು ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ವಿಷಯಗಳಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಭೈರೇಗೌಡ ಅವರು ಅಕ್ಷರಶಃ ಸಮರ ಸಾರಿದ್ದಾರೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ...

ಆಸ್ತಿ ತೆರಿಗೆ ಕಟ್ಟಲು ಸಾಫ್ಟ್ ವೇರ್ ದಂಡವೇಕೆ: ಸಾಫ್ಟ್ ವೇರ್ ಶುಲ್ಕದ ಹೆಸರಲ್ಲಿ ಡಿಜಿಟಲ್ ಸುಲಿಗೆಗೆ ಸಜ್ಜಾದ ಸರ್ಕಾರ-ಹೊಸ ಸೆಸ್ ವಿರುದ್ಧ ಹೋರಾಟಕ್ಕೆ ಸಜ್ಜಾದ ಬಿಜೆಪಿ

ಆಸ್ತಿ ತೆರಿಗೆ ಕಟ್ಟಲು ಸಾಫ್ಟ್ ವೇರ್ ದಂಡವೇಕೆ: ಸಾಫ್ಟ್ ವೇರ್ ಶುಲ್ಕದ ಹೆಸರಲ್ಲಿ ಡಿಜಿಟಲ್ ಸುಲಿಗೆಗೆ ಸಜ್ಜಾದ ಸರ್ಕಾರ-ಹೊಸ ಸೆಸ್ ವಿರುದ್ಧ ಹೋರಾಟಕ್ಕೆ ಸಜ್ಜಾದ ಬಿಜೆಪಿ

by Shwetha
September 17, 2026
0

ಬೆಂಗಳೂರು ಎಂದರೆ ಬರೀ ಟ್ರಾಫಿಕ್ ಕಿರಿಕಿರಿ ಮಾತ್ರವಲ್ಲ, ಈಗ ತೆರಿಗೆಯ ಕಿರಿಕಿರಿ ಕೂಡ ಮಾಮೂಲಾಗಿದೆ. ಈಗಾಗಲೇ ಆಸ್ತಿ ತೆರಿಗೆಯ ಜೊತೆಗೆ ಕಸದ ಸೆಸ್, ಗ್ರಂಥಾಲಯ ಸೆಸ್, ಒಳಚರಂಡಿ...

dk-shivakumar-meets-jain-community-leaders-tulu-language-demand

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರನ್ನು ಕರಾವಳಿಯ ಖ್ಯಾತ ಜೈನ ಜ್ಯೋತಿಷಿ ಬಿ.ಕೆ ಸುಭಾಷ್ ಚಂದ್ರ ಜೈನ್ ಬೇಟಿ.

by admin
September 16, 2026
0

ಬೆಂಗಳೂರು : ಕರ್ನಾಟಕಾದ್ಯಂತ ಜನಪರ ಅಭಿವೃದ್ಧಿ ಕೆಲಸ, ಮೂಲಭೂತ ಸೌಕರ್ಯ ಮತ್ತು ಮಂಗಳೂರಿನಲ್ಲಿ ಸಚಿವ ಸಂಪುಟ ನಡೆಸುವ ಮೂಲಕ ಚರಿತ್ರೆಯನ್ನು ಸೃಷ್ಟಿಸಿವ ನಾಡಿನ ಪ್ರಖ್ಯಾತ ಮುಖ್ಯಮಂತ್ರಿ ಸನ್ಮಾನ್ಯ...

‘ಆಸ್ಟ್ರಲ್ ಪೇಜೆಂಟ್ಸ್’ 10ನೇ ಆವೃತ್ತಿ ಯಶಸ್ವಿ: ಮಹಿಳಾ ಸಬಲೀಕರಣದ ಆಶಯದ ಸ್ಪರ್ಧೆಗೆ ದಶಕದ ಸಂಭ್ರಮ

‘ಆಸ್ಟ್ರಲ್ ಪೇಜೆಂಟ್ಸ್’ 10ನೇ ಆವೃತ್ತಿ ಯಶಸ್ವಿ: ಮಹಿಳಾ ಸಬಲೀಕರಣದ ಆಶಯದ ಸ್ಪರ್ಧೆಗೆ ದಶಕದ ಸಂಭ್ರಮ

by Shwetha
September 11, 2026
0

ಬೆಂಗಳೂರು : ಕಳೆದ ಒಂಬತ್ತು ವರ್ಷಗಳಿಂದ ವೈಶಿಷ್ಟ್ಯಪೂರ್ಣವಾಗಿ ಹಾಗೂ ಅದ್ಧೂರಿಯಾಗಿ ಆಯೋಜನೆಗೊಳ್ಳುತ್ತಾ ಬರುತ್ತಿರುವ ಆಸ್ಟ್ರಲ್ ಪೇಜೆಂಟ್ಸ್ ತನ್ನ 10ನೇ ಎಡಿಷನ್ನ್ನು ಅದ್ದೂರಿಯಾಗಿ ಪೂರ್ಣಗೊಳಿಸಿತು. ನಗರದ ಕಿಂಗ್ಸ್ ಮೆಡೋಸ್‌ನಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram