NETFLIX ನಲ್ಲಿ ವೆಬ್ ಸೀರೀಸ್ ನೋಡುತ್ತಾ PIZZA ತಿನ್ನೋಕ್ಕೇ ಸಂಬಳ ಕೊಡುತ್ತೆ ಈ ಸಂಸ್ಥೆ..!
ಅಮೆರಿಕ: ಕೊರೊನಾ ಭೀತಿಯಿಂದಾಗಿ, ಲಾಕ್ ಡೌನ್ ನಿಂದಾಗಿ, ಥಿಯೇಟರ್ ಗಳು ಬಂದ್ ಆದ ಬಳಿಕ ಒಟಿಟಿಯದ್ದೇ ಹವಾ ಆಗಿದೆ. ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡುವುದಕ್ಕಿಂತ ಮನೆಯಲ್ಲಿ ಕುಳಿತು ಸೇಫ್ ಜೋನ್ ನಲ್ಲಿ ಸಿನಿಮಾ ನೋಡೋದೆ ಒಳಿತು ಎನ್ನುತ್ತಿದ್ದಾರೆ ಜನ.
ಅನೇಕ ಸಿನಿಮಾಗಳು ಡಿಜಿಟಲ್ ಮೀಡಿಯಾಗಳಲ್ಲೇ ರಿಲೀಸ್ ಆಗ್ತಿವೆ. ವೆಬ್ ಸೀರೀಸ್ ಜನರ ಗಮನ ಗಮನ ಸೆಳೆಯುತ್ತಿವೆ. ಒಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿ ಅಮೇಜಾನ್ ಪ್ರೈಂ, ನೆಟ್ ಫ್ಲಿಕ್ಸ್, ಹಾಟ್ ಸ್ಟಾರ್ ಆಪ್ ಗಳು ಮುಂಚೂಣಿಯಲ್ಲಿವೆ. ಇದೀಗ ನೆಟ್ ಪ್ಲಿಕ್ಸ್ ಕೊಟ್ಟಿರೋ ಆಫರ್ ಗೆ ಜನರು ವ್ಹಹಾ ವ್ಹಾ ಅಂತಿದ್ದಾರೆ.
ಹೌದು ನೆಟ್ಫ್ಲಿಕ್ಸ್ ನಲ್ಲಿ ವೆಬ್ ಸೀರಿಸ್ ನೋಡುತ್ತಾ ಪಿಜ್ಜಾ ತಿನ್ನೋದಕ್ಕೆ ಸಂಬಳ ಕೊಡುತಂತೆ NETFLIX. ಇದೇನಿದು ನಿಜನಾ ಅಂತ ಆಶ್ಚರ್ಯ ಆಗೋದು ಸಹಜ ಆದ್ರೆ ಇದು ನಿಜ. ಅಮೆರಿಕದ ಬೋನಸ್ ಫೈಂಡರ್ ಹೆಸರಿನ ಜಾಲತಾಣ ಒಂದು ವಿಶೇಷ ಕೆಲಸಗಾರರನ್ನು ಹುಡುಕುತ್ತಿದೆ. ಪ್ರೊಫೆಷನಲ್ ಬಿಂಜೆ ವಾಚರ್ ಬೇಕು ಎಂದು ಜಾಹೀರಾತು ನೀಡಿದೆ. ಈ ಕೆಲಸಗಾರರ ಕೆಲಸ ಏನ್ ಗೊತ್ತಾ.
ಮೂರು ನೆಟ್ಫ್ಲಿಕ್ಸ್ ಸೀರಿಸ್ ಗಳನ್ನು ನೋಡಬೇಕು. ಅದರ ಕಥೆ, ಚಿತ್ರಕಥೆ, ನಟನೆಯ ಗುಣಮಟ್ಟ, ಕ್ಲೈಮ್ಯಾಕ್ಸ್ಗಳ ಬಗ್ಗೆ ರಿವ್ಯೂ ನೀಡಬೇಕು. ಇನ್ನೂ ಪಿಜ್ಜಾ ಪ್ರಿಯರಾಗಿದ್ರೆ ಅವರಿಗೆ ಈ ಆಫರ್ ಇನ್ನೂ ಬಂಪರ್ ಯಾಕಂದ್ರೆ ವೆಬ್ ಸೀರೀಸ್ ನೋಡೋಕೆ ಪಿಜ್ಜಾಗಳನ್ನ ಫ್ರೀಯಾಗಿ ಕೊಡಲಾಗುತ್ತಂತೆ. ಆ ಪಿಜ್ಜಾದ ಗುಣಮಟ್ಟವನ್ನೂ ಪರಿಶೀಲಿಸಿ ವರದಿ ನೀಡಬೇಕು ಅಷ್ಟೇ. ಈ ಕೆಲಸಕ್ಕೆ ಸಂಸ್ಥೆ 500 ಡಾಲರ್ ಅಂದರೆ ಸುಮಾರು 36 ಸಾವಿರ ರೂಪಾಯಿ ನೀಡುವುದಾಗಿ ಹೇಳಿಕೊಂಡಿದೆ.
ಭಾರತೀಯರ ಬಗ್ಗೆ ವಿಶ್ವಸಂಸ್ಥೆ ಮೆಚ್ಚುಗೆ : ಯಾಕೆ ಗೊತ್ತಾ..! ವಿದೇಶಗಳಲ್ಲಿ ನೆಲೆಸಿರುವ ಭಾರತೀಯರ ಸಂಖ್ಯೆ ಎಷ್ಟು ಗೊತ್ತಾ..!
ಈ ವಿಚಿತ್ರ ಕೆಲಸದ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಬೋನಸ್ ಫೈಂಡರ್ ಅಧಿಕೃತ ವೆಬ್ಸೈಟ್ನಲ್ಲಿ ನೋಡಿ ತಿಳಿದುಕೊಳ್ಳಬಹುದು. ನೀವೂ ಅರ್ಜಿ ಸಲ್ಲಿಸಬಹುದು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel