ಕಿರುತೆರೆ ನಟಿ ಮಾನಸಾ ಜೋಷಿ ಅವರ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.. ಮಾನಸ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದಾರೆ.. ಅವರಿಗೆ ಅಭಿಮಾನಿಗಳು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ..
ಬಹುಪರಾಕ್ ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟ ಮಾನಸ ಬಹಳಷ್ಟು ಧಾರವಾಹಿಗಳಲ್ಲಿ ನಟಿಸಿ ಕಿರುತೆರೆಯಲ್ಲೇ ಚಿರಪರಿಚಿತರಾಗಿದ್ದಾರೆ.. ತಾವು ತಾಯಿಯಾಗ್ತಿರುವ ವಿಚಾರವನ್ನ ಫೋಟೋ ಶೂಟ್ ಮಾಡಿಸಿ , ಫೋಟೋ ಶೇರ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.. ಅಂದ್ಹಾಗೆ ಇವರು ಮಹಾದೇವಿ ಧಾರವಾಹಿ ಮೂಲಕ ಹೆಚ್ಚು ಗಮನ ಸೆಳೆದರು.. ದೇವಿ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡರು.. ಮಂಗಳ ಗೌರಿ ಧಾರವಾಹಿಯಲ್ಲಿ ನೆಗೆಟಿವ್ ಶೇಡ್ ನಲ್ಲೂ ಮಿಂಚಿದ್ರು..