ಬೆಂಗಳೂರು: ನೂತನವಾಗಿ ತೆಗೆದುಕೊಂಡಿದ್ದ ಮೊಬೈಲ್ ಬ್ಲಾಸ್ಟ್ ಆಗಿ ಯುವಕ ಗಾಯಗೊಂಡಿರುವ ಘಟನೆ ನಡೆದಿದೆ.
ಮೊಬೈಲ್ ಬ್ಲಾಸ್ಟ್ ಆಗುತ್ತಿದ್ದಂತೆ ಯುವಕನ ತೊಡೆಗೆ ಗಾಯವಾಗಿದೆ. ವೈಟ್ ಫೀಲ್ಡ್ನಲ್ಲಿ ವಾಸಿಸುತ್ತಿದ್ದ 24 ವರ್ಷದ ಯುವಕ ಪ್ರಸಾದ್ ಎನ್ನುವವರೇ ಗಾಯಗೊಂಡಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಒನ್ ಪ್ಲಸ್(1+) ಕಂಪನಿಯ ಮೊಬೈಲ್ ಖರೀದಿ ಮಾಡಿದ್ದ. ಇಂದು ಸ್ಕೂಟರ್ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಜೇಬಿನಲ್ಲಿ ಇಟ್ಟುಕೊಂಡಿದ್ದ ಮೊಬೈಲ್ ಏಕಾಏಕಿ ಬ್ಲಾಸ್ಟ್ ಆಗಿದೆ.
ಆದರೆ, ತೊಡೆಯ ಸರ್ಜರಿಗೆ 4 ಲಕ್ಷ ರೂ. ಖರ್ಚಾಗುತ್ತದೆ ಎಂದು ವೈದ್ಯರು ಹೇಳಿದ್ದು, ಮೊಬೈಲ್ ಶೋರೂಂನವರು ಮಾತ್ರ ಮೆಡಿಕಲ್ ವೆಚ್ಚದ ಜೊತೆಗೆ ಮೊಬೈಲ್ ಹಣ ಕೊಡುತ್ತೇವೆ ಎನ್ನುತ್ತಿದ್ದಾರೆ. ಹೀಗಾಗಿ ಯುವಕ ಕಾನೂನಿನ ಮೊರೆ ಹೋಗಲು ಮುಂದಾಗಿದ್ದಾನೆ.








