IPL ಬೆಟ್ಟಿಂಗ್ – ಪೊಲೀಸರಿಂದ ತಪ್ಪಿಸಿಕೊಳ್ಳಲು ಓಡಿ ಹೋದ ವ್ಯಕ್ತಿ ಬಿದ್ದು ಸಾವು
IPL ಶುರುಆದಾಗಿನಿಂದ ಗ್ರಾಮೀಣ ಪ್ರದೇಶದಲ್ಲಿ ಬೆಟ್ಟಿಂಗ್ ದಂದೆ ಮಿತಿ ಮೀರಿದೆ. ನಿನ್ನೆ ಖಚಿತ ಮಾಹಿಯತಿ ಮೇರೆಗೆ ಪೊಲೀಸರು ಬಟ್ಟಿಂಗ್ ಅಡ್ಡಾದ ಮೇಲೆ ದಾಳಿ ನಡೆಸಿದಾಗ ಪೊಲೀಸರ ದಾಳಿಯಿಂದ ತಪ್ಪಿಸಿಕೊಂಡು ಓಡಿ ಹೋದ ವ್ಯಕ್ತಿಯೊಬ್ಬ ಬಿದ್ದು ಸಾವನ್ನಪ್ಪಿದ್ದಾನೆ.
ರಾಯಚೂರು ತಾಲೋಕಿನ ಯಡವಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 35 ವರ್ಷದ ಸ್ವಾಮಿ ಎಂಬುವವರು ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳುಲು ಹೋಗಿ ಎಡವಿ ಬಿದ್ದು ಸಾವನ್ನಪ್ಪಿದ್ದಾರೆ. ಸ್ವಾಮಿ ಆಟೋಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ. ಯರಗೇರಾ ಪಿಎಸ್ ಐ ಅಂಬರೀಷ್ ಕುಂಬಾರ ನೇತೃತ್ವದಲ್ಲಿ ದಾಳಿ ನಡೆದಿತ್ತು.
ಸ್ವಾಮಿ ಸಾವಿಗೆ ಪಿ ಎಸ್ ಐ ಅಂಬರೀಷ್ ಅವರೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸ್ವಾಮಿ ಗೆ ಕ್ರಿಕೆಟ್ ಬೆಟ್ಟಿಂಗ್ ಬಗ್ಗೆ ಗೊತ್ತಿರಲಿಲಲ್ ಪೊಲೀಸರು ಎಲ್ಲಿ ಅರೆಸ್ಟ್ ಮಾಡುತ್ತಾರೋ ಎಂಬ ಭಯದಿಂ ಓಡಿಹೋಗಿ ಎಡವಿ ಬಿದ್ದಿದ್ದಾನೆ . ಕುಟುಂಬಕಕ್ ಎಪರಿಹಾರ ನೀಡಬೇಕು ಎಂದು ಊರಿನವರು ಒತ್ತಾಯಿಸಿದ್ದಾರೆ.
Man died while escaping when police attacked him for IPL betting at Raichur








