ಹೆಂಡತಿ ಶೀಲ ನಿಷ್ಠೆಯ ಪರೀಕ್ಷೆಗಾಗಿ ಪತ್ನಿ ಕೈ ಸುಟ್ಟ ಪತಿರಾಯ
ಹೆಂಡತಿ ಶೀಲದ ನಿಷ್ಠೆಯ ಪರೀಕ್ಷೆ ಮಾಡಲೋಸುಗ ವ್ಯಕ್ತಿಯೊಬ್ಬ ಹೆಂಡತಿಯ ಕೈಯನ್ನೆ ಸುಟ್ಟು ಹಾಕಿದ ವಿಲಕ್ಷಣ ಘಟನೆ ವಿಲಕ್ಷಣ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ವೀರೇನಹಳ್ಳಿ ಗ್ರಾಮದಲ್ಲಿ ಪ್ರಕರಣ ನಡೆದಿದೆ.
ಪತಿ ಆನಂದನಿಂದನಿಂದಾಗಿ ಕೈಸುಟ್ಟುಕೊಂಡರೂ ಕೂಡ ಪತಿಯ ಪ್ರತೀಕಾರಕ್ಕೆ ಹೆದರಿ ಮಹಿಳೆ ದೂರು ನೀಡಿರಲಿಲ್ಲ. ಆದರೆ, ಅಂಬೇಡ್ಕರ್ ಸೇವಾ ಸಮಿತಿ, ಎನ್‌ಜಿಒ ಅಧ್ಯಕ್ಷ ಕೆ.ಎಂ.ಸಂದೇಶ್ ಅವರರಿಂದ ನಂತರ ಪೊಲೀಸರಿಗೆ ಮಾಹಿತಿ ತಿಳಿದುಬಂದ ಬಳಿಕ ಪ್ರಕರಣ ದಾಖಲಿಸಲಾಗಿದೆ.
ದಂಪತಿಗೆ ಮದುವೆಯಾಗಿ 14 ವರ್ಷವಾಗಿತ್ತು. ಪತ್ನಿ ಮೋಸ ಮಾಡಿದ್ದಾಳೆ ಎಂದು ಶಂಕಿಸಿದ ಆನಂದ, ಪತ್ನಿಗೆ ಬಲವಂತವಾಗಿ ಅಂಗೈಯಲ್ಲಿ ಕರ್ಪೂರ ಹಚ್ಚಿ ಸುಟ್ಟಿದ್ದಾನೆ. ಸುದ್ದಿ ಹರಡುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ. ದೂರಿನ ಮೇರೆಗೆ ಪೊಲೀಸರು ಆನಂದನನ್ನು ಹುಡುಕುತ್ತಿದ್ದು, ಶೀಘ್ರದಲ್ಲೇ ಆತನನ್ನು ಹಿಡಿಯುವ ಭರವಸೆ ಇದೆ.
man burns wife’s hand while taking a fidelity test in Kolar








