ಥೂ… ಇವನೆಂಥ ಗಂಡ… ಸ್ನೇಹಿತರ ಜೊತೆ ಸೇರಿ ಪತ್ನಿ ಮೇಲೆ ಗ್ಯಾಂಗ್ ರೇಪ್..!
ರಾಜಸ್ಥಾನ: ಗಂಡನಾದವನು ಪ್ರಾಣವನ್ನ ಒತ್ತೆಯಿಟ್ಟಾದ್ರು ಸರಿಯೇ ಪತ್ನಿಯ ರಕ್ಷಣೆ ಮಾಡುತ್ತಾನೆ. ಆತ ಪತ್ನಿಎ ಎಷ್ಟೇ ಹಿಂಸೆ ನೀಡಿದ್ರು ಇತರರ ಕೆಟ್ಟ ದೃಷ್ಟಿ ಆಕೆ ಮೇಲೆ ಬೀಳದಂತೆ ನೋಡಿಕೊಳ್ತಾನೆ. ಅದೇ ಓರ್ವ ಪತಿ ಮಾಡಬೇಕಾದ ಕರ್ತವ್ಯ. ಆದ್ರೆ ಇದಕ್ಕೆ ಅಪವಾದವೆಂಬಂತೆ ಇಲ್ಲೊಬ್ಬ ನೀಚ ಪತಿ ಸ್ನೇಹಿತರ ಜೊತೆಗೂಡಿ ತನ್ನ ಪತ್ನಿಯ ಮೇಲೆಯೇ ಸಾಮೂಹಿಕ ಅತ್ಯಾಚಾರವೆಸಗಿದ್ದಾನೆ.
ಪತ್ನಿಯ ಕೈ-ಕಾಲು ಕಟ್ಟಿ ನಂತರ ಸ್ನೇಹಿತರ ಜೊತೆಗೂಡಿ ಸಾಮೂಹಿಕ ಅತ್ಯಾಚಾರ ನಡೆಸಿ ಪೈಸಾಚಿಕ ರೀತಿಯಲ್ಲಿ ವರ್ತಿಸಿದ್ದಾನೆ. ಇಂತಹ ಹೇಯ ಕೃತ್ಯ ರಾಜಸ್ಥಾನದ ಜಲೌರ್ ನಲ್ಲಿ ನಡೆದಿದೆ. ಪತ್ನಿ ಮತ್ತು ಮೂರು ಮಕ್ಕಳ ಜೊತೆ ಸಿರೋಹಿಯಲ್ಲಿ ವಾಸವಾಗಿದ್ದ ಆರೋಪಿ ಇಂತಹ ನೀಚ ಕೆಲಸ ಮಾಡಿದ್ದಾನೆ.
ಮದುವೆಯಾಗು ಎಂದಿದ್ದಕ್ಕೆ ಗೆಳತಿಯನ್ನ ಹತ್ಯೆಗೈದ.. ಗೋಡೆಯಲ್ಲಿ ಶವ ಅವಿತಿಟ್ಟ..
ಪತ್ನಿಯನ್ನ ಅಜ್ಞಾತ ಸ್ಥಳವೊಂದಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಆತನ ಸ್ನೇಹಿತರಾದ ಸಿ ರಾಮ್, ನಾರಾಯಣ್, ಅರ್ಜುನ್ ಸಿಂಗ್, ಕುಡಿದು ಕೊಂಡು ಕುಳಿತಿದ್ದರು. ಸ್ನೇಹಿತನ ಪತ್ನಿಯನ್ನು ಕಂಡ ಕಾಮುಕರು ಆಕೆಯ ಕೈ-ಕಾಲುಗಳನ್ನು ಕಟ್ಟಿ ಪತಿಯ ಮುಂದೆಯೇ ಅತ್ಯಾಚಾರಗೈದಿದ್ದಾರೆ. ನಂತರ ಪತಿಯೂ ಸಹ ಪತ್ನಿ ಮೇಲೆ ಅತ್ಯಾಚಾರ ನಡೆಸಿದ್ದಾನೆ.
NETFLIX ನಲ್ಲಿ ವೆಬ್ ಸೀರೀಸ್ ನೋಡುತ್ತಾ PIZZA ತಿನ್ನೋಕ್ಕೇ ಸಂಬಳ ಕೊಡುತ್ತೆ ಈ ಸಂಸ್ಥೆ..!
ಇದರಿಂದ ನೊಂದ ಮಹಿಳೆ ಮಾರನೇ ದಿನ ತವರು ಮನೆಗೆ ಬಂದು ತಾಯಿಗೆ ನಡೆದ ಎಲ್ಲಾ ವಿಚಾರಗಳನ್ನು ತಿಳಿಸಿದ್ದಾರೆ. ಕೂಡಲೇ ಸಂತ್ರಸ್ತೆಯ ತಾಯಿ ಆಕೆಯನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ತೆರಳಿ ನಾಲ್ವರ ವಿರುದ್ಧವೂ ದೂರು ನೀಡಿದ್ದಾರೆ.
ಅತ್ಯಾಚಾರ ದೂರು ದಾಖಲಿಸಿಕೊಂಡಿರುವ ಪೊಲೀಸರು ಸಂತ್ರಸ್ತೆಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಅತ್ಯಾಚಾರ ನಡದಿರೋದು ದೃಢವಾಗಿದೆ. ಇನ್ನೂ ಘಟನೆ ಬಳಿಕ ಆರೋಪಿಗಳು ತಲೆಮರೆಸಿಕೊಂಡು ಅವರ ಹುಡುಕಾಟದಲ್ಲಿ ಪೊಲೀಸರಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








