Mandya : ಜನರಲ್ಲಿ ಆತಂಕ ಸೃಷ್ಠಿಸಿದ ಗಜಪಡೆ
ಮಂಡ್ಯ : ಜಿಲ್ಲೆಯ ಮಳವಳ್ಳಿ ತಾಲೂಕಿನ ಗುಂಡಾಪುರ ಗೇಟ್ ಬಳಿಯ ಅರಣ್ಯ ಇಲಾಖೆ ಕಚೇರಿ ಆವರಣಕ್ಕೆ ಗಜಪಡೆ ಎಂಟ್ರಿ ಕೊಟ್ಟಿದೆ.
ಗುಂಡಾಪುರದ ಅರಣ್ಯ ಇಲಾಖೆ ಆವರಣದಲ್ಲಿ 5 ಕಾಡಾನೆಗಳು ಬಿಡುಬಿಟ್ಟಿದ್ದು, ಕಾಡಾನೆಗಳ ಹಿಂಡು ಕಂಡು ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಅಲ್ಲದೇ ಜನರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಬಳಿಕ ಬಸವನಬೆಟ್ಟಕ್ಕೆ ಅರಣ್ಯಪ್ರದೇಶಕ್ಕೆ ಪಟಾಕಿ ಸಿಡಿಸಿ, ಪೊಲೀಸ್ ವಾಹನದ ಸೈರನ್ ಹಾಕಿ ಆನೆಗಳನ್ನು ಓಡಿಸಿದ್ದಾರೆ.
ಸುಮಾರು ನೂರಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿಗಳ ಶ್ರಮದಿಂದ ಕೊನೆಗೂ ಆನೆಗಳ ಹಿಂಡನ್ನ ಕಾಡಿಗೆ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.