ಚಂದವನದ ಹಿರಿಯ ಹಾಸ್ಯನಟ ಇನ್ನಿಲ್ಲ
ಹೃದಯಾಘಾತದಿಂದ ಮಂದೀಪ್ (73) ನಿಧನ
500 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ
ಬೆಂಗಳೂರಿನ ಭೈರಸಂದ್ರದಲ್ಲಿರುವ ನಿವಾಸ
ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ
500 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟ ಮಂದೀಪ್ ರಾಯ್ ಅವರು ವಿಧಿವಶರಾಗಿದ್ದಾರೆ.. ಕಳೆದ ಮಧ್ಯರಾತ್ರಿ 1.45ರ ಸುಮಾರಿಗೆ ಬೆಂಗಳೂರಿನ ಭೈರಸಂದ್ರದಲ್ಲಿರುವ ಅವರ ನಿವಾಸದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಅವರ ನಿಧನದ ಸುದ್ದಿ ತಿಳಿದು ಸ್ಯಾಂಡಲ್ ವುಡ್ ಮಂದಿ ಆಘಾತಗೊಂಡಿದ್ದಾರೆ.. ಮಂದೀಪ್ ಅವರಿಗೆ 73 ವರ್ಷ ವಯಸ್ಸಾಗಿತ್ತು.
ಇಂದು ಬೆಳಗ್ಗೆ 11 ಗಂಟೆಗೆ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಕಳೆದ ಡಿಸೆಂಬರ್ನಲ್ಲಿ ಹೃದಯಾಘಾತವಾಗಿತ್ತು, ಅವರನ್ನು ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆದು ಮರಳಿದ್ದರು..
ಕನ್ನಡದ ಖ್ಯಾತ ನಟರಾದ ಅನಂತ್ ನಾಗ್, ಶಂಕರ್ ನಾಗ್, ರಾಜ್ ಕುಮಾರ್, ವಿಷ್ಣುವರ್ಧನ್ ಸೇರಿ ಅನೇಕ ನಾಯಕನಟರು, ಪ್ರಮುಖ ನಟರ ಜೊತೆ ಮಂದೀಪ್ ರಾಯ್ ಇದುವರೆಗೆ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
Mandeep Roy, sandalwood Actor is no more , saakshatv