ಹೈದರಾಬಾದ್: ನದಿಯಲ್ಲಿ ಸಿಲುಕಿದ್ದ 9 ಜನರನ್ನು ವ್ಯಕ್ತಿಯೊಬ್ಬರು ರಕ್ಷಿಸಿರುವ ಘಟನೆ ನಡೆದಿದೆ.
ತೆಲಂಗಾಣದ (Telangana Floods) ಖಮ್ಮಂ (Khammam )ಜಿಲ್ಲೆಯ ಮುನ್ನೇರು ನದಿಯ ಪ್ರಕಾಶ್ ನಗರ ಸೇತುವೆಯಲ್ಲಿ ಸಿಲುಕಿದ್ದ 9 ಜನರನ್ನು ಹರಿಯಾಣದ ವ್ಯಕ್ತಿ ರಕ್ಷಿಸಿದ್ದಾರೆ. ಸುಭಾನ್ ಖಾನ್ ಎಂಬ ವ್ಯಕ್ತಿಯೇ 9 ಜನರನ್ನು ರಕ್ಷಿಸಿದ್ದಾರೆ.
ಪ್ರತಿಕೂಲ ಹವಾಮಾನದ ಕಾರಣ, ಸರ್ಕಾರ ನಿಯೋಜಿಸಿದ ಹೆಲಿಕಾಪ್ಟರ್ ಅವರನ್ನು ತಲುಪಲು ಸಾಧ್ಯವಾಗಲಿಲ್ಲ. ಆದರೆ,ಹರಿಯಾಣ ಮೂಲದ ಸುಭಾನ್ ಖಾನ್ ಜೆಸಿಬಿ ಬುಲ್ಡೋಜರ್ ಬಳಸಿ ಅಪಾಯವನ್ನೂ ಲೆಕ್ಕಿಸದೆ 9 ಜನರನ್ನು ರಕ್ಷಿಸಿದ್ದಾರೆ.
ರಕ್ಷಣಾ ಕಾರ್ಯ ವೇಳೆ ನಿಮ್ಮ ಪ್ರಾಣಕ್ಕೂ ಅಪಾಯವಾಗುತ್ತಿತ್ತು ಎಂದು ಖಾನ್ ಅವರಲ್ಲಿ ಹೇಳಿದಾಗ “ನಾನು ಸತ್ತರೆ, ನಾನು ಒಬ್ಬನೇ ಸಾಯುತ್ತೇನೆ, ಇಲ್ಲದಿದ್ದರೆ ಒಂಬತ್ತು ಜನರೊಂದಿಗೆ ಹಿಂತಿರುಗುತ್ತೇನೆ” ಎಂದು ಹೇಳಿ, ಸಾವನ್ನೂ ಲೆಕ್ಕಿಸದೆ ರಕ್ಷಿಸಿದ್ದಾರೆ. ಅವರ ಈ ಕಾರ್ಯಕ್ಕೆ ಈಗ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, “ಸುಭಾನ್ ಖಾನ್-ಬುಲ್ಡೋಜರ್ ಮ್ಯಾನ್, ಎಲ್ಲಾ ಹೀರೋಗಳು ಕ್ಯಾಪ್ ಧರಿಸುವುದಿಲ್ಲ ಎಂದು ಬರೆದಿದ್ದಾರೆ.