VIDEO : ಹೊರಗಡೆ ಊಟ ಮಾಡೋ ಮುನ್ನ ದಯವಿಟ್ಟು ಎಚ್ಚರ : ಮೀರತ್ ಆಯ್ತು ಈಗ ಗಾಝಿಯಾಬಾದ್… ರೋಟಿಗೆ ಉಗುಳಿದ ಕಿಡಿಗೇಡಿ..!
ಇತ್ತೀಚೆಗೆ ಹೊರಗಡೆ , ರಸ್ತೆ ಬದಿ, ಹೋಟೆಲ್ ಗಳು ಸಮಾರಂಭಗಳಲ್ಲಿ ಏನಾದ್ರೂ ತಿನ್ನುವ ಮುನ್ನ 1000 ಸಲ ಯೋಚನೆ ಮಾಡಬೇಕು ಎನ್ನಿಸುತ್ತಿದೆ. ಹೌದು ಇದಕ್ಕೆ ಉದಾಹರಣೆ ಎಂದಂತಹ ಘಟನೆ ಇತ್ತೀಚೆಗಷ್ಟೇ ಮೀರತ್ ನಲ್ಲಿ ನಡೆದಿತ್ತು. ಸಮಾರಂಭವೊಂದರಲ್ಲಿ ವ್ಯಕ್ತಿಯೊಬ್ಬ ರೋಟಿಗಳಿಗೆ ಉಗಿದಿದ್ದ ವಿಡಿಯೋ ಸಿಕ್ಕಾಪಟ್ಟೆ ವೀರಲ್ ಆಗಿದ್ದು, ಇಂತಹ ನೀಚ ಕೃತ್ಯವೆಸಗಿದವನ ವಿರುದ್ಧ ಆಕ್ರೋಶ ಭುಗಿರಲೆದ್ದಿತ್ತು. ಈ ಘಟನೆ ನಡೆದು ತುಂಬಾ ದಿನಗಳೂ ಏನು ಕಳೆದಿಲ್ಲ. ಅಷ್ಟರಲ್ಲೇ ಮತ್ತೊಂದು ಇಂತಹದ್ದೇ ವಿಡಿಯೋ ವೈರಲ್ ಆಗಿದೆ.
ಏಕಾಂತದಲ್ಲಿ ಕುಳಿತಿದ್ದ ಪ್ರೇಮಿಗಳ ಮೇಲೆ ಹಲ್ಲೆ ನಡೆಸಿದ ಗುಂಪು : ಯುವತಿಯ ದುಪಟ್ಟಾ ಎಳೆದು ಹಲ್ಲೆ ನಡೆಸಿರುವ ವಿಡಿಯೋ ವೈರಲ್..!
ಹೌದು ಉತ್ತರಪ್ರದೇಶದ ಗಾಝಿಯಾಬಾದ್ ನಲ್ಲಿ ವ್ಯಕ್ತಿಯೊಬ್ಬ ರೋಟಿ ಮಾಡುತ್ತಾ ಅದಕ್ಕೆ ಉಗುಳಿದ್ದಾನೆ. ಈ ವಿಡಿಯೋ ಸಖತ್ ವೈರಲ್ ಆಗ್ತಿದ್ದು, ಮತ್ತೊಪಮ್ಮೆ ನೆಟ್ಟಿಗರ ಕಣ್ಣು ಕೆಂಪು ಮಾಡಿದೆ. ವಿಡಿಯೋ ವೈರಲ್ ಆಗ್ತಿದ್ದಂತೆ ಪೊಲೀಸರು ಆರೋಪಿಯನ್ನ ಅರೆಸ್ಟ್ ಮಾಡಿದ್ದಾರೆ. ಮೊಹಮ್ಮದ್ ಮೋಶಿನ್ ಎಂಬಾತ ಇಂತಹ ಕೃತ್ಯ ಎಸಗಿರೋದಾಗಿ ಉತ್ತರಪ್ರದೇಶ ಪೊಲೀಸರು ತಮ್ಮ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.
https://twitter.com/TheAshwiniRaj/status/1370611980042604544
ನೆಟ್ಟಿಗರು ಈ ಪೋಸ್ಟ್ ಗೆ ನಾನಾ ಕಮೆಂಟ್ ಗಳನ್ನ ಮಾಡ್ತಾಯಿದ್ದಾರೆ. ಆತನನ್ನ ಜೈಲಿನಿಂದ ರಿಲೀಸ್ ಮಾಡಬಾರದು ಎಂದು ಆಗ್ರಹಿಸುತ್ತಿದ್ದಾರೆ. ಕಳೆದ ತಿಂಗಳು ಮೀರತ್ ನಲ್ಲೂ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿತ್ತು. ಮದುವೆ ಸಮಾರಂಭವೊಂದರಲ್ಲಿ ನೌಶೀದ್ ಅಲಿಯಾಸ್ ಶೋಹೇಲ್ ಎಂಬಾತ ರೋಟಿಗೆ ಉಗುಳಿದ್ದ. ಈತನ ವಿರುದ್ಧ IPC ಸೆ. 268, 269, 188 ಅಡಿ ಪ್ರಕರಣ ದಾಖಲಾಗಿತ್ತು.
ಚಾಮರಾಜನಗರ : ಆನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಪ್ರವಾಸಿಗರು
16 ವರ್ಷದ ಅಪ್ರಾಪ್ತ ಬಾಲಕಿ ಮೇಲೆ 7 ಕಾಮುಕರಿಂದ 6 ತಿಂಗಳ ಕಾಲ ಅತ್ಯಾಚಾರ..!