ವ್ಹಾರೆ ವ್ಹಾ..! ಏನ್ ಐಡಿಯಾ ಗುರು..!
ಮೆದುಳಿಗೆ ಕೆಲಸ ಕೊಟ್ರೆ ಎಂತಹ ಸಮಸ್ಯೆಗಳಿಗಾದ್ರೂ ಸುಲಭವಾಗಿ ಪರಿಹಾರವನ್ನ ಹುಡುಕಿಕೊಳ್ಳಬಹುದು ಅಂತಾ ಅಮೇರಿಕಾದ ಓರ್ವ ವ್ಯಕ್ತಿ ನಿರೂಪಿಸಿದ್ದಾರೆ.
ಚಳಿಕಾಲ ಬಂದಿದೆ ಅಂದ್ರೆ ಸಾಕು ಅಮೆರಿಕಾದಲ್ಲಿ ವಿಪರೀತವಾದ ಮಂಜು ಅಲ್ಲಿನವರನ್ನು ತೀವ್ರ ಸಂಕಷ್ಟಗಳಿಗೆ ದೂಡುತ್ತೆ.
ರಾತ್ರಿ ವೇಳೆ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರು ಬೆಳಿಗ್ಗೆ ಎದ್ದಾಗ ಹಿಮದಲ್ಲಿ ಮುಳುಗಿ ಹೋಗಿರುತ್ತೆ. ಇತ್ತೀಚಿನ ಋತುವಿನಲ್ಲಿ ಹಿಮಪಾತವು ಅಮೆರಿಕನ್ನರನ್ನು ನಡುಗಿಸುತ್ತದೆ.
ಮನೆಯ ರಸ್ತೆಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳು ಕೂಡ ಮಂಜಿನಲ್ಲಿ ಮುಳುಗಿ ಹೋಗಿರುತ್ವೆ. ಸ್ಥಳೀಯರು ನಿತ್ಯ ಗಂಟೆಗಟ್ಟಲೆ ಮಂಜು ತೆಗೆಯಬೇಕಾದ ಪರಿಸ್ಥಿತಿಯಲ್ಲಿರುತ್ತಾರೆ.
ಇತ್ತೀಚೆಗೆ ನಡೆದ ಕ್ರಿಸ್ ಮಸ್ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬೀದಿಗಿಳಿದು ಹಿಮವನ್ನು ತೆಗೆಯಲು ಹರಸಾಹಸ ಪಟ್ಟರು. ಈ ಕ್ರಮದಲ್ಲಿ, ಟೊರಾಂಟೋದ ಒಬ್ಬ ವ್ಯಕ್ತಿಗೆ ಒಂದು ಐಡಿಯಾ ಹೊಡೆಯಿತು.
ಜನರ ಕಷ್ಟಗಳನ್ನು ನೋಡಿ ಅವರಿಗೆ ಸಹಾಯ ಮಾಡಬೇಕೆಂಬ ಉದ್ದೇಶದಿಂದ ಹಿಮವನ್ನು ತೆಗೆಯಲು ಸುಲಭವಾದ ಮಾರ್ಗವನ್ನು ಕಂಡುಹಿಡಿಯಬೇಕಾಗಿ ಆಲೋಚನೆ ಮಾಡಿ ಸಕ್ಸಸ್ ಕಂಡಿದ್ದಾನೆ. ಹಿಮವನ್ನು ಸುಲಭವಾಗಿ ಕರಗಿಸೋ ಯಂತ್ರವನ್ನ ಕಂಡುಹಿಡಿದು ಔರಾ ಎನಿಸಿದ್ದಾನೆ.
ಯಂತ್ರದಿಂದ ವೇಗವಾಗಿ ಬರುವ ಬೆಂಕಿ ಒಂದು ಸೆಕೆಂಡಿನಲ್ಲಿ ಹಿಮವನ್ನು ಕರಗಿಸುತ್ತದೆ. ಈ ವಿಡಿಯೋವನ್ನು ಸ್ಥಳೀಯರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ. ಈ ವ್ಯಕ್ತಿಯ ಪ್ರತಿಭೆಯನ್ನು ಅನೇಕರು ಮೆಚ್ಚುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









