ಪ್ರೇಯಸಿಯೊಂದಿಗಿನ ಪೋಟೋಗಳನ್ನು ವೈರಲ್ ಮಾಡುವುದಾಗಿ ಪ್ರೇಯಸಿಗೆ ಬೆದರಿಕೆ
ಆಂಧ್ರಪ್ರದೇಶ : ಪ್ರೇಯಸಿಯೊಂದಿಗಿನ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿದ ಯುಕನನ್ನು ಆಂಧ್ರಪ್ರದೇಶದ ವಿಜಯನಗರ ಪೊಲೀಸರು ಬಂಧಿಸಿದ್ದಾರೆ.
ಶಿರೆಡ್ಡಿ ನವೀನ್ (24) ಬಂಧಿತ ಆರೋಪಿ. ಈ ಕುರಿತು ಹೇಳಿಕೆ ನೀಡಿರುವ ಎಎಸ್ಪಿ ಪಿ.ಅನಿಲ್ ಕುಮಾರ್ ಯುವತಿಗೆ ವಂಚಿಸಿದ ಆರೋಪದಡಿ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಗ್ರಾಮ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ ನವೀನ್ ಅಲ್ಲೇ ಕೆಲಸ ಮಾಡುವ ಯುವತಿಯೊಂದಿಗೆ ಸಂಬಂಧ ಹೊಂದಿದ್ದನು. ನವೀನ್ ಮತ್ತು ಮಹಿಳೆ ಎರಡು ವರ್ಷಗಳಿಂದ ಸಂಬಂಧ ಹೊಂದಿದ್ದರು. ಹೀಗಾಗಿ ಇಬ್ಬರೂ ಜೊತೆ ಜೊತೆಯಾಗಿ ಫೋಟೋಗಳನ್ನು ತೆಗೆಸಿಕೊಂಡಿದ್ದರು. ಅವರಿಬ್ಬರೂ ಒಂದೇ ಸಮುದಾಯಕ್ಕೆ ಸೇರಿದ ಕಾರಣ ಮನೆಯವರಿಂದಲೂ ಮದುವೆಗೆ ಒಪ್ಪಿಗೆ ಸಿಕ್ಕಿತ್ತು.
ಕಳೆದ ಎರಡು ತಿಂಗಳಿನಿಂದ ನವೀನ್ ಹಾಗೂ ಮಹಿಳೆ ನಡುವೆ ಜಗಳ ನಡೆಯುತ್ತಿತ್ತು. ಮನೆ ಕಟ್ಟಿಸಿಕೊಟ್ಟರೆ, ಮದುವೆಯಾಗುವುದಾಗಿ ನವೀನ್ ಹೇಳುತ್ತಿದ್ದನು. ಮನೆ ಕಟ್ಟಿಸಲು ಯುವತಿಯ ಪೋಷಕರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದನು. ಯುವತಿಯ ಪೋಷಕರು ಇದಕ್ಕೆ ಒಪ್ಪಿರಲಿಲ್ಲ.
ಈ ವೇಳೆ ನವೀನ್ ಯುವತಿಯೊಂದಿಗಿನ ಕೆಲವು ಫೋಟೋಗಳನ್ನ ಆಕೆಯ ತಂದೆಗೆ ಕಳುಹಿಸಿದ್ದಾನೆ. ಅಷ್ಟೇ ಅಲ್ಲ, ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಮಹಿಳೆ ಮತ್ತು ಆಕೆಯ ಪೋಷಕರಿಗೆ ಬೆದರಿಕೆ ಹಾಕಿದ್ದಾನೆ. ಈ ಕಾರಣಕ್ಕಾಗಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಆಕೆಯ ದೂರಿನ ಆಧಾರದ ಮೇಲೆ ನವೀನ್ನನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.