Mandya | ಟ್ರಯಲ್ ಬ್ಲಾಸ್ಟಿಂಗ್ ವಿರೋಧಿಸಿ ರೈತರ ಗೋ ಬ್ಯಾಕ್ ಚಳುವಳಿ
ಮಂಡ್ಯ : ರೈತರ ವಿರೋಧದ ನಡುವೆಯು ಬೇಬಿ ಬೆಟ್ಟ ಸೇರಿದಂತೆ 5 ಕಡೆ ಟ್ರಯಲ್ ಬ್ಲಾಸ್ಟಿಂಗ್ ನಡೆದಿದ್ದು, ಇದರ ವಿರುದ್ಧ ಗೋ ಬ್ಯಾಕ್ ಚಳುವಳಿಗೆ ನಡೆಸಲು ಕರ್ನಾಟಕ ರಾಜ್ಯ ರೈತಸಂಘ ಮುಂದಾಗಿದೆ.
ಈ ಸಂಬಂದ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಮಾಹಿತಿ ನೀಡಿದ್ದಾರೆ.
2018 ರಲ್ಲಿ ಪ್ರಕೃತಿ ವಿಕೋಪ ನಿರ್ವಹಣಾ ಮಂಡಳಿ ಗಣಿಗಾರಿಕೆ ಮಾಡದಂತೆ ವರದಿ ಕೊಟ್ಟಿದೆ.
ಆ ವರದಿಯಂತೆ KRS ಸುತ್ತಮುತ್ತಲ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧವು ಆಗಿದೆ.
ಆದ್ರೆ ಕಾವೇರಿ ನೀರಾವರಿ ನಿಗಮ ಮುಗಿಬಿದ್ದು ಟ್ರಯಲ್ ಬ್ಲಾಸ್ಟಿಂಗ್ ಗೆ ಮುಂದಾಗಿದೆ.
ನಾಳೆ ಜಾರ್ಖಂಡ್ ಮೂಲದ ವಿಜ್ಞಾನಿಗಳನ್ನ ಕರೆಸುತ್ತಿದ್ದಾರೆ. ಅವರು ಗಣಿಮಾಲೀಕರ ಪರವೇ ವರದಿ ಕೊಡ್ತಾರೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರ ಡ್ಯಾಂ ಉಳಿವಿಗಾಗಿ ಯೋಚನೆ ಮಾಡಬೇಕು.
2 ಕೋಟಿ ಜನರ ಈ ಜಲಾಶಯದಿಂದ ನೀರು ಕುಡಿಯುತ್ತಿದ್ದಾರೆ. ಲಕ್ಷಾಂತರ ರೈತರು ಫಸಲು ಬೆಳೆಯುತ್ತಿದ್ದಾರೆ.
ಕೆ.ಆರ್.ಎಸ್ ಡ್ಯಾಂ ನಮ್ಮ ಜೀವನಾಡಿ, ಹೊಡೆದು ಹೋದ್ರೆ ಕಟ್ಟೋದು ಬಾರಿ ಕಷ್ಟ.
ನಮಗೆ ಯಾವ ಟ್ರಯಲ್ ಬ್ಲಾಸ್ಟಿಂಗ್ ಗು ಬೇಡ. ನಮಗೆ ರಿಯಲ್ ಬ್ಲಾಸ್ಟಿಂಗ್ ಅನ್ನ ನೋಡಿದ್ದೇವೆ.
ಟ್ರಯಲ್ ಬ್ಲಾಸ್ಟಿಂಗ್ ವಿರುದ್ದ 2019 ರಲ್ಲಿ ಗೋ ಬ್ಯಾಕ್ ಚಳುವಳಿ ಮಾಡಿದ್ದೇವು.
ಈ ಬಾರಿಯು ಗೋ ಬ್ಯಾಕ್ ಚಳುವಳಿ ಮಾಡುತ್ತೇವೆ. KRS ನಿಂದ ಟ್ರಯಲ್ ಬ್ಲಾಸ್ಟಿಂಗ್ ಸ್ಥಳಕ್ಕೆ ಬೈಕ್ ರ್ಯಾಲಿ ಹೋಗ್ತೇವೆ.
ಟ್ರಯಲ್ ಬ್ಲಾಸ್ಟಿಂಗ್ ನಿಲ್ಲಿಸಿ, ಪ್ರಕೃತಿ ವಿಕೋಪ ನಿರ್ವಹಣಾ ಮಂಡಳಿ ವರದಿಗೆ ಸ್ಟಿಕ್ ಆನ್ ಆಗುವಂತೆ ಒತ್ತಾಯಿಸುತ್ತೇವೆ ಎಂದು ತಿಳಿಸಿದರು.








