mangalore ಸಾಲಶೂಲಕ್ಕೆ ವ್ಯಕ್ತಿ ಬಲಿ
ಉಪ್ಪಿನಂಗಡಿ : ಸಾಲಬಾಧೆ ತಾಳಲಾರದೇ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. 37 ವರ್ಷದ ಶರೀಫ್ ಮೃತ ವ್ಯಕ್ತಿಯಾಗಿದ್ದಾರೆ. Man suicide-in-mangalore
ಇವರು ಮೂಲತಃ ವಿಟ್ಲ ಮುಡ್ನೂರು ಗ್ರಾಮದವರಾಗಿದ್ದಾರೆ.
ಪ್ರಸ್ತುತ ಪತ್ನಿ ಜತೆ ಉಪ್ಪಿನಂಗಡಿಯ ನೆಕ್ಕಿಲಾಡಿಯ ಬಾಡಿಗೆ ಮನೆಯಲ್ಲಿದ್ದ ಶರೀಫ್, ಜನವರಿ 25 ರಂದು ಬೆಳಗ್ಗೆ ಉಪ್ಪಿನಂಗಡಿ ಲಾಡ್ಜ್ ನಲ್ಲಿ ರೂಂ ಬಾಡಿಗೆಗೆ ಪಡೆದಿದ್ದರು.
ಮಾರನೇ ದಿನ ಶರೀಫ್ ರೂಮಿನಿಂದ ಹೊರಬಾರದೇ ಇದ್ದಾಗ, ಸಂಶಯಗೊಂಡ ಲಾಡ್ಜ್ ಮ್ಯಾನೇಜರ್ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಬಾಗಿಲು ತೆರೆದ ವೇಳೆ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶರೀಫ್ ಶವ ಪತ್ತೆಯಾಗಿದೆ.
ಇನ್ನು ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.