ಬೆಂಗಳೂರು: ಹಿಟ್ ಆಂಡ್ ರನ್ ಗೆ ತಾಯಿ, ಮಗ ಬಲಿಯಾಗಿರುವ ಘಟನೆ ನಡೆದಿದೆ.
ಈ ಘಟನೆ ಸಿಲಿಕಾನ್ ಸಿಟಿಯಲ್ಲಿನ ಸಹಕಾರ ನಗರದ ರೈಲ್ವೆ ಅಂಡರ್ ಪಾಸ್ ಹತ್ತಿರ ನಡೆದಿದೆ. ಈ ಘಟನೆ ಬುಧವಾರ ಬೆಳಗಿನ ಜಾವ ಸುಮಾರು 5 ಗಂಟೆಯ ವೇಳೆಗೆ ನಡೆದಿದೆ. ವಾಹನಕ್ಕೆ ಸಿಲುಕಿ ಅನಾಮಿಕ ವ್ಯಕ್ತಿ ಬಲಿಯಾಗಿದ್ದಾರೆ. ಅಪಘಾತ ನಡೆಸಿ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಕೊಡಿಗೇಹಳ್ಳಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧಿಸಿದಂತೆ ವ್ಯಕ್ತಿ ಯಾರು ಎಂಬುವುದು ತಿಳಿದಿಲ್ಲ. ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.








